ADVERTISEMENT

ದಿನ ಭವಿಷ್ಯ | ಈ ರಾಶಿಯವರು ಮಗಳ ಮದುವೆ ಬಗ್ಗೆ ಯೋಚಿಸುವಿರಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 10 ಡಿಸೆಂಬರ್ 2025, 23:07 IST
Last Updated 10 ಡಿಸೆಂಬರ್ 2025, 23:07 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಎಲ್ಲರೊಂದಿಗೆ ಬೆರೆಯುವ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಂದರ್ಭ ಬರಲಿದೆ. ಮನೆಯ ಕಟ್ಟಡದ ದುರಸ್ತಿ ಕಾರ್ಯಗಳು ಅನಿವಾರ್ಯವಾಗುತ್ತದೆ. ಮಗಳ ಮದುವೆ ಬಗ್ಗೆ ಯೋಚಿಸುವಿರಿ.
  • ವೃಷಭ
  • ಹೊಸ ಮನೆಯ ಕೆಲಸಗಳು ಮುಗಿದು ಹಿರಿಯರ ಸಲಹೆಯಂತೆಯೇ ಗೃಹ ಪ್ರವೇಶದ ದಿನ ನಿಗದಿಗೊಳಿಸುವಿರಿ. ನಿಮ್ಮೆದುರಿಗಿರುವ ಸವಾಲನ್ನು ಎದುರಿಸುವ ಶಕ್ತಿ ಮತ್ತು ಸಾಮರ್ಥ್ಯ ಅಭಿವೃದ್ಧಿಯಾಗುವುದು.
  • ಮಿಥುನ
  • ಪರೋಪಕಾರ ಮತ್ತು ಪಾರಮಾರ್ಥಿಕ ವಿಷಯಗಳತ್ತ ಮನಸ್ಸು ಹರಿಯುವುದು. ನಿಮ್ಮಲ್ಲಿರುವ ಪಾರಮಾರ್ಥಿಕತೆಯಿಂದಾಗಿ ದೇವರ ರಕ್ಷಣೆ ಸದಾಕಾಲ ದೊರೆಯುವುದು. ಅಧಿಕಾರಕ್ಕಾಗಿ ಹೆಚ್ಚಿನ ಓಡಾಟ ನಡೆಸುವಿರಿ.
  • ಕರ್ಕಾಟಕ
  • ನಿಮ್ಮ ಕೋಪದ, ದಡ್ಡತನದ ತೀರ್ಮಾನದಿಂದ ಪಶ್ಚಾತ್ತಾಪ ಪಡುವ ಘಟನೆ ನಡೆಯುತ್ತದೆ. ನಿಮ್ಮ ಶ್ರಮದ ಫಲ ಏನು ಎಂಬುದು ಮಕ್ಕಳಿಗೆ ಅರಿವಾಗಲಿದೆ. ವಾತ ಸಂಬಂಧ ಅನಾರೋಗ್ಯಕ್ಕೆ ಔಷಧಿ ತೆಗೆದುಕೊಳ್ಳಿರಿ.
  • ಸಿಂಹ
  • ಕೆಲ ದಿನಗಳ ಹಿಂದೆ ನೀವು ತೆಗೆದುಕೊಂಡ ತೀರ್ಮಾನ ಸರಿಯೇ ಎಂಬುದರ ಬಗ್ಗೆ ಇಂದು ಆಲೋಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳ ಬೇಕಾಗುವುದು. ವರ್ಷದ ಖರ್ಚುವೆಚ್ಚಗಳಲ್ಲಿ ಸರಿಯಾದ ಲೆಕ್ಕಾಚಾರ ನಡೆಸಿ.
  • ಕನ್ಯಾ
  • ಹಲವು ಕಾಲದಿಂದ ನಿಂತು ಹೋಗಿದ್ದ ಕೆಲಸಗಳು ದೈವಾನುಗ್ರಹದಿಂದ ಆರಂಭವಾಯಿತೆಂದು ಸಂತೋಷ ಪಡುವಿರಿ. ಒಳಗೊಳಗೆ ಅಸೂಯೆ ಪಡುವಂತಹ ಸಂಬಂಧಿಗಳು ನಿಮ್ಮ ಸಾಧನೆಗೆ ಅಡ್ಡಿ ತಂದಾರು.
  • ತುಲಾ
  • ಬಹಳ ದಿನಗಳಿಂದ ವರ್ತಮಾನ ಕಾಲದಲ್ಲಿರುವ ಕೆಲಸವು ಶುಭ ಅಂತ್ಯ ನೋಡುತ್ತದೆ. ತಿಳಿಯದ ವಿಷಯಗಳ ಬಗ್ಗೆ ಸಹೋದರರ ಜೊತೆ ವಾದಿಸಬೇಡಿ. ಸೋದರ ಮಾವನ ಮನೆಯ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ.
  • ವೃಶ್ಚಿಕ
  • ನ್ಯಾಯವಾದಿಗಳಿಗೆ ಉತ್ತಮ ದಿನ, ಜಯ ಸಾಧಿಸುವ ಬಗ್ಗೆ ಉತ್ತಮ ಅಂಶ ಸಿಗಲಿದೆ. ಹಿರಿಯರನ್ನು ನೋಡಿಕೊಳ್ಳುವ ಕರ್ತವ್ಯದಿಂದ ತಪ್ಪಿಸಿಕೊಳ್ಳ ಬೇಡಿ. ಇಲ್ಲ ಸಲ್ಲದ ವಿಷಯಗಳಲ್ಲಿ ತಲೆ ಹಾಕಲು ಹೋಗದಿರುವುದು ಕ್ಷೇಮ.
  • ಧನು
  • ಸಾಂಕ್ರಾಮಿಕ ರೊಗಗಳಿಂದ ನಿಮ್ಮ ಅಧ್ಯಯನಕ್ಕೆ ತೊಂದರೆ ಉಂಟಾಗಬಹುದು. ಹಿರಿಯರ ಮಾತಿನಂತೆ ನಡೆದುಕೊಳ್ಳುವ ನಿರ್ಧಾರ ಶುಭಪ್ರದವಾಗುತ್ತದೆ. ಪರಿಸ್ಥಿತಿಗೆ ಹೊಂದಿಕೊಳ್ಳುವ ಸ್ವಭಾವವು ನಿಮ್ಮಲ್ಲಿ ಬರಲಿದೆ.
  • ಮಕರ
  • ನಿಮಗೆ ಉಪಕಾರ ಮಾಡುವವರೆಲ್ಲರೂ ನಿಮ್ಮ ಹಿತಚಿಂತಕರೆಂದು ತಿಳಿಯಬೇಡಿ ಏಕೆಂದರೆ ನಯವಂಚಕರು ಸಹ ಆಗಬಹುದು. ತಂದೆಯಾಗುವ ಸುದ್ದಿ ಕೇಳಿ ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವಂತಾಗುವುದು.
  • ಕುಂಭ
  • ಸಮಯ ಕಳೆಯಲು ಮಾಡಿದ ಕೆಲಸದಿಂದ ನಿಮ್ಮ ಸೃಜನಶೀಲತೆ ಹಾಗೂ ಚಾಣಾಕ್ಷತನ ಹೆಚ್ಚಲಿದೆ. ಬರುವ ಸಂಬಂಧಿಗಳು ನಿಮ್ಮ ಆತಿಥ್ಯದಿಂದ ಸಂತುಷ್ಟರಾಗುವರು. ವಾಸ್ತು ಶಿಲ್ಪದ ವಿದ್ಯಾರ್ಥಿಗಳಿಗೆ ಉತ್ತಮ ಬೇಡಿಕೆ.
  • ಮೀನ
  • ಈ ದಿನ ಯಾವುದೇ ತೀರ್ಪು ನೀಡುವುದು ಅಥವಾ ಇನ್ನೊಬ್ಬರನ್ನು ಪರೀಕ್ಷಿಸುವ ಕೆಲಸವು ನಿಮಗೆ ಸರಿಯಲ್ಲ. ಜಗದ್ಗುರುವಿನ ಸೇವೆಯಿಂದ ಪುಣ್ಯ ಪ್ರಾಪ್ತಿಯಾಗುವುದರ ಜೊತೆಗೆ ನಿಮ್ಮ ಭವಿಷ್ಯಕ್ಕೆ ಸರಿ ಮಾರ್ಗ ಸಿಗುತ್ತದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.