ADVERTISEMENT

ದಿನ ಭವಿಷ್ಯ: ಜನವರಿ 9 ಶುಕ್ರವಾರ 2026– ಜನರ ಜೊತೆಯಲ್ಲಿ ಬೆರೆಯುವ ಅಭ್ಯಾಸ ಇರಲಿ

ದಿನ ಭವಿಷ್ಯ: ಜನವರಿ 9 ಶುಕ್ರವಾರ 2026

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 8 ಜನವರಿ 2026, 18:42 IST
Last Updated 8 ಜನವರಿ 2026, 18:42 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವುದರಿಂದ ಮಾನಸಿಕ ಶಾಂತಿ, ಜೀವನೋಲ್ಲಾಸ ಹೆಚ್ಚಾಗಲಿದೆ. ಮಕ್ಕಳು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿ, ಏಕಾಗ್ರತೆಯನ್ನು ಕಾಯ್ದುಕೊಳ್ಳಿ.
  • ವೃಷಭ
  • ಜೊತೆಗೂಡಿ ಕೆಲಸ ಮಾಡುವುದು, ನಾಲ್ಕಾರು ಜನರ ಜೊತೆಯಲ್ಲಿ ಬೆರೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಆಫೀಸಿನಲ್ಲಿ ಉಂಟಾಗಿದ್ದ ಸಮಸ್ಯೆಗಳು ತನ್ನಿಂತಾನೆ ಬಗೆ ಹರಿಯಲಿವೆ.
  • ಮಿಥುನ
  • ಸತ್ಯ ವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು ಎಂಬುವ ಮಾತನ್ನು ನೆನಪಿನಲ್ಲಿ ಇಟ್ಟುಕೊಂಡಿರುವುದು ಒಳ್ಳೆಯದು. ಕಾರ್ಯರಂಗದಲ್ಲಿ ಅಪವಾದದ ಭೀತಿ ಕಳವಳ ಮೂಡಿಸಲಿದೆ.
  • ಕರ್ಕಾಟಕ
  • ಇಂದು ಶ್ರೀಲಕ್ಷ್ಮಿ ಸಮೇತ ವೆಂಕಟರಮಣನ ಕೃಪಾಕಟಾಕ್ಷಕ್ಕೆ ಪಾತ್ರರಾಗಿ ಶುಭವಾಗುತ್ತದೆ. ಸ್ವಂತ ಉದ್ಯೋಗದಲ್ಲಿ ಅಭಿವೃದ್ಧಿಯನ್ನು ಹೊಂದುವಿರಿ. ಸಂಬಂಧಿಗಳಿಂದ ಸಂತಸದ ಸುದ್ದಿ ಕೇಳುವಿರಿ.
  • ಸಿಂಹ
  • ದೊಡ್ಡ ಪ್ರಮಾಣದ ಸಿಹಿ ತಿಂಡಿಯ ತಯಾರಕರಿಗೆ ಕಾರ್ಮಿಕರ ಕೊರತೆ ಎದುರಾಗಲಿದೆ. ಉದ್ಯೋಗದಲ್ಲಿನ ಪ್ರಯತ್ನಗಳು ಫಲಪ್ರದ. ವಿದೇಶ ಪ್ರವಾಸದ ಯೋಗವಿದೆ.
  • ಕನ್ಯಾ
  • ಬರೆಯುತ್ತಿರುವ ಪುಸ್ತಕಕ್ಕೆ ನಿಮ್ಮ ಕಣ್ಣೆದುರು ನಡೆದ ಒಂದು ಘಟನೆ ಪ್ರೇರಣೆಯಾಗಬಹುದು. ಸರ್ಕಾರಿ ಕೆಲಸಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿಕೊಳ್ಳುವ ಯೋಚನೆಯನ್ನು ಮಾಡಿ.
  • ತುಲಾ
  • ಕೆಲಸವನ್ನು ಹುಡುಕುವ ಬದಲು ಉನ್ನತ ವಿದ್ಯಾಭ್ಯಾಸದ ಬಗ್ಗೆ ಒಲವು ತೋರಿಸಿ. ಕುಲದೇವರ ದರ್ಶನದಿಂದ ಎಲ್ಲಾ ವ್ಯವಹಾರಗಳಲ್ಲಿ ಅಭಿವೃದ್ಧಿ ಸಾಧಿಸಬಲ್ಲಿರಿ.
  • ವೃಶ್ಚಿಕ
  • ದೈಹಿಕ ಮತ್ತು ಆರ್ಥಿಕ ಶಕ್ತಿಯನ್ನು ವ್ಯಯಿಸದೇ ಸಿಕ್ಕ ಸಮಯದಲ್ಲಿ ಕಾರ್ಯವೆಸಗುವ ಚಾಣಾಕ್ಷತನ ಇರುವುದು. ದೃಢ ನಿರ್ಧಾರ ಕೈಗೊಂಡ ಫಲದಿಂದಾಗಿ ಫಲಿತಾಂಶ ಪಡೆಯುವಿರಿ.
  • ಧನು
  • ಮದುವೆಗೆ ಸಂಬಂಧಿಸಿದ ಮಾತುಕತೆಗಳು ಗಮನಕ್ಕೆ ಬಾರದೇ ಹೋಗಬಹುದು. ನಂಬಿ ಕೆಟ್ಟವರಿಲ್ಲ ಎಂಬ ಮಾತು ನಿಮ್ಮ ಪಾಲಿಗೆ ಅಕ್ಷರಶಃ ಸತ್ಯವಾಗಲಿದೆ.
  • ಮಕರ
  • ಸಾಮರ್ಥ್ಯ, ದಕ್ಷತೆ, ಸೇವಾ ಮನೋಭಾವಗಳಿಂದ ಸಂಸ್ಥೆಯಲ್ಲಿ ಜವಾಬ್ದಾರಿಯುತ ಹುದ್ದೆ ನಿಮ್ಮದಾಗಲಿದೆ. ಸರ್ಕಾರಿ ಕೆಲಸಗಳು ಗುತ್ತಿಗೆಯಾಗಿ ಲಭಿಸುವುದರ ಜತೆಗೆ ಲಾಭದಾಯಕ ಎನಿಸಲಿದೆ.
  • ಕುಂಭ
  • ಕೂಡಿ ಬಂದಂಥ ಕಂಕಣ ಬಲವು ತಪ್ಪು ನಡತೆಯಿಂದ ಅಥವಾ ಮೂರನೇ ವ್ಯಕ್ತಿಯ ಅಸಂಬದ್ಧ ಹೇಳಿಕೆಯಿಂದ ಮುರಿದು ಬೀಳುವ ಸಾಧ್ಯತೆ ಇದೆ. ಮೇಧಾವಿಗಳಿಂದ ಧನ ಸಂಪಾದನೆ ಹೊಂದುವಿರಿ.
  • ಮೀನ
  • ಕೆಲಸದಲ್ಲಿ ವಿಘ್ನಗಳು ಎದುರಾದರೂ, ಅಪೇಕ್ಷಿತ ಫಲ ದೊರಕುವುದು. ನಿಮ್ಮಲ್ಲಿರುವ ಕಲೆಗೆ ಒಂದು ನೆಲೆ ಕಲ್ಪಿಸುವ ಹೋರಾಟವು ಸಫಲವಾಗಲಿದೆ. ಪತಿಯ ಆರೋಗ್ಯದಲ್ಲಿ ಗಮನ ಇರಿಸಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.