ADVERTISEMENT

ದಿನ ಭವಿಷ್ಯ: ಜನವರಿ 8 ಗುರುವಾರ 2026– ಈ ದಿನ ಅತಿಥಿ ಸತ್ಕಾರ ಮಾಡುವಿರಿ

ದಿನ ಭವಿಷ್ಯ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 7 ಜನವರಿ 2026, 18:36 IST
Last Updated 7 ಜನವರಿ 2026, 18:36 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ತಂದೆ ತಾಯಿಯರ ಹಿತಕ್ಕಾಗಿ ವಿದೇಶಕ್ಕೆ ಹೋಗುವುದನ್ನು ನಿಲ್ಲಿಸುವಂತಾಗುವುದು. ವಿವಾಹ ಸಂಬಂಧದ ಮಾತುಕತೆಗಳುಫಲಕಾರಿಯಾಗುವವು. ವಿವಿಧ ಮೂಲಗಳಿಂದ ದ್ರವ್ಯಲಾಭ ಇರುವುದು.
  • ವೃಷಭ
  • ಯಾರೊಂದಿಗೆ ನಿಮಗೆ ಸಮಸ್ಯೆಗಳಿದ್ದರೂ ಸಹ ಅದನ್ನು ಸ್ವತಃ ನೀವೇ ಪರಿಹರಿಸಿಕೊಳ್ಳುವುದು ಉತ್ತಮ ಮಾರ್ಗ. ಆರೋಗ್ಯದಲ್ಲಿ ವಾಯು ಸಂಬಂಧವಾಗಿ ತೊಂದರೆ ಕಾಣಿಸಿಕೊಳ್ಳಬಹುದು. ಅತಿಥಿ ಸತ್ಕಾರ ಮಾಡುವಿರಿ.
  • ಮಿಥುನ
  • ನಿಮ್ಮ ಪಾಲಿನ ನಂದಾದೀಪವಾದ ಮಗಳನ್ನು ಮತ್ತೊಂದು ಮನೆಯ ನಂದಾದೀಪವಾಗಿ ಕಳುಹಿಸಿಕೊಡುವ ಸನ್ನಿವೇಶ ಪದೇ ಪದೇ ನಿಮ್ಮ ಕಣ್ಣೆದುರು ಬರುವುದು. ತರಕಾರಿ ಮಾರಾಟಗಾರರಿಗೆ ಉತ್ತಮ ದಿನ.
  • ಕರ್ಕಾಟಕ
  • ವ್ಯಾಪಾರದಲ್ಲಿ ಸಹಚರರಿಂದಲೇ ಮೋಸವಾಗುತ್ತಿರುವ ವಿಚಾರವು ಅನುಭವಕ್ಕೆ ಬಂದು ದುಃಖವಾಗಬಹುದು. ನೀವು ಬಯಸಿದ ಕ್ಷೇತ್ರದಲ್ಲಿ ಹೊಸ ತಿರುವನ್ನು ಪಡೆಯುವಲ್ಲಿ ಯಶಸ್ವಿಯಾಗುವಿರಿ.
  • ಸಿಂಹ
  • ಹೊಸ ಕೆಲಸ ಪ್ರಾರಂಭ ಮಾಡಾಬೇಕಾದಾಗ ಸೂಕ್ತ ಮಾರ್ಗದರ್ಶನ ಉತ್ತಮ. ಅವಿವಾಹಿತರ ಮನೋಕಾಮನೆ ಪೂರ್ಣಗೊಳ್ಳುವ ದಿನ. ನಿಮ್ಮ ಮುಂದಿನ ಹಾದಿ ಏನೆಂಬುದು ನಿಮಗೆ ಈ ದಿನ ಸ್ಪಷ್ಟವಾಗಿರಲಿ.
  • ಕನ್ಯಾ
  • ಮಗಳ ಗಂಡನ ಮನೆಯಲ್ಲಿನ ಕಾರ್ಯಕ್ರಮಗಳಿಗೆ ನೀವು ಭೇಟಿ ನೀಡುವಂತಾಗಿ ಸಂತೋಷ ಹೊಂದುವಿರಿ. ನಿರುದ್ಯೋಗಿಗಳಿಗೆ ಸಾಧಾರಣ ಉದ್ಯೋಗ ದೊರಕಿದರೂ ಯಾವುದೇ ಕಾರಣಕ್ಕೂ ತಿರಸ್ಕರಿಸಬೇಡಿ.
  • ತುಲಾ
  • ಕೃತಕ ಅಂಗಾಂಗಗಳ ಅಳವಡಿಕೆ ಮಾಡಿಸಿಕೊಂಡವರು ಆರೋಗ್ಯದಲ್ಲಿ ಉಂಟಾಗುವ ಯಾವುದೇ ಬದಲಾವಣೆಗಳನ್ನು ಸಹ ಸಸಾರ ಮಾಡದಿರಿ. ರಾಜಕೀಯ ವ್ಯಕ್ತಿಗಳು ಜನರಲ್ಲಿ ತಾಳ್ಮೆಯಿಂದ ವರ್ತಿಸುವುದು ಸೂಕ್ತ.
  • ವೃಶ್ಚಿಕ
  • ಮನೆಯ ಜನರ ಅಕಾಂಕ್ಷೆಗಳನ್ನು ನೀವೇ ಪೂರೈಸಬೇಕಾದರೂ ಸಹ ನೆಮ್ಮದಿಯ ವಿಷಯವೇನೆಂದರೆ ಖರ್ಚಿಗೆ ತಕ್ಕಂತೆ ಧನಾಗಮನ ಇರುವುದರಿಂದ ಚಿಂತೆ ಇರದು. ಗುತ್ತಿಗೆದಾರರಿಗೆ ಬಿಡುವಿಲ್ಲದಂತಾದೀತು.
  • ಧನು
  • ಇಂದಿನ ಹಲವಾರು ದುಃಖಗಳು ಮಧುರವಾದ ಸಂಗೀತವನ್ನು ಕೇಳುವ ಮೂಲಕ ಪರಿಹರಿಸಿಕೊಳ್ಳುವಿರಿ. ನಿಮ್ಮ ಕೆಲಸಗಳ ಬಗ್ಗೆ ಪುನಃಪುನಃ ಅವಲೋಕನೆಯನ್ನು ಮಾಡುವಂತಹ ಪದ್ಧತಿಯನ್ನು ರೂಢಿಸಿಕೊಳ್ಳುವಿರಿ.
  • ಮಕರ
  • ಒಂದು ಸಣ್ಣ ಕಾರಣವನ್ನೇ ಹಿಡಿದು ನಿಮ್ಮನ್ನು ಒಂದು ಕೆಲಸದಿಂದ ಅಮಾನತ್ತುಗೊಳಿಸುವಂತಹ ಸಾಧ್ಯತೆಗಳು ಬರಬಹುದು. ಶ್ರೀ ವಿಷ್ಣುಸಹಸ್ರನಾಮದ ಪಠನೆಯು ಹೆಚ್ಚಿನ ಏಳಿಗೆ ಹಾಗೂ ನೆಮ್ಮದಿಯನ್ನು ತರುವುದು.
  • ಕುಂಭ
  • ಸೇತುವೆ ನಿರ್ಮಾಣಕ್ಕೆ ಗುತ್ತಿಗೆ ಸಿಗಬಹುದು ಅಥವಾ ಕಾರ್ಮಿಕರಾಗುವ ಅವಕಾಶ ಸಿಗಬಹುದು. ಮಾರಣಾಂತಿಕ ಕಾಯಿಲೆಗಳಿಂದ ಪಾರು ಮಾಡುವ ಪಾರಂಪರಿಕ ಔಷಧಗಳ ಕಲೆಯನ್ನು ಕಲಿಯುವ ಸದವಕಾಶಗಳು ಸಿಗಬಹುದು.
  • ಮೀನ
  • ಪರಿಸ್ಥಿತಿಯನ್ನು ಜಾಣತನದಿಂದ ಉಪಯೋಗಿಸಿಕೊಂಡಲ್ಲಿ, ಜೀವನದಲ್ಲಿ ಸ್ಥಿರತೆಯು ಪ್ರಾಪ್ತಿ. ಕೆಲಸದ ಒತ್ತಡ, ಜವಾಬ್ದಾರಿಗಳು ಹೆಚ್ಚಲಿವೆ. ಉದ್ಯೋಗದಲ್ಲಿನ ಸಮಸ್ಯೆಯಿಂದಾಗಿ ಬದಲಾವಣೆಯ ಮನಸ್ಸು ಬರಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.