ಮಾಸ ಭವಿಷ್ಯ ಜನವರಿ 2026: ಉನ್ನತ ಪದವಿದರರಿಗೆ ಉತ್ತಮ ನೌಕರಿ ಯೋಗವಿದೆ
ಅರುಣ ಪಿ.ಭಟ್ಟ
Published 30 ಡಿಸೆಂಬರ್ 2025, 9:02 IST
Last Updated 30 ಡಿಸೆಂಬರ್ 2025, 9:02 IST
ಮಾಸ ಭವಿಷ್ಯ
ಮೇಷ
ನಿಮ್ಮ ವೃತ್ತಿಜೀವನದಲ್ಲಿ ನೀವು ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಉತ್ತಮ ಫಲಿತಾಂಶಗಳನ್ನು ಪಡೆಯಲು ನೀವು ಕಠಿಣ ಪರಿಶ್ರಮವನ್ನು ಮಾಡಬೇಕಾಗಬಹುದು. ತಿಂಗಳ ಮೊದಲಾರ್ಧದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ನಿಮಗೆ, ನಿಮ್ಮ ಪರಿವಾರಕ್ಕೆ ಶುಭ. ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಈ ಅವಧಿಯು ಫಲಪ್ರದವಾಗಬಹುದು ಮತ್ತು ಅವರ ಪ್ರಯತ್ನ ಹಾಗೂ ಶ್ರಮವು ಅವರಿಗೆ ಫಲ ನೀಡಬಹುದು. ಈ ತಿಂಗಳು ನಿಮ್ಮ ಆದಾಯವು ಹೆಚ್ಚಾಗಬಹುದು ಮತ್ತು ನಿಮ್ಮ ಖರ್ಚುಗಳು ಹೆಚ್ಚಾಗಬಹುದು. ನೀವು ಇದ್ದಕ್ಕಿದ್ದಂತೆ ಹಣಕಾಸಿನ ಲಾಭವನ್ನು ಹೊಂದಬಹುದು. ತಿಂಗಳ ದ್ವಿತೀಯಾರ್ಧದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಅತ್ಯಂತ ಜಾಗರೂಕರಾಗಿರಿ. ಚರ್ಮ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು. ಆಹಾರ ಪದ್ಧತಿಯ ಬಗ್ಗೆ ಕಾಳಜಿ ವಹಿಸುವುದು ನಿಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. ಶುಭ: 12,18,27. ಅಶುಭ: 9,13,25.
ವೃಷಭ
ಕಲಾವಿದರಿಗೆ ಸಂಗೀತಗಾರರಿಗೆ ಉತ್ತಮ ಸಮಯ. ಉತ್ತಮ ಅವಕಾಶ ಬರುವುದು. ಸರಕಾರಿ ಕೆಲಸಗಳಲ್ಲಿ ಯಶಸ್ಸು. ಗೃಹ ನಿರ್ಮಾಣ ಅಥವಾ ನೂತನ ಮನೆ ಕೊಳ್ಳುವ ಯೋಗವಿದೆ. ಬರತಕ್ಕ ಸಾಲದ ಬಾಕಿ ಹಣ ಬರುವುದು. ತಿಂಗಳ ಉತ್ತರಾರ್ಧದಲ್ಲಿ ಮನಸ್ಸಿನಲ್ಲಿ ಹುದುಗಿರುವ ದುಃಖಗಳು ದೂರಾಗುವವು. ಸೋದರ ಸೋದರಿಯರೊಂದಿಗೆ ಈ ಹಿಂದೆ ಮನಸ್ತಾಪವಾಗಿದ್ದಲ್ಲಿ ಈಗ ಸುಖಾಂತ್ಯ ಕಾಣುವುದು. ಉನ್ನತ ಪದವಿದರರಿಗೆ ಉತ್ತಮ ನೌಕರಿ ಯೋಗವಿದೆ. ಅವಿವಾಹಿತರಿಗೆ ವಿವಾಹದ ಸೂಚನೆ. ವಿದ್ಯಾರ್ಥಿಗಳಿಗೆ ಶುಭ. ಶುಭ: 14,22,26, ಅಶುಭ. 08,12,23,
ಮಿಥುನ
ವ್ಯಾಪಾರ ವ್ಯವಹಾರಸ್ಥರಿಗೆ ಉತ್ತಮ ಸಮಯ. ವ್ಯಾಪಾರವಹಿವಾಟು ಚೆನ್ನಾಗಿ ನಡೆಯುತ್ತದೆ. ಸರ್ಕಾರಿ ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಒತ್ತಡ. ಅನಗತ್ಯ ಅಲೆದಾಟ ಜಾಸ್ತಿ ಬರುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಹಿನ್ನಡೆ. ವಾಹನ ಖರೀದಿ ಯೋಗವಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಚರ್ಮವ್ಯಾದಿ ಹೊಟ್ಟೆನೊವು ಕಾಣಿಸಿಕೊಳ್ಳಬಹುದು. ಬಂದು ಮಿತ್ರರಲ್ಲಿ ಸ್ನೇಹದ ಒಡನಾಟ ಜಾಸ್ತಿ ಇರುತ್ತದೆ. ನಿಮ್ಮಿಂದ ಧಾರ್ಮಿಕ ಕಾರ್ಯವೊಂದು ಅನೀರಿಕ್ಷಿತವಾಗಿ ನಡೆಯಲಿದೆ. ಅದರಿಂದ ನೀವು ಸಂತುಷ್ಟರಾಗುವಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಶುಭ.11,15,21, ಅಶುಭ.12,16,29,
ಕರ್ಕಾಟಕ
ನೆರೆ ಹೊರೆಯವರಿಂದ ಉತ್ತಮ ಸಹಕಾರ ಸ್ನೇಹಮಯ ವಾತಾವರಣ ಇರುತ್ತದೆ. ಮನೆಯಲ್ಲಿ ಮಂಗಳ ಕಾರ್ಯ ನಡೆಸುವಿರಿ. ಆರ್ಥಿಕವಾಗಿ ಉತ್ತಮ ತಿಂಗಳು. ರಾಜಕಿಯದಲ್ಲಿರುವವರಿಗೆ ಉತ್ತಮ ಫಲಿತಾಂಶ. ಆರೋಗ್ಯದ ವಿಷಯದಲ್ಲಿ ಕಣ್ಣಿನ ತೊಂದರೆ ಕಾಣಿಸಿಕೊಳ್ಳುಬಹುದು. ಕಬ್ಬಿಣದ ವ್ಯಾಪಾರಿಗಳಿಗೆ ಉತ್ತಮ ಲಾಭದ ಅವಕಾಶ. ವಾಣಿಜ್ಯ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶುಭ. ಶುಭ. 14,18,26, ಅಶುಭ. 12,19,22,
ಸಿಂಹ
ಹತ್ತಿರದ ಬಂಧುಗಳಿಗೆ ನಿಮ್ಮ ಸಹಾಯದ ಅವಶ್ಯಕತೆ ಬರುವುದು. ಉದ್ಯೋಗದಲ್ಲಿ ಮೇಲಾಧಿಕಾರಿಗಳ ತೊಂದರೆ ಅನವಶ್ಯಕ ಕಿರಿಕಿರಿ ಇರುವುದು. ಕೃಷಿ ಮತ್ತು ಪಶುಪಾಲನೆ ವ್ಯವಹಾರದವರಿಗೆ ನಷ್ಟ. ಅವಿವಾಹಿತರಿಗೆ ವಿವಾಹ ಭಾಗ್ಯ. ವಾಹನ ಖರೀದಿಗೆ ಉತ್ತಮ ಅವಕಾಶ ಸಿಗುತ್ತದೆ. ತಿಂಗಳ ಕೊನೆಯಲ್ಲಿ ಸಣ್ಣ ಪ್ರವಾಸ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು. ಶುಭ. 14,18,22, ಅಶುಭ. 16,23,28,
ಕನ್ಯಾ
ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಪ್ರಗತಿ. ನಿಮ್ಮ ಆರೋಗ್ಯವು ಉತ್ತಮವಾಗಿ ಇರುತ್ತದೆ. ಹೆಚ್ಚು ಉತ್ಸಾಹ ಹಾಗೂ ಸಂತೋಷದಿಂದ ಕಾಣಿಸಿಕೊಳ್ಳುತ್ತೀರಿ. ತಿಂಗಳಾಂತ್ಯದಲ್ಲಿ ವ್ಯಾಪಾರ ವ್ಯವಹಾರ ಲಾಭದಾಯಕವಾಗಿ ಇರುತ್ತದೆ. ನಿಮ್ಮ ಜೀವನ ಶೈಲಿ ಹೆಚ್ಚಿಸಿಕೊಳ್ಳಲು ಶ್ರಮವನ್ನು ಹೆಚ್ಚು ಹಾಕಲಿದ್ದೀರಿ. ನಿಮ್ಮ ಸಂಗಾತಿಗೆ ಕೆಲವು ಉಡುಗೊರೆಗಳನ್ನು ನೀಡುವ ಸಾಧ್ಯತೆ ಇದೆ. ಶುಭ.. 16,20,28, ಅಶುಭ..13,23,26,
ತುಲಾ
ವ್ಯಾಪಾರ ವ್ಯವಹಾರಸ್ಥರಿಗೆ ಉತ್ತಮ ಲಾಭ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆ. ಸಂತತಿ ಇಲ್ಲದವರಿಗೆ ಸಂತತಿಯ ಸೂಚನೆ. ವಿವಾಹಾಪೆಕ್ಷಿಗಳಿಗೆ ಸಂಗಾತಿ ಲಭ್ಯ. ಮನೆಕೆಲಸದ ಹೊಸ ಸೇವಕರು ಸಿಗುವರು. ಕುಟುಂಬ ಸೌಖ್ಯ. ಮನೆಗೆ ಹೊಸ ಪೀಠೋಪಕರಣ ಅಲಂಕಾರಿಕ ವಸ್ತು ಖರೀದಿ ಸಾಧ್ಯತೆ. ಒಟ್ಟಾರೆಯಾಗಿ ಶುಭ. ಶುಭ. 12,14,28, ಅಶುಭ. 13,19,27,
ವೃಶ್ಚಿಕ
ಈಗ ಮಾಡುತ್ತಿರುವುದಕ್ಕಿಂತ ಉತ್ತಮವಾಗಿ ಕೆಲಸ ಮಾಡಲು ಪ್ರಯತ್ನಿಸುತ್ತೀರಿ. ಹಲವು ಸವಾಲುಗಳು ಏಕಕಾಲಕ್ಕೆ ಎದುರಾಗುತ್ತದೆ. ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. ತಿಂಗಳ ಮಧ್ಯಭಾಗದಲ್ಲಿ ವ್ಯಾಪಾರ ಉದ್ಯಮ ವಿಸ್ತರಣೆಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ. ಹಣಕಾಸಿನ ವೆಚ್ಚ ಹೆಚ್ಚಾಗಲಿದೆ. ಶುಭ.10,14,22, ಅಶುಭ. 12,16,23,
ಧನು
ಗುರು ಹಿರಿಯರ ಆಶಿರ್ವಾದ ಪಡೆದು ಮಹತ್ವದ ನಿರ್ಣಯ ತೆಗೆದುಕೊಳ್ಳಿ. ಖನಿಜಗಳು ತೈಲ ವ್ಯಾಪಾರ ವ್ಯವಹಾರಸ್ಥರಿಗೆ ಉತ್ತಮ ಲಾಭ. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಕಿರಿಕಿರಿ. ಅಗ್ನಿಯಿಂದ ಅವಘಡ ಸಾದ್ಯತೆ ಎಚ್ಚರಿಕೆಯಿಂದ ಇರಿ. ಹಳೆಯ ಕೋರ್ಟ್ ಕಾನೂನು ಪ್ರಕರಣಗಳು ಇದ್ದಲ್ಲಿ ಪರಿಹಾರವಾಗುತ್ತದೆ. ಕುಟುಂಬ ಸಮೇತ ಚಿಕ್ಕ ಪ್ರವಾಸವೊಂದನ್ನು ಮಾಡುವಿರಿ. ಅವಿವಾಹಿತರಿಗೆ ವಿವಾಹ ಯೋಗ.
ಶುಭ. 12,19,28, ಅಶುಭ. 10,16,24,
ಮಕರ
ಆರ್ಥಿಕವಾಗಿ ಸುಭದ್ರವಾಗುವಿರಿ. ಹಳೇಸಾಲ ತೀರಿಸುವಿರಿ. ನಿಮ್ಮ ವಿರೋದಿಗಳ ಆಟ ನಿಮ್ಮ ಮುಂದೆ ನಡೆಯದು. ಕಲೆ ಸಂಸ್ಕೃತಿ ಹೊಟೆಲ್ ಸಿನೇಮಾ ಕ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ ಉನ್ನತಿ. ಸರಕಾರದ ಕೆಲಸಗಳು ಅಡೆ ತಡೆ ಇಲ್ಲದೆ ನಡೆಯುವುದು. ಪಿತ್ರಾರ್ಜಿತ ಆಸ್ತಿಗೆ ಸಂಬಂದ ಪಟ್ಟ ವಿವಾದಗಳು ಇದ್ದಲ್ಲಿ ಇತ್ಯರ್ಥ. ವಾಹನ ಚಲಾಯಿಸುವಾಗ ಜಾಗರೂಕತೆ ವಹಿಸಿ. ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು. ಶುಭ. 16,23,26, ಅಶುಭ. 14,18,22,
ಕುಂಭ
ಅಸ್ತಿರವಾದ ಮನಸ್ಸಿಂದ ಗೊಂದಲವಾಗುವುದು. ಸಜ್ಜನರ ಸಹವಾಸ ಆಧ್ಯಾತ್ಮಿಕ ಚಿಂತನೆಯ ಸಹವಾಸ ಆಧ್ಯಾತ್ಮಿಕ ಚಿಂತನೆಯ ಅವಶ್ಯಕತೆ ಇದೆ. ಸರಕಾರಿ ನ್ಯಾಯಾಲದ ಕಾರ್ಯಗಳಲ್ಲಿ ಅಡೆತಡೆ ಉಂಟಾಗುವುದು. ನಂಬಿದ ಜನರು ನಂಬಿಕೆ ಕಳೆದುಕೊಳ್ಳುವರು. ವೈವಾಹಿಕ ಸಂಬಂಧಗಳು ಹದಗೆಡುವ ಪ್ರಸಂಗ. ಆಡುವ ಮಾತಿನ ಮೇಲೆ ನಿಗಾವಹಿಸಿ. ತಿಂಗಳಾಂತ್ಯದಲ್ಲಿ ಮಕ್ಕಳಿಂದ ಶುಭ ಸುದ್ದಿ. ಆರೋಗ್ಯದಲ್ಲಿ ಚೇತರಿಕೆ. ಶುಭ.16,24,28, ಅಶುಭ. 17,20 ,27,
ಮೀನ
ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯವನ್ನು ಕಳೆಯಲಿದ್ದೀರಿ. ಸೋದರ ಸೋದರಿಯರ ಜತೆಗೆ ಬಾಂಧವ್ಯ ಗಟ್ಟಿಯಾಗಲಿದೆ. ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ಸಕ್ರಿಯವಾಗಿ ಪಾಲ್ಗೊಳ್ಳಲಿದ್ದೀರಿ. ಹೆಸರಾಂತ ಸಂಸ್ಥೆಯೊಂದರಲ್ಲಿ ಉದ್ಯೋಗ ದೊರೆಯುವ ಅವಕಾಶ ಇದೆ. ಪದೋನ್ನತಿ ಸಿಗುವ ಯೋಗ ಇದೆ. ನಿಮ್ಮ ಕೆಲಸ ಸಾಧನೆಯಿಂದ ಪೋಷಕರು ಸಂತೋಷ ಪಡುತ್ತಾರೆ. ಶೈಕ್ಷಣಿಕ ರಂಗದಲ್ಲಿ ಉತ್ತಮ ಪ್ರಗತಿ ಇದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಶುಭ.18,25,29, ಅಶುಭ. 12,16,26,