ದಿನ ಭವಿಷ್ಯ: ಈ ರಾಶಿಯವರಿಗೆ ಬಂಧುಗಳಿಂದ ಉಡುಗೊರೆಯ ರೂಪದಲ್ಲಿ ದ್ರವ್ಯಲಾಭ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 11 ಜುಲೈ 2025, 0:29 IST
Last Updated 11 ಜುಲೈ 2025, 0:29 IST
ದಿನ ಭವಿಷ್ಯ
ಮೇಷ
ಯೋಜನೆಗಳ ವೇಗ ಚುರುಕುಗತಿ ಹೊಂದಲಿದೆ. ಉದ್ಯೋಗದಲ್ಲಿದ್ದಂಥ ಅಭದ್ರತೆಯು ನಿವಾರಣೆಯಾಗಿ ಶಾಶ್ವತ ನೆಲೆ ಸಿಕ್ಕಿದಂತೆ ಆಗುವುದು. ಬಂಡವಾಳ ಹೂಡಿಕೆಯಲ್ಲಿ ಯೋಚನೆ ಅಗತ್ಯವೆನಿಸಲಿದೆ.
ವೃಷಭ
ಚಿನ್ನಾಭರಣ ಖರೀದಿಯ ಆಸೆಗೆ ಕಾಲಕೂಡಿಬಂದಂತೆ ಆಗಲಿದೆ. ಉನ್ನತ ಮಟ್ಟದ ಸ್ಥಾನ ಹೊಂದಲು ಮತ್ತು ಜವಾಬ್ದಾರಿಯುತ ವ್ಯಕ್ತಿಯಾಗಿ ರೂಪುಗೊಳ್ಳಲು ದೈನಂದಿನ ಬದುಕಿನಲ್ಲಿ ಲೆಕ್ಕಾಚಾರವಿರಲಿ.
ಮಿಥುನ
ಕಳೆದುಹೋದ ವಸ್ತುವನ್ನು ಆಸೆ ಪಡುವುದು, ಸಮಯದ ಬಗ್ಗೆ ಪುನಃ ಯೋಚಿಸುವುದು ಪ್ರಯೋಜನಕಾರಿ ಅಲ್ಲ. ಪುತ್ರನಿಗೆ ಎದುರಾದ ಸಮಸ್ಯೆಗೆ ಸಾಂತ್ವನ ಹೇಳುವುದು, ಸಹಾಯ ಮಾಡುವುದು ಉತ್ತಮ.
ಕರ್ಕಾಟಕ
ಸಮಸ್ಯೆಯನ್ನು ಬಗೆಹರಿಸಿಕೊಂಡು ಮುಂದಿನ ಹೆಜ್ಜೆ ಹಾಕಿ. ಕಾರ್ಯನಿಮಿತ್ತ ಅತ್ತೆ-ಸೊಸೆಯಲ್ಲಿ ಭಿನ್ನಾಭಿಪ್ರಾಯ ತೋರಿಬಂದರೂ ತಾಳ್ಮೆ, ಸಮಾಧಾನ ಇರಲಿ. ಮಕ್ಕಳ ವರ್ತನೆಯು ಮನಸ್ಸಿಗೆ ಸಂತೋಷ ತರಲಿದೆ.
ಸಿಂಹ
ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವಿಕೆಯಿಂದ ಮಾನಸಿಕ ಶಾಂತಿ ಹೆಚ್ಚಲಿದೆ. ವಿದ್ಯಾರ್ಥಿಸಮೂಹಕ್ಕೆ ಅವಕಾಶಗಳು ಲಭಿಸಲಿವೆ. ಸಂಗೀತಗಾರರಿಗೆ, ಕ್ರೀಡಾಪಟುಗಳಿಗೆ ಅಭ್ಯಾಸದ ಕೊರತೆ ಕಾಡುವುದು.
ಕನ್ಯಾ
ಪರಿಶ್ರಮದ ಜತೆ ಅಧಿಕ ಸಮಯ ವೃತ್ತಿಯ ಕೆಲಸಕ್ಕೆ ಮೀಸಲಿಡಿ. ಹೊಸ ಕಾರ್ಯಗಳ ಬಗ್ಗೆ ಮನೆಯವರೊಂದಿಗೆ ಸುಧೀರ್ಘ ಮಾತುಕತೆ ನಡೆಸಿ ನಂತರದಲ್ಲಿ ತೀರ್ಮಾನವನ್ನು ತೆಗೆದುಕೊಳ್ಳಿರಿ. ಶತ್ರು ಬಾಧೆ ನಿವಾರಣೆ ಆಗಲಿದೆ.
ತುಲಾ
ಆಲಂಕಾರಿಕ ವಸ್ತುಗಳ ಮಾರಾಟದ ಉದ್ಯೋಗದವರು ನೆಮ್ಮದಿ ಕಾಣಬಹುದು. ಆಸೆ– ಆಕಾಂಕ್ಷೆಯನ್ನು ಸಾಧ್ಯವಾದಷ್ಟು ನಿಯಂತ್ರಿಸಿಕೊಂಡಲ್ಲಿ, ಋಣ ಮುಕ್ತರಾಗುವಂಥ ಅವಕಾಶ ಒದಗಲಿದೆ.
ವೃಶ್ಚಿಕ
ಎಂಜಿನಿಯರ್ ಉದ್ಯೋಗ ರಂಗದವರ ತ್ವರಿತ ಬೆಳವಣಿಗೆಯಿಂದ ಉನ್ನತಾಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವ ಸಮಯ ಇದಾಗಲಿದೆ. ಉದ್ಯೋಗ ದೊರೆತು ಸಂತೋಷ. ಶ್ರೀರಾಮನನ್ನು ಭಜಿಸಿ, ಶುಭವಾಗುತ್ತದೆ.
ಧನು
ತಂದೆ-ತಾಯಿಯ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಅನಿವಾರ್ಯ. ಸಂಗೀತ ಸಾಹಿತ್ಯದಂಥ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳಿಗೆ ಹಿರಿಯ ಕಲಾವಿದರ ಭೇಟಿ ಮಾಡುವ ಅವಕಾಶವಿದೆ.
ಮಕರ
ಉದ್ವೇಗವನ್ನು ಶಾಂತಗೊಳಿಸಲು ಮನಸ್ಸಿಗೆ ಸಮಾಧಾನವಾಗುವಂಥ ಸಂಗೀತವನ್ನು ಕೇಳಿ. ಗಣಕಯಂತ್ರದ ಮುಂದೆ ಕೂತು ಕೆಲಸ ನಡೆಸುವವರು ನಿಮ್ಮ ಕಣ್ಣಿನ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ.
ಕುಂಭ
ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯ ದೂರಮಾಡಿಕೊಳ್ಳಲು ಬಿಡುವಿಲ್ಲದ ಸಮಯದಲ್ಲಿ ಸಮಯ ನೀಡುವ ಪ್ರಯತ್ನ ಮಾಡಿ. ಬಂಧುಗಳಿಂದ ಉಡುಗೊರೆಯ ರೂಪದಲ್ಲಿ ದ್ರವ್ಯಲಾಭ.
ಮೀನ
ಇಂದಿನ ದಿನದಲ್ಲಿ ವೃತ್ತಿಯ ವಿಷಯವಾಗಿ ವಿಶೇಷ ವ್ಯಕ್ತಿಯೊಬ್ಬರು ಮುಖ್ಯಪಾತ್ರ ವಹಿಸಲಿದ್ದಾರೆ. ಆಫೀಸಿನ ಕೆಲಸದ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲೇ ಬೇಕಾಗುವ ಸಂದರ್ಭ ಎದುರಾಗುವುದು