ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಪ್ರೀತಿಸುವವರ ಮಾರ್ಗದರ್ಶನ ದೊರೆಯಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 31 ಜನವರಿ 2024, 23:30 IST
Last Updated 31 ಜನವರಿ 2024, 23:30 IST
   
ಮೇಷ
  • ಪ್ರೀತಿಸುವವರ ಮಾರ್ಗದರ್ಶನ ಈ ದಿನ ದೊರೆಯಲಿದ್ದು ,ಹೊಸ ಚೈತನ್ಯ ತುಂಬಿಬರಲಿದೆ. ಆಗಾಧ ಜ್ಞಾನ ಶಕ್ತಿ ಹೊರ ಹೊಮ್ಮಿ ಬರಲು ಸೂಕ್ತ ಕಾಲವಿದು. ನೇತ್ರ ಚಿಕಿತ್ಸಕರಿಗೆ ಅಧಿಕ ಲಾಭವಿರುವುದು.
  • ವೃಷಭ
  • ಹಲವು ಬಗೆಯ ಖರ್ಚು ವೆಚ್ಚಗಳನ್ನು ಮಾಡಬೇಕಾದರೂ ಆದಾಯದ ಹೊಸ ಮೂಲವೊಂದು ಕುಡಿಯೊಡೆದು ಲಾಭ ಬರುವುದರಿಂದ ಸಂತೋಷಗೊಳ್ಳುವಿರಿ. ಹೊಸ ಕೆಲಸಕ್ಕೆ ಪ್ರಯತ್ನಿಸಬಹುದು.
  • ಮಿಥುನ
  • ಎಲೆಕ್ಟ್ರಾನಿಕ್‌ ಕ್ಷೇತ್ರದಲ್ಲಿರುವವರಿಗೆ ವ್ಯಾಪಾರಗಳಲ್ಲಿ ಹೇಳುವ ಲಾಭವಿಲ್ಲದ್ದಿದ್ದರೂ ಹೆದರುವ ಅವಶ್ಯಕತೆ ಇರುವುದಿಲ್ಲ. ಅದು ತಾತ್ಕಾಲಿಕವಷ್ಟೇ. ಬದಲಾಗಿ ಪಾಲುದಾರಿಕೆಯಲ್ಲಿ ಲಾಭ ಗಳಿಸುವಿರಿ.
  • ಕರ್ಕಾಟಕ
  • ಹಿಡಿತಕ್ಕೆ ಸಿಕ್ಕಿರುವ ಕೆಲಸಗಳನ್ನು ಸಮರ್ಥವಾಗಿ ಕಾರ್ಯರೂಪಕ್ಕೆ ತರುವಲ್ಲಿ ಇಂದಿನ ಪ್ರಯತ್ನ ಯಶಸ್ಸನ್ನು ಉಂಟುಮಾಡುವುದು. ಗುರು ವಾಕ್ಯವನ್ನು ಅಕ್ಷರಶಃ ಪರಿಪಾಲನೆ ಮಾಡುವುದನ್ನು ಮರೆಯದಿರಿ.
  • ಸಿಂಹ
  • ಯೋಜನೆ ಹಾಗೂ ಅವುಗಳ ಬೆಳವಣಿಗೆಯ ಬಗ್ಗೆ ಸಂಬಂಧಪಟ್ಟವರಲ್ಲಿ ಚರ್ಚೆ ನಡೆಸುವುದರಿಂದ ಫಲಕಾರಿಯಾಗುತ್ತದೆ. ರೈತರಿಗೆ ಲಾಭ ಅದರಲ್ಲೂ ತೆಂಗಿನಕಾಯಿ ಬೆಳೆಗಾರರಿಗೆ ಅಧಿಕ ಬೆಲೆ ಬರುತ್ತದೆ.
  • ಕನ್ಯಾ
  • ದಿನದ ಗುತ್ತಿಗೆಯಂಥ ಕೆಲಸದ ವೃತ್ತಿಯವರಿಗೆ ಆಕಸ್ಮಿಕ ರೀತಿಯಲ್ಲಿ ಉದ್ಯೋಗ ದೊರೆತು ಸಂತೋಷ. ಪ್ರಭಾವಿ ವ್ಯಕ್ತಿಯಿಂದ ನಿಮ್ಮ ಕಾರ್ಯಸಾಧನೆ ಹಾಗೂ ಸಾಮಾಜಿಕವಾಗಿ ಅನುಕೂಲ ಆಗಲಿದೆ.
  • ತುಲಾ
  • ಮೇಲಿದ್ದ ಆಪಾದನೆಗಳು ದೂರಾಗಿ, ಮೇಲಧಿಕಾರಿಗಳಿಂದ ಗೌರವವನ್ನು ಹಿಂತಿರುಗಿ ಪಡೆಯುವ ಸುದಿನ ಇದಾಗಲಿದೆ. ಸದಾಕಾಲ ಪಕ್ಕದಲ್ಲಿಯೇ ಇರುವ ಪರಿಚಿತರಿಂದ ವಂಚನಾ ಪ್ರಸಂಗ ಇರಲಿದೆ.
  • ವೃಶ್ಚಿಕ
  • ಯೋಜನೆಗಳಲ್ಲಿ ಮುಂದಾಳತ್ವ ವಹಿಸಿ ಮತ್ತು ನಿಮ್ಮ ತಂಡ ಎದುರಿಸುತ್ತಿರುವ ಪ್ರಮುಖ ವಿಷಯಗಳ ತೊಂದರೆಯನ್ನು ನಿವಾರಣೆ ಮಾಡುವ ಸಾಮರ್ಥ್ಯ ಸಿಗಲಿದೆ. ಮಕ್ಕಳ ಆರೈಕೆಯ ಬಗ್ಗೆ ಅಧಿಕ ಗಮನವಿರಲಿ.
  • ಧನು
  • ಪರಮಾಪ್ತರ ಭೇಟಿ ಸಂಭವದಂಥ ಮನಸ್ಸಿಗೆ ಮುದ ನೀಡುವ ಸಂಗತಿಗಳು ನಡೆಯಲಿವೆ. ವರ್ತಕರಿಗೆ ಹೊಸ ವಸ್ತುಗಳ ವ್ಯಾಪಾರದಿಂದ ಲಾಭವಿರಲಿದೆ. ಹೊಸ ಕಾರ್ಯಕ್ರಮ ಹಮ್ಮಿಕೊಳ್ಳಲು ಇದು ಸೂಕ್ತ ಕಾಲ.
  • ಮಕರ
  • ಆಸೆ ಆಕಾಂಕ್ಷೆಗಳಿಗೆ ಅಥವಾ ಯೋಜನೆಗಳಿಗೆ ನಿಮ್ಮವರಿಂದಲೇ ಅಡ್ಡಿ ಎದುರಾಗಬಹುದು. ದಾಂಪತ್ಯ ಜೀವನದಲ್ಲಿ ತಾಳ್ಮೆ, ಹೊಂದಾಣಿಕೆಯಿಂದ ಮುಂದುವರಿಯಿರಿ. ಮಕ್ಕಳ ಖುಷಿಗಾಗಿ ಆಟಿಕೆಯ ವಸ್ತು ಕೊಳ್ಳುವಿರಿ.
  • ಕುಂಭ
  • ಆಲೋಚಿಸಿದ ರೀತಿಯಲ್ಲಿ ನಿಮ್ಮ ಕೆಲಸಗಳೆಲ್ಲವೂ ನಡೆದು ನೆಮ್ಮದಿ ಕಾಣುವಿರಿ. ಅವಶ್ಯಕತೆಗಿಂತ ಹೆಚ್ಚಾಗಿ ಖರ್ಚುಗಳನ್ನು ಮಾಡಬೇಡಿ. ಕೃಷಿ ಕ್ಷೇತ್ರದಲ್ಲಿನ ತುಸು ಚೇತರಿಕೆಯು ರೈತರಿಗೆ ನೆಮ್ಮದಿ ತರುವುದು.
  • ಮೀನ
  • ಸಹೋದರರಲ್ಲಿನ ಸ್ವತ್ತು ವಿಚಾರದಲ್ಲಿ ಬಂಧುಗಳು ನೆರವಿಗೆ ಬರಲಿದ್ದು ತಂದೆಯವರ ಮಾತಿನಂತೆಯೇ ನಡೆಯಲು ಒ‍ಪ್ಪುವಿರಿ. ಸಾರ್ಥಕವಾದ ಕಾರ್ಯ ಮಾಡಿ ಮುಗಿಸಿದ ತೃಪ್ತಿ ತೋರಿಬರಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.