ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಅನವಶ್ಯಕ ಮಾತಿನಿಂದ ಉದ್ವೇಗ ಉಂಟಾಗಬಹುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 28 ಜನವರಿ 2024, 23:30 IST
Last Updated 28 ಜನವರಿ 2024, 23:30 IST
   
ಮೇಷ
  • ಓದು ಅಥವಾ ಉದ್ಯೋಗ ಆಯ್ಕೆ ವಿಚಾರದಲ್ಲಿ ಸ್ನೇಹಿತರಿಂದ ಸೂಕ್ತ ಸಲಹೆ ದೊರೆಯಲಿದೆ. ಚಿಲ್ಲರೆ ಮಾರಾಟಗಾರರಿಗೆ ಮತ್ತು ಹೂವು, ಹಣ್ಣು ಬೆಳೆಗಾರರಿಗೆ ಶುಭ ದಿನ. ಹೊಸ ಉದ್ಯೋಗದ ಬಗ್ಗೆ ಭಯ ಬೇಡ.
  • ವೃಷಭ
  • ವೃತ್ತಿಯಲ್ಲಿ ಸ್ಪರ್ಧಾತ್ಮಕ ಪೈಪೋಟಿಯಲ್ಲಿ ಸಿಕ್ಕ ಗೆಲುವಿನಿಂದ ಹೆಚ್ಚಿನ ಸಂತೋಷ ಮತ್ತು ತೃಪ್ತಿ ಉಂಟಾಗಲಿದೆ. ಸತ್ಯವಾದ ಸಂಗತಿಗಳು ತಿಳಿಯುವುದರಿಂದ ದುಃಖಗಳು ದೂರಾಗಲಿದೆ. ಕೆಲಸದಲ್ಲಿ ಬಡ್ತಿ ಸಿಗಲಿದೆ.
  • ಮಿಥುನ
  • ಕೆಲಸಗಳಿಗೆ ಬೇಕಾದ ಸೂಕ್ತ ವ್ಯಕ್ತಿಯನ್ನು ಹುಡುಕುವಲ್ಲಿ ವಿಫಲರಾಗುವ ಮುನ್ಸೂಚನೆ ಸಿಗುವುದು. ನೃತ್ಯಾಭ್ಯಾಸ ಮುಂದುವರಿಸುವಂತೆ ಒತ್ತಾಯ ಹೆಚ್ಚಲಿದೆ. ದಂತ ವೈದ್ಯರಿಗೆ ಬೇಡಿಕೆ ಹೆಚ್ಚಾಗುತ್ತದೆ.
  • ಕರ್ಕಾಟಕ
  • ಪತ್ರಿಕಾ ವರದಿಗಾರರಿಗೆ ವಿಶೇಷ ದಿನವಾಗಿ ಜೀವನದಲ್ಲಿ ಸದಾಕಾಲ ನೆನಪಿರುವಂತೆ ಆಗಬಹುದು. ನಿಮ್ಮ ಸಲಹೆ ಸೂಚನೆಗಳನ್ನು ಒಪ್ಪುವಂತೆ ವ್ಯಕ್ತಿಯ ಮನಃ ಪರಿವರ್ತನೆ ಮಾಡುವಲ್ಲಿ ಸಫಲರಾಗುತ್ತೀರಿ.
  • ಸಿಂಹ
  • ಕುಟುಂಬ ನಿರ್ವಹಣೆಯಲ್ಲಿ ವಿಪರೀತ ಖರ್ಚು ಕಾಣಿಸಲಿದೆ. ಆದಾಯಕ್ಕೆ ಕೊರತೆ ಇರದು. ವೃತ್ತಿಪರ ಗಮನಹರಿಸಿದಲ್ಲಿ ಬಹುನಿರೀಕ್ಷಿತವಾದ ಬೆಳವಣಿಗೆಗಳು ಇರುತ್ತದೆ. ನಿಮ್ಮ ಬಯಕೆಗಳು ಈಡೇರುವುದು.
  • ಕನ್ಯಾ
  • ಮೇಲಧಿಕಾರಿಗಳು ನಿಮ್ಮೊಂದಿಗಿದ್ದಾರೆ ಎಂಬ ಭರವಸೆಯಿಂದ ಕೆಲಸವನ್ನು ಮಾಡದಿರಿ. ಆಶಾ ದಾಯಕ ಭಾವನೆಗಳಿಂದ ನೆಮ್ಮದಿ, ಬೆಳವಣಿಗೆಯು ಗೋಚರಕ್ಕೆ ಬರಲಿದೆ. ಗುತ್ತಿಗೆದಾರರಿಗೆ ಹೆಚ್ಚಿನ ಕೆಲಸ ಇರಲಿದೆ.
  • ತುಲಾ
  • ಉನ್ನತ ಅಧಿಕಾರಿಗಳ ದಿಢೀರ್ ಭೇಟಿಯಿಂದ ಕೆಲಸ ಕಾರ್ಯಗಳು ಏರುಪೇರಾಗುವುದು. ಸೋದರರೊಂದಿಗಿರುವ ವಿರಸ ಕಡಿಮೆ ಮಾಡಿಕೊಳ್ಳಿ. ಮನೆಯಲ್ಲಿ ಅನುಕೂಲಕರ ಸನ್ನಿವೇಶ ನಿರ್ಮಾಣವಾಗಲಿದೆ.
  • ವೃಶ್ಚಿಕ
  • ಸ್ವಂತ ಉದ್ಯಮದಲ್ಲಿರುವವರು ತಮ್ಮ ಕಾರ್ಯಕ್ಷೇತ್ರವನ್ನು ಅಭಿವೃದ್ಧಿ ಪಡಿಸಿಕೊಳ್ಳುವುದರಲ್ಲಿ ಬಹಳ ಉತ್ಸಾಹ ತೋರಿ ಸಫಲತೆಯನ್ನು ಹೊಂದಬಹುದು. ಆಹಾರ ಪದ್ಧತಿ ಬದಲಿಸಿಕೊಳ್ಳುವುದು ಸರಿ ಎನಿಸುವುದು.
  • ಧನು
  • ಕಾರ್ಯಕ್ಷೇತ್ರದಲ್ಲಿ ಉಂಟಾದ ಸನ್ನಿವೇಶವನ್ನು ಅನುಕೂಲಕ್ಕೆ ತಕ್ಕಂತೆ ಬದಲಾಯಿಕೊಳ್ಳಿ. ಸಮಯವ್ಯರ್ಥ ಮಾಡದೆ ಕೆಲಸ ಪೂರ್ಣಗೊಳಿಸಿ. ಅನವಶ್ಯಕ ಮಾತಿನಿಂದ ಉದ್ವೇಗ ಉಂಟಾಗಬಹುದು.
  • ಮಕರ
  • ಈ ದಿನ ಜರುಗಲಿರುವ ಸಂಗತಿಯೊಂದು ಗಾಢ ಪರಿಣಾಮ ಬೀರಿ ವೃತ್ತಿಗೆ ಸಂಬಂಧಿಸಿದ ವಿಷಯದಲ್ಲಿ ನಿರ್ಧಾರ ಕೈಗೊಳ್ಳಲು ಸಹಾಯವಾಗಲಿದೆ. ಹಣಕ್ಕಿಂತ ಸಂಬಂಧ ಮುಖ್ಯವೆಂಬುವುದನ್ನು ಮರೆಯದಿರಿ.
  • ಕುಂಭ
  • ರಾಜಕೀಯ ವ್ಯಕ್ತಿಗಳಿಗೆ ಪ್ರಚಾರದ ನಿಮಿತ್ತ ದೂರ ಪ್ರಯಾಣವನ್ನು ಕೈಗೊಳ್ಳಬೇಕಾಗಲಿದೆ. ಅರ್ಹತೆ ಹೊಂದಿದವರಿಗೆ ಹೆಸರಾಂತ ಶಿಕ್ಷಣ ಸಂಸ್ಥೆಯಲ್ಲಿ ಬಹಳ ಸುಲಭವಾಗಿ ಅಧ್ಯಾಪಕ ವೃತ್ತಿ ದೊರೆಯುವುದು.
  • ಮೀನ
  • ಉದಾರ ಮನೋಭಾವದಿಂದ ಇತರರಿಗೆ ಸಹಾಯ ಮಾಡಿದ ಫಲ ನಿಮಗೆ ಅನುಭವಕ್ಕೆ ಬರಲಿದೆ. ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದ ಶುಭಫಲವನ್ನು ಅನುಭವಿಸುವಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.