ADVERTISEMENT

ದಿನ ಭವಿಷ್ಯ: ಕುಟುಂಬದಲ್ಲಿರುವ ಭಿನ್ನಾಭಿಪ್ರಾಯವನ್ನು ಹೋಗಲಾಡಿಸಲು ಸುದಿನ

ಮಂಗಳವಾರ, 11 ನವೆಂಬರ್ 2025

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 10 ನವೆಂಬರ್ 2025, 19:30 IST
Last Updated 10 ನವೆಂಬರ್ 2025, 19:30 IST
   
ಮೇಷ
  • ಸದಾಕಾಲ ಹಿತ ಬಯಸುವ ಕುಟುಂಬ ಸದಸ್ಯರನ್ನು ಹೊಂದಿರುವುದರಿಂದ ಮಾನಸಿಕ ಸ್ಥೈರ್ಯ ಸದೃಢವಾಗುವುದು. ನಿಮ್ಮನ್ನು ಎದುರು ಹಾಕಿಕೊಳ್ಳುವವರಿಗೆ ತಕ್ಕ ಉತ್ತರವನ್ನು ದೇವರು ನೀಡುತ್ತಾನೆ.
  • ವೃಷಭ
  • ದುಡುಕು ನಿರ್ಧಾರಗಳಿಂದ ವ್ಯವಹಾರದಲ್ಲಿ ಸೋಲಿನ ಕಹಿ ಅನುಭವಿಸಬೇಕಾಗುತ್ತದೆ. ಕುಟುಂಬದ ಅಭಿವೃದ್ಧಿಗೆ ಉತ್ತಮ ಯೋಚನೆಗಳು ಬರಲಿವೆ. ಅದನ್ನು ಉಪಯೋಗಿಸಿಕೊಳ್ಳಿ.
  • ಮಿಥುನ
  • ಸಂಗಾತಿಯೊಂದಿಗೆ ಇದ್ದ ದೀರ್ಘಕಾಲದ ಸಮಸ್ಯೆಗಳನ್ನು ಸಮಾಧಾನದಿಂದ ಮಾತನಾಡಿ ಪರಿಹರಿಸಿಕೊಳ್ಳಿ. ಪ್ರಯಾಣದ ವೇಳೆ ಸ್ನೇಹಿತರೊಂದಿಗೆ ಭೋಗ ವಸ್ತುವಿನ ಖರೀದಿ ಅವಕಾಶ ಸಿಗಲಿದೆ.
  • ಕರ್ಕಾಟಕ
  • ದಾಂಪತ್ಯ ಜೀವನದಲ್ಲಿ ತಾಳ್ಮೆಯಿದ್ದರೆ ಸುಖ, ಶಾಂತಿ, ನೆಮ್ಮದಿ ದೊರಕುವುದು. ಯಾರದ್ದೋ ತಪ್ಪುಗಳಿಗೆ ಅಧಿಕಾರಿಗಳ ಜತೆಯಲ್ಲಿ ನೀವೂ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ.
  • ಸಿಂಹ
  • ಹೊಸ ಸ್ಥಳದಲ್ಲಿ ಹೊಂದಾಣಿಕೆ ಕಷ್ಟಕರ ಎನಿಸಬಹುದು. ವಿದ್ಯಾಭ್ಯಾಸದಲ್ಲಿನ ನಿಮ್ಮ ಸಾಧನೆಗೆ ನಿಮ್ಮ ಗುರುಗಳ ಕಡೆಯಿಂದ ಉತ್ತಮವಾಗಿ ಪ್ರೋತ್ಸಾಹ ಸಿಗುವುದು.
  • ಕನ್ಯಾ
  • ಕಾರ್ಯವೈಖರಿಯನ್ನು ಬದಲಾಯಿಸಿಕೊಂಡಲ್ಲಿ ಕೆಲಸವು ಇನ್ನಷ್ಟು ಸರಾಗವಾಗುವುದು. ಕೆಲವು ಆಲೋಚನಾರಹಿತ ಮಾತುಗಳಿಂದ ಉಳಿದವರು ಆಭಾಸಕ್ಕೆ ಒಳಗಾಗುತ್ತಾರೆ.
  • ತುಲಾ
  • ಕುಟುಂಬದಲ್ಲಿದ್ದ ಭಿನ್ನಾಭಿಪ್ರಾಯವನ್ನು ಹೋಗಲಾಡಿಸಿ ಸಂಘಟಿಸಲು ಸುದಿನ. ಸಾಧಿಸಲೇಬೇಕೆಂಬ ಛಲದ ಕೊರತೆಯಿಂದ ಕಾರ್ಯಗಳೆಲ್ಲವೂ ಅರ್ಧದ ಹಾದಿ ನೋಡುವುದು.
  • ವೃಶ್ಚಿಕ
  • ವಿನಾಕಾರಣ ಬೇರೆಯವರ ಮನಸ್ಸನ್ನು ನೋಯಿಸುವುದು ಸರಿಯಲ್ಲವೆಂದು ಗೊತ್ತಿದ್ದೂ ತಪ್ಪುಗಳು ನೆರೆವೇರಬಹುದು. ಸರ್ಕಾರಿ ಉನ್ನತ ಅಧಿಕಾರಿಗಳಿಗೆ ವರ್ಗಾವಣೆ ಇದೆ.
  • ಧನು
  • ಮನೆಯ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯುವ ಅವಕಾಶವಿದ್ದರೂ ಅನಿವಾರ್ಯ ಕಾರಣಗಳಿಂದ ತಪ್ಪಿಸಿಕೊಳ್ಳ ಬೇಕಾಗಬಹುದು. ವ್ಯಾವಹಾರಿಕವಾದ ಕಲ್ಪನೆಗಳು ಗರಿಗೆದರಲಿವೆ.
  • ಮಕರ
  • ಹೊಸ ವಿಷಯದ ಅಧ್ಯಯನಕ್ಕೆ ಬೇಕಾದ ಪೂರಕ ವಾತಾವರಣವನ್ನುರೂಪಿಸಿಕೊಳ್ಳಿ. ಸೌಂದರ್ಯವರ್ಧಕಗಳ ಮಾರಾಟಗಾರರಿಗೆ ಹೆಚ್ಚಿನ ಲಾಭದ ದಿನ.
  • ಕುಂಭ
  • ಅನಾರೋಗ್ಯದ ಹೊರತಾಗಿ ಕೆಲವು ಜವಾಬ್ದಾರಿಗಳನ್ನು ನಿಭಾಯಿಸ ಲೇಬೇಕಾದುದು ಮಾನಸಿಕ ಸಂಕಟಕ್ಕೆ ಕಾರಣವಾಗಬಹುದು. ಕೆಲವು ಕಳಪೆ ವಸ್ತುಗಳು ದೊರೆಯಲಿವೆ.
  • ಮೀನ
  • ಸ್ವಂತ ಉದ್ಯಮದಲ್ಲಿರುವವರು ಕಾರ್ಯಕ್ಷೇತ್ರವನ್ನು ಅಭಿವೃದ್ಧಿ ಪಡಿಸಿಕೊಳ್ಳುವುದರಲ್ಲಿ ಉತ್ಸಾಹ ತೋರಿ ಅದರಲ್ಲಿ ಸಫಲತೆಯನ್ನು ಹೊಂದುವರು. ಪೀಠೋಪಕರಣಗಳ ಖರೀದಿಗೆ ಶುಭ ದಿನ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.