ದಿನ ಭವಿಷ್ಯ: ಈ ರಾಶಿಯವರಿಗೆ ಇತರರನ್ನು ನಂಬದಿರುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ
ಗುರುವಾರ – ಸೆಪ್ಟೆಂಬರ್ 12, 2024
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 11 ಸೆಪ್ಟೆಂಬರ್ 2024, 23:30 IST
Last Updated 11 ಸೆಪ್ಟೆಂಬರ್ 2024, 23:30 IST
ಮೇಷ
ಮನೆಯಲ್ಲಿನ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕಾಗಿ ಸರಕು ಸಾಮಾನುಗಳನ್ನು ಖರೀದಿಸುವಿರಿ. ಸರ್ಕಾರಿ ದಾಖಲೆಗಳಿಗೆ ಸಂಬಂಧಿಸಿದ ಬಾಕಿ ಕೆಲಸಗಳನ್ನು ಬೇಗ ಮುಗಿಸಿಕೊಳ್ಳುವುದು ಸೂಕ್ತ.
ವೃಷಭ
ಎಷ್ಟೇ ಪರಿಶ್ರಮ ಹಾಕಿದರೂ ರಾಜಕೀಯ ಭವಿಷ್ಯ ಅನುಕೂಲಕರ ವಾಗಿರುವುದಿಲ್ಲ. ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿದೆ. ಇತರರನ್ನು ನಂಬದಿರುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ.
ಮಿಥುನ
ಅನಗತ್ಯ ವಸ್ತುಗಳಿಗೆ ಹೆಚ್ಚಿನ ಹಣ ವ್ಯಯಿಸುವುದರಿಂದ ಕುಟುಂಬ ಸದಸ್ಯರು ಕೋಪಗೊಳ್ಳುವರು. ಆದಾಗ್ಯೂ, ಖರ್ಚು-ವೆಚ್ಚಗಳನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗುವಿರಿ. ಷೇರು ಖರೀದಿಸುವಾಗ ಎಚ್ಚರವಹಿಸಿ.
ಕರ್ಕಾಟಕ
ವೃತ್ತಿರಂಗದಲ್ಲಿ ಅನ್ಯರ ಮಾತಿಗೆ ಕಿವಿಗೊಡದೆ, ಸ್ವ–ಇಚ್ಛೆಯಂತೆ ಮುಂದುವರಿಯಿರಿ. ಯಂತ್ರೋಪಕರಣಗಳ ಮಾರಾಟದಿಂದ ಅಧಿಕ ಲಾಭವಾಗುವುದು. ಚಿನ್ನ ಬೆಳ್ಳಿ ವಸ್ತುಗಳನ್ನು ಖರೀದಿ ಮಾಡುವಿರಿ.
ಸಿಂಹ
ಮನೆ ಅಥವಾ ಕಟ್ಟಡ ನಿರ್ಮಾಣವು ಯಾವುದೇ ತೊಂದರೆಗಳಿಲ್ಲದೆ ಮುಂದುವರಿಯಲಿದೆ. ಕುಟುಂಬದವರೊಡನೆ ಮನರಂಜನೆಗಾಗಿ ಸಮಯ ಮೀಸಲಿಡಿ. ಅಧಿಕಾರಿಗಳ ಮಾತಿಗೆ ವಿಧೇಯರಾಗಿ ನಡೆದುಕೊಳ್ಳಿ.
ಕನ್ಯಾ
ರಕ್ಷಣಾ ವಲಯದಲ್ಲಿ ಕಾರ್ಯ ನಿರ್ವಹಿಸುವವರಿಂದ ಕರ್ತವ್ಯ ಲೋಪಗಳು ಸಂಭವಿಸಬಹುದು. ಸಂಜೆ ವೇಳೆಗೆ ತಾಯಿಯ ತವರು ಮನೆಯ ಕಡೆಯಿಂದ ಸಿಹಿ ಸುದ್ದಿ ಬರಲಿದೆ. ಶ್ರೀ ವಿನಾಯಕನ ಸ್ತುತಿ ಮಾಡಿ.
ತುಲಾ
ಐಷಾರಾಮಿ ಖರ್ಚು ವೆಚ್ಚಗಳ ಬಗ್ಗೆ ಜಾಗ್ರತೆ ವಹಿಸುವುದು ಅನಿವಾರ್ಯ. ವಿವಾಹ ವಯಸ್ಕ ಯೋಗ್ಯರಿಗೆ ನೂತನ ಸಂಬಂಧಗಳು ಕಂಡು ಬರಲಿವೆ. ಸಾಫ್ಟ್‌ವೇರ್ ಹಾಗೂ ತಾಂತ್ರಿಕ ವಿದ್ಯಾರ್ಥಿಗಳಿಗೆ ನೌಕರಿ ಸಿಗಲಿದೆ.
ವೃಶ್ಚಿಕ
ಪ್ರೀತಿ ಪಾತ್ರರಿಗೆ ವಿಶೇಷ ಉಡುಗೊರೆ ನೀಡುವ ಉದ್ದೇಶದಿಂದ ಖರೀದಿ ಮಾಡುವಿರಿ. ಜನರ ಭಾವನೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ. ನೂತನ ನೌಕರಿ ಹುಡುಕಲು ಪ್ರಯತ್ನಿಸುವಿರಿ.
ಧನು
ದಾಕ್ಷಿಣ್ಯ ಪ್ರವೃತ್ತಿಗೆ ಒಳಗಾಗದಂತೆ ನಿಸ್ಸಂಕೋಚತೆಯಿಂದ ಇರಬೇಕಾಗು ತ್ತದೆ. ಸಣ್ಣ ವಯಸ್ಸಿನ ಮಕ್ಕಳ ಆಟೋಟಗಳನ್ನು ನೋಡಿ ಕಳೆದು ಹೋದ ದಿನಗಳನ್ನು ನೆನಪಿಸಿಕೊಳ್ಳುವಿರಿ. ಕ್ರೀಡಾಪಟುಗಳಿಗೆ ಪ್ರೋತ್ಸಾಹ ಸಿಗಲಿದೆ.
ಮಕರ
ಕಾರ್ಯದೊತ್ತಡದ ನಡುವೆ ಕೌಟುಂಬಿಕ ಸಮಸ್ಯೆಗಳನ್ನು ಉಪೇಕ್ಷಿಸದಿರಿ. ತಂದೆ-ತಾಯಿಯ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಅನಿವಾರ್ಯ. ಪಾಲುದಾರಿಕೆಯ ವ್ಯವಹಾರದಲ್ಲಿ ನಷ್ಟ ಸಂಭವಿಸಬಹುದು.
ಕುಂಭ
ವ್ಯವಹಾರದಲ್ಲಿ ಆತ್ಮೀಯರ ಸಲಹೆ ಸ್ವೀಕರಿಸಿದ ಪರಿಣಾಮ ನಷ್ಟ ಉಂಟಾಗಬಹುದು. ಮನೆಯಲ್ಲಿ ಬಾಕಿ ಇರುವ ಗೃಹಕೃತ್ಯಗಳನ್ನು ಪೂರೈಸುವ ಪ್ರಯತ್ನ ಮಾಡುವಿರಿ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ.
ಮೀನ
ಒಂಟಿತನ ಹೋಗಲಾಡಿಸಿಕೊಳ್ಳಲು ಕೆಲಸಗಳತ್ತ ಮನಸ್ಸು ಹರಿಸುವಿರಿ. ಸಾಂಸಾರಿಕ ಸಂಬಂಧಗಳನ್ನು ಉಳಿಸಿ ಕಾಪಾಡುವುದರಲ್ಲಿ ಜಯವಿರುತ್ತದೆ. ಕುಟುಂಬದ ಉನ್ನತ ಜವಾಬ್ದಾರಿ ವಹಿಸಿಕೊಳ್ಳಬೇಕಾಗುವುದು.