ADVERTISEMENT

ದಿನ ಭವಿಷ್ಯ: ನಿಮ್ಮ ದಿನ ಸಂತೋಷವಾಗಿರಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 17 ನವೆಂಬರ್ 2025, 0:31 IST
Last Updated 17 ನವೆಂಬರ್ 2025, 0:31 IST
   
ಮೇಷ
  • ಅನವಶ್ಯಕವಾಗಿ ಮನಸ್ಸಿನಲ್ಲಿ ಇಟ್ಟುಕೊಂಡಿರುವ ಅನುಮಾನವನ್ನು ತೆಗೆದುಹಾಕಿ. ದೊಡ್ಡ ಸಮಸ್ಯೆಗಳನ್ನು ಯೋಚಿಸಿ ಪರಿಹರಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಿ. ಆರ್ಥಿಕ ಸಮಸ್ಯೆ ನಿದ್ದೆ ಕೆಡಿಸಲಿದೆ.
  • ವೃಷಭ
  • ಕೆಲಸದಲ್ಲಿ ಬದಲಾವಣೆ ಕಾಣಲಿದ್ದೀರಿ. ಜೀವನಶೈಲಿಯೂ ಬದಲಾಗಲಿದೆ. ಗಣಿತಜ್ಞರಿಗೆ, ಸಂಗೀತಗಾರರಿಗೆ ಪ್ರತಿಭಾ ಪ್ರದರ್ಶನಕ್ಕೆ ಅವಕಾಶಗಳು ದೊರೆಯಲಿವೆ. ದಿನ ಸಂತೋಷವಾಗಿರಲಿದೆ.
  • ಮಿಥುನ
  • ಪೂರ್ವನಿಯೋಜಿತ ಕೆಲಸ ಕಾರ್ಯಗಳು ಹಂತ ಹಂತವಾಗಿ ಪೂರ್ಣಗೊಳ್ಳಲಿವೆ. ಖಾದಿ ಉದ್ಯಮದವರಿಗೆ ಸರ್ಕಾರದಿಂದ ಹಲವು ರೀತಿಯ ಸೌಲಭ್ಯಗಳು ದೊರೆಯಲಿವೆ.
  • ಕರ್ಕಾಟಕ
  • ಖರ್ಚಿನ ವಿಚಾರದಲ್ಲಿ ಮಿತವ್ಯಯಿಗಳಾಗಿ. ಸರಳ ಜೀವನವನ್ನು ನಡೆಸುವುದರಿಂದಾಗಿ ಶ್ರೀಮಂತಿಕೆ ಉಳಿಸಿಕೊಳ್ಳಬಹುದು. ಬದುಕನ್ನು ಒಂದು ವ್ಯವಸ್ಥೆಗೆ ತರಲು ದಿನದ ಅಲ್ಪ ಸಮಯವನ್ನು ಮೀಸಲಿಡಿ.
  • ಸಿಂಹ
  • ಆತ್ಮೀಯರೊಂದಿಗಿಗೆ ವ್ಯವಹಾರಗಳ ಕುರಿತು ಅಥವಾ ವ್ಯವಹಾರದಲ್ಲಿನ ಪಾಲುದಾರಿಕೆಯ ಸಲುವಾಗಿ ಚರ್ಚಿಸಬಹುದು. ಮಾನಸಿಕ ಒತ್ತಡ ಹೆಚ್ಚಿರುವುದರಿಂದ ತಾಂತ್ರಿಕ ತಪ್ಪುಗಳಾಗದಂತೆ ಎಚ್ಚರವಹಿಸಿ.
  • ಕನ್ಯಾ
  • ಉದ್ಯೋಗದಲ್ಲಿ ಸಿಗುವಂಥ ವರ್ಗಾವಣೆ ಅವಕಾಶಗಳನ್ನು ಬಿಟ್ಟುಕೊಳ್ಳಬೇಡಿ. ಕುಟುಂಬದ ಸದಸ್ಯರ ಮಾತುಗಳನ್ನು ತಾಳ್ಮೆಯಿಂದ ಕೇಳಿರಿ. ನಿಷ್ಠೆ ಹಾಗೂ ಬುದ್ಧಿವಂತಿಕೆಗೆ ಪ್ರತಿಫಲ ಸಿಗಲಿದೆ.
  • ತುಲಾ
  • ಆತ್ಮ ವಿಶ್ವಾಸವನ್ನು ರೂಢಿಸಿಕೊಂಡು ಪರಿಶ್ರಮದಿಂದ ಪ್ರಗತಿಯ ಹಾದಿಯತ್ತ ಗಮನಹರಿಸಿ. ಕಳೆದು ಹೋಗಿದ್ದ ವಸ್ತುಗಳು ಸತತ ಪ್ರಯತ್ನದಿಂದ ಸಿಕ್ಕಿ ಮನಸ್ಸಿಗೆ ಸಮಾಧಾನವಾಗುವುದು.
  • ವೃಶ್ಚಿಕ
  • ಸಣ್ಣ ಮಗುವಿನ ಜತೆಗೆ ದೂರದ ಪ್ರಯಾಣವನ್ನು ಯೋಚಿಸಿದ್ದರೆ ಆದಷ್ಟು ಅದನ್ನು ಬಿಡುವ ಪ್ರಯತ್ನ ಮಾಡಿ. ಕೃಷಿಯಲ್ಲಿ ಶ್ರೇಯಸ್ಸಿಗಾಗಿ ಶ್ರೀ ಕಾಶಿಪುರಾಧೀಶ್ವರಿ ಅನ್ನಪೂರ್ಣೇಶ್ವರಿಯನ್ನು ದರ್ಶಿಸಿ.
  • ಧನು
  • ಯುವಕರು ಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡು ವಿದ್ಯಾಲಯದ ಕಾರ್ಯಗಳನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಡಬೇಕಾಗುತ್ತದೆ. ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ಚಂಚಲ ಮನಸ್ಸು ಅಡ್ಡಿಮಾಡುವುದು.
  • ಮಕರ
  • ಅಡುಗೆ ಕೆಲಸ ಮಾಡುವವರಿಗೆ ಹೆಚ್ಚಿನ ಕೆಲಸ, ಬೇಡಿಕೆ, ಲಾಭವಿರುವುದು. ಸಹಭಾಗಿಗೆ ಅಥವಾ ಮಕ್ಕಳಿಗೆ ಸಹಾಯ ಮಾಡುವುದರಲ್ಲಿ ಆನಂದ ಸಿಗಬಹುದು. ವ್ಯಾಪಾರದಲ್ಲಿ ಮೋಸ ಹೋಗದೆ ಬುದ್ಧಿವಂತಿಕೆ ತೋರಿ.
  • ಕುಂಭ
  • ಸಾಮರ್ಥ್ಯವನ್ನಷ್ಟೂ ಬಳಸಿಕೊಂಡು ಕೆಲಸ ಮಾಡುತ್ತಿರುವ ನೀವು ದೇಹಕ್ಕೆ ಸ್ವಲ್ಪ ವಿಶ್ರಾಂತಿಯನ್ನು ಕೊಡುವುದರ ಬಗ್ಗೆ ಯೋಚಿಸಿ. ಪತಿ ಪತ್ನಿಯರಲ್ಲಿ ಅನ್ಯೋನ್ಯತೆ ಹೆಚ್ಚುವುದು.
  • ಮೀನ
  • ಮನೋಭಿಲಾಷೆಯನ್ನು ಸಿದ್ಧಿಸಿಕೊಳ್ಳಲಿಕ್ಕಾಗಿ ಇತರರಿಗೆ ಮಾರಕವಾಗುವ ಮಾರ್ಗವನ್ನು ಆರಿಸಿಕೊಳ್ಳಬೇಡಿ. ಚಿಂತಾಕ್ರಾಂತರಾದಾಗ ನಿಮ್ಮ ಸುಖ-ದುಃಖಗಳನ್ನು ಹಂಚಿಕೊಳ್ಳುವ ಮಿತ್ರರನ್ನು ಹೊಂದುವಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.