ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ರಾಜಕಾರಣಿಗಳ ಜತೆ ಬೆಳೆಸಿಕೊಂಡ ಒಡನಾಟದಿಂದ ಅಪಾಯ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 13 ಏಪ್ರಿಲ್ 2024, 23:30 IST
Last Updated 13 ಏಪ್ರಿಲ್ 2024, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ವಿದ್ಯಾರ್ಥಿಗಳಿಗೆ ಬಹುಭಾಷಾ ಕಲಿಕೆಯಂಥ ಅನೇಕ ಅವಕಾಶಗಳು ಒದಗಿ ಬರುವವು. ಸಿಮೆಂಟ್ ಕಾರ್ಖಾನೆಯ ಉದ್ಯೋಗಿಗಳಿಗೆ ಉಸಿರಾಟ ಸಮಸ್ಯೆಯಂಥ ತೊಂದರೆಗಳು ಎದುರಾಗಬಹುದು.
  • ವೃಷಭ
  • ಅಧಿಕ ಜವಾಬ್ದಾರಿ ಅಥವಾ ಒತ್ತಡ ತರುವಂತಹ ಕೆಲಸಗಳಿಂದ ದೂರವಿರಿ. ಕ್ರೀಡಾಪಟುಗಳು ಮತ್ತು ಕಲಾವಿದರಿಗೆ ಸರ್ಕಾರದಿಂದ ಪ್ರಶಸ್ತಿ ಮತ್ತು ಸನ್ಮಾನಗಳು ಲಭಿಸಬಹುದು. ಆರೋಗ್ಯದಲ್ಲಿ ಎಚ್ಚರಿಕೆ ತೀರ ಅಗತ್ಯ.
  • ಮಿಥುನ
  • ಯಾವುದೇ ರೀತಿಯ ವಾಗ್ದಾನಗಳನ್ನು ಮಾಡುವಾಗ ಹಲವು ಬಾರಿ ಯೊಚಿಸಿ, ಉಳಿಸಿಕೊಳ್ಳಲು ಕಷ್ಟವಾಗುವಂಥ ಮಾತುಗಳನ್ನು ಕೊಡದಿರಿ. ಮನಸ್ಸಿನ ಉದ್ವೇಗ ಕಡಿಮೆ ಮಾಡಿಕೊಳ್ಳಲು ದೇವರ ಧ್ಯಾನದಲ್ಲಿ ತೊಡಗುವಿರಿ.
  • ಕರ್ಕಾಟಕ
  • ಈ ದಿನದ ಪ್ರಮುಖ ಕೆಲಸ ಸಂಗಡಿಗರ ಸಹಾಯದಿಂದ ಪೂರ್ಣಗೊಳ್ಳುವುದು. ಕುಟುಂಬದವರೊಂದಿಗೆ ಸಂತೋಷದಿಂದ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಿರಿ. ಕಾಗದ ಪತ್ರಗಳ ನಿರ್ವಹಣೆಯಲ್ಲಿ ಎಚ್ಚರವಹಿಸಿ.
  • ಸಿಂಹ
  • ಒತ್ತಾಯ ಪೂರ್ವಕವಾಗಿ ಮಾಡುತ್ತಿರುವ ಕೆಲಸ ಕಾರ್ಯಗಳನ್ನು ಬಿಡಬೇಕು ಎನ್ನುವಂಥ ಮನೋಭಾವ ಬರುವ ಸಾಧ್ಯತೆಗಳಿವೆ. ರಾಜಕಾರಣಿಗಳ ಜತೆ ಅಧಿಕವಾಗಿ ಬೆಳೆಸಿಕೊಂಡ ಒಡನಾಟ ಅಪಾಯ ತಂದೊಡ್ಡಲಿದೆ.
  • ಕನ್ಯಾ
  • ಮಾತುಗಾರಿಕೆಯ ಸಾಮರ್ಥ್ಯದಿಂದ ಇತರರನ್ನು ಗೆಲ್ಲುವ ಸಾಮರ್ಥ್ಯ ನಿಮ್ಮಲ್ಲಿದೆ. ಅದನ್ನು ನೀವು ಬಳಸಿಕೊಳ್ಳಬಹುದು. ಬಂಧುಗಳು ಹಾಗು ಮಿತ್ರರೊಡನೆ ಸಂತೋಷದ ಕ್ಷಣಗಳನ್ನು ಇಂದು ಹಂಚಿಕೊಳ್ಳಲಿದ್ದೀರಿ.
  • ತುಲಾ
  • ಹಲವು ವರ್ಷಗಳ ಹಿಂದೆಯೇ ಸಂಕಲ್ಪಿಸಿದ ಕೆಲಸ ಒಂದು ದೈವಾನುಗ್ರಹದಿಂದ ಆರಂಭವಾಯಿತೆಂದು ಸಂತೋಷ ಪಡುವಂತಾಗಲಿದೆ. ಯಾವ ಹೊಸ ಜನರು ಇಂದು ಪರಿಚಯವಾದರೂ ಪರೀಕ್ಷಿಸದೇ ನಂಬಬೇಡಿ.
  • ವೃಶ್ಚಿಕ
  • ವಾಣಿಜ್ಯ ರಂಗದಲ್ಲಿ ಹೊಸ ತಿರುವು ವಾಣಿಜ್ಯ ಸಂಕೀರ್ಣ ನಿರ್ಮಿಸಲು ಪರವಾನಗಿ ಕೇಳಿದವರಿಗೆ ಶುಭ ಸಂಕೇತದಿಂದ ಸಿಗುವುದು. ಅಧಿಕಾರಿ ವರ್ಗದವರಿಂದ ನಿಮ್ಮ ಸಾಮರ್ಥ್ಯಕ್ಕೆ ಅನುಗುಣಧ ಪ್ರಶಂಸೆ ಕೇಳಲ್ಪಡುವಿರಿ.
  • ಧನು
  • ವೈವಾಹಿಕ ಜೀವನದಲ್ಲಿ ನಿಮ್ಮ ನಿಲುವುಗಳನ್ನು ಬದಲಾಯಿಸಿಕೊಳ್ಳಬೇಕೆಂದು ತೀರ್ಮಾನಿಸಿದ್ದರೂ, ಅದು ಅಷ್ಟು ಸುಲಭವಾಗಿ ನಡೆಯುವುದಿಲ್ಲ. ಕಾನೂನು ಪಂಡಿತರಿಗೆ ಹೆಚ್ಚಿನ ಬೇಡಿಕೆ ಇದ್ದು ನಿಮ್ಮ ಆದಾಯ ಹೆಚ್ಚುತ್ತದೆ.
  • ಮಕರ
  • ಹೆಂಡತಿಯ ಆರೈಕೆ ವಿಷಯವಾಗಿ ತಾಯಿ ಅಥವಾ ಅತ್ತೆಯವರನ್ನು ಕರೆ ತರುವಂತೆ ಆಗುವುದು. ವಸ್ತ್ರ ವಿನ್ಯಾಸಕಾರರಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ಹಣದ ಹೆಚ್ಚುವರಿ ಅಗತ್ಯದಿಂದ ಧೃತಿಗೆಡಬಹುದು.
  • ಕುಂಭ
  • ಹೆಚ್ಚಿನ ಒಡನಾಟ ಹೊಂದಿರುವ ವ್ಯಕ್ತಿಗಳ ಹರಿತವಾದ ನುಡಿಗಳು ಮನಸ್ಸಿಗೆ ಬೆಸರವನ್ನು ಉಂಟುಮಾಡಬಹುದು. ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡಲ್ಲಿ ನಿಮ್ಮ ಹೊಸ ಯೋಜನೆಗಳು ಜಾರಿಯಾಗಲಿದೆ.
  • ಮೀನ
  • ಸಾಂಸಾರಿಕ ವಿಚಾರಕ್ಕೆ ಸಂಬಂಧಿಸದಂತೆ ಈ ದಿನ ಆತುರದಿಂದ ಯಾವುದೇ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ. ಇತರರನ್ನು ನಂಬದಿರುವ ಪರಿಸ್ಥಿತಿ ಬರುವುದು. ವೃತ್ತಿರಂಗದಲ್ಲಿ ಮೋಸ ಹೋಗಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.