ADVERTISEMENT

ದಿನ ಭವಿಷ್ಯ: ಈ ರಾಶಿಯವರ ಹಣಕಾಸಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರೆಯಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 16 ಜೂನ್ 2024, 23:30 IST
Last Updated 16 ಜೂನ್ 2024, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಪದವಿ ವಿದ್ಯಾರ್ಥಿಗಳ ಅತಿರೇಕದ ವರ್ತನೆಯು ಹಲವು ಬಾರಿ ಶಿಕ್ಷಕರಿಂದ ಗಮನಿಸಲ್ಪಟ್ಟದ್ದರಿಂದ ಕಠಿಣ ಕ್ರಮ ಕೈಗೊಳ್ಳಬಹುದು. ಹವ್ಯಾಸಿ ಬರಹಗಾರರಿಗೆ ಖ್ಯಾತಿ ಪಡೆಯಲು ಉತ್ತಮ ವೇದಿಕೆ ದೊರಕುವುದು.
  • ವೃಷಭ
  • ರಾಜಕೀಯ ವ್ಯಕ್ತಿಗಳಿಗೆ ನಂಬಿಕೆ ದ್ರೋಹ ಅಥವಾ ಅಪಪ್ರಚಾರದಂಥ ಸಮಸ್ಯೆಗಳು ಎದುರಾಗಬಹುದು. ಬಿಸಿನೆಸ್ ಸಂಬಂಧ ಬ್ಯಾಂಕ್ ಅಧಿಕಾರಿಗಳ ಜತೆ ತಕ್ಷಣದಲ್ಲಿ ಮಾತುಕತೆ ನಡೆಸಬೇಕಾದೀತು.
  • ಮಿಥುನ
  • ಸಂಗಾತಿಯ ಮನಸ್ಸಿನ ಮಾತುಗಳನ್ನು ಅರಿತು ಅದನ್ನು ಈಡೇರಿಸುವ ಸಂಕಲ್ಪವನ್ನು ಮಾಡುವಿರಿ. ಅಸಾಧಾರಣ ರೀತಿಯಿಂದ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುತ್ತೀರಿ. ಆರೋಗ್ಯದಲ್ಲಿ ವ್ಯತ್ಯಯ ಕಾಣಲಿದೆ.
  • ಕರ್ಕಾಟಕ
  • ವಾದ ವಿವಾದಗಳಿಂದಾಗಿ ಸಂಬಂಧದಲ್ಲಿ ಉಂಟಾದ ಒಡಕುಗಳು ಸಮಾಧಾನದ ಮಾತುಗಳಿಂದಾಗಿ ಪರಿಹಾರವಾಗುತ್ತದೆ. ಹಣಕಾಸಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರೆಯಲಿದೆ.
  • ಸಿಂಹ
  • ಮನೆಯಲ್ಲಿನ ಮಂಗಳ ಕಾರ್ಯಕ್ರಮಕ್ಕೆ ಆಪ್ತರ ಸಹಾಯ ನೀವಂದುಕೊಂಡ ಮಟ್ಟಕ್ಕೆ ದೊರೆಯದೆ ಇದ್ದರೂ ಉತ್ತಮವಾಗಿ ಮಾಡುವಿರಿ. ವಿದ್ವಾಂಸರ ಎದುರು ಉಚಿತವಾದ ಮಾತನಾಡಿ ಪ್ರಶಂಸೆಗೆ ಒಳಗಾಗುವಿರಿ.
  • ಕನ್ಯಾ
  • ಕೆಲಸಗಳನ್ನು ಸಾಧಿಸಿಕೊಳ್ಳಲೇ ಬೇಕಿದ್ದರೆ ಅವಿರತ ಶ್ರಮ ಅಗತ್ಯ ಮತ್ತು ಅನಿವಾರ್ಯವಾಗುವುದು. ನಿಮ್ಮನ್ನು ನೀವೇ ವಿಮರ್ಶಿಕೊಂಡರೆ ತಪ್ಪುಗಳ ಅರಿವಾಗುವುದು.
  • ತುಲಾ
  • ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಇಂದು ಆಪತ್ತು ಉಂಟಾದಾಗ ಹಳೆಯ ಹರಕೆಗಳ ನೆನಪು ಬರಬಹುದು. ಆಹಾರ ಪದಾರ್ಥಗಳ ಅದರಲ್ಲೂ ಸಿಹಿ ತಿಂಡಿಗಳ ಉತ್ಪಾದನೆಯಿಂದ ಲಾಭ ಗಳಿಸುವಿರಿ.
  • ವೃಶ್ಚಿಕ
  • ಖರೀದಿಯಲ್ಲಿ ಮೋಸ ಹೋಗುವ ಲಕ್ಷಣವಿರುವುದರಿಂದ ಹೆಚ್ಚಿನ ಗಮನವಿರಲಿ. ಉತ್ತಮ ಹಂತದಲ್ಲಿರುವ ಕಟ್ಟಡ ನಿರ್ಮಾಣವನ್ನು ಅನಿವಾರ್ಯ ಕಾರಣಗಳಿಂದ ನಿಲ್ಲಿಸುವಿರಿ. ವಾತ ಸಂಬಂಧಿ ಕಾಯಿಲೆಗಳು ಆಗಬಹುದು.
  • ಧನು
  • ಮನೆಯಿಂದ ದೂರ ಇರುವ ಮಕ್ಕಳ ವರ್ತನೆಗಳು ಇಂದು ಪದೇ ಪದೇ ನೆನಪಾಗುತ್ತದೆ. ಕೆಲಸಗಳು ಸುಲಭವಾಗಿಸಲು ಸ್ನೇಹಿತರೊಬ್ಬರು ನೆರವಾಗಲಿದ್ದಾರೆ. ಸೋಲನ್ನು ಒಪ್ಪಿಕೊಳ್ಳುವ ಮನಸ್ಥಿತಿಯನ್ನು ಬಿಟ್ಟುಬಿಡಿ.
  • ಮಕರ
  • ಮನರಂಜನೆಗಾಗಿ ತಮಾಷೆಯ ಮಾತುಗಳನ್ನಾಡುವಾಗ ಗುಪ್ತವಾದ ಸಂಗತಿಗಳು ಬಯಲಾಗಬಹುದು. ಕೆಲವರು ನಡೆಸುತ್ತಿರುವ ಕಾನೂನುಬಾಹಿರ ವಿಚಾರಗಳನ್ನು ಬಯಲು ಮಾಡುವಿರಿ.
  • ಕುಂಭ
  • ಹಿಂದಿನ ದಿನದ ವಿಶೇಷ ಕಾರ್ಯಕ್ರಮದಲ್ಲಿ ಮಾಡಿದ ಭೋಜನವು ಅಡ್ಡಪರಿಣಾಮವನ್ನು ತೋರಿಸುವ ಸಾಧ್ಯತೆ ಇದೆ. ಗಣಿತಜ್ಞರಿಗೆ ಹಾಗು ಸಂಗೀತಗಾರರಿಗೆ ಪ್ರತಿಭಾ ಪ್ರದರ್ಶನಕ್ಕೆ ಅವಕಾಶಗಳು ದೊರೆಯುವುದು.
  • ಮೀನ
  • ವಿವಾಹದ ವಿಚಾರದಲ್ಲಿ ಕೆಲವೊಂದು ವಿಷಯಗಳ ಬಗ್ಗೆ ನಿಷ್ಠೂರವಾದ ತೀರ್ಮಾನ ತೆಗೆದುಕೊಳ್ಳದಿದ್ದರೆ ಪಶ್ಚಾತಾಪ ಪಡಬೇಕಾದೀತು. ನಿರುದ್ಯೋಗಿಗಳಿಗೆ ಹಂಗಾಮಿ ನೌಕರಿ ದೊರೆಯುವ ಮಾರ್ಗ ಸಿಗಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.