ADVERTISEMENT

ದಿನ ಭವಿಷ್ಯ: 6 ಜನವರಿ 2026 ಮಂಗಳವಾರ– ಕೈ ತಪ್ಪಿದ ಅವಕಾಶಗಳು ದೊರೆಯಲಿವೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 5 ಜನವರಿ 2026, 18:31 IST
Last Updated 5 ಜನವರಿ 2026, 18:31 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ದೇಹದಲ್ಲಾಗುವ ಚಿಕ್ಕ ಪುಟ್ಟ ಬದಲಾವಣೆಗಳು ತೊಂದರೆಯನ್ನು ಉಂಟು ಮಾಡಬಹುದು. ದೇಹಕ್ಕೆ ಬೇಕಾದ ವಿಶ್ರಾಂತಿಯನ್ನು ಕೊಡಲು ಯೋಚಿಸಿ. ಸಂತುಷ್ಟರಾಗುವಿರಿ.
  • ವೃಷಭ
  • ಅನಾರೋಗ್ಯಕ್ಕೆ ತುತ್ತಾದರೆ ಚೇತರಿಸಿಕೊಳ್ಳುವಿರಿ. ಯುವಕರು ಸಮಾಜ ಸೇವೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುವಿರಿ. ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಜೀವದಾನ ಮಾಡುವಿರಿ.
  • ಮಿಥುನ
  • ವಾತಾವರಣದ ಬದಲಾವಣೆಯಿಂದ ಉಂಟಾದ ವ್ಯಾಧಿಗಳಿಗೆ ಆದಷ್ಟು ಬೇಗ ಔಷಧಿಯನ್ನು ಮಾಡಿಕೊಳ್ಳಿ. ಮನೆಯ ವ್ಯಕ್ತಿಗಳೊಂದಿಗೆ ಮುನಿಸಿ ಕೊಳ್ಳಬೇಡಿ. ಕೈ ತಪ್ಪಿದ ಅವಕಾಶಗಳು ದೊರೆಯಲಿವೆ.
  • ಕರ್ಕಾಟಕ
  • ರಾಜಕೀಯ ವ್ಯಕ್ತಿಗಳಿಗೆ ಜನರ ಬೆಂಬಲದ ಮತ್ತು ಆರ್ಥಿಕತೆಯ ಕೊರತೆ ಕಾಡಲಿದೆ. ಅವಿವಾಹಿತರಿಗೆ ಕುಟುಂಬದವರು ನೋಡುವ ಯಾವ ಸಂಬಂಧಗಳು ಸಹ ಸರಿ ಹೋಗದೆ ಇರಬಹುದು.
  • ಸಿಂಹ
  • ಪ್ರಮುಖ ವಿಚಾರಗಳಲ್ಲಿ ಎಲ್ಲರ ಅಭಿಪ್ರಾಯವನ್ನೂ ಕೇಳಿ ತೀರ್ಮಾನಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ. ಕೆಲಸಮಾಡುವ ಸ್ಥಳದಲ್ಲಿ ಕೆಲವು ಬದಲಾವಣೆ ಮಾಡುವುದು ಉತ್ತಮ.
  • ಕನ್ಯಾ
  • ಅನಿರೀಕ್ಷಿತವಾಗಿ ಹಾಗೂ ಅನಿವಾರ್ಯವಾಗಿ ಸಂಘ-ಸಂಸ್ಥೆಗಳ ಜವಾಬ್ದಾರಿಯ ಅಧಿಕಾರ ವಹಿಸಬೇಕಾಗುವುದು. ಘಟನಾವಳಿಗಳು ಶಕುನಗಳಂತೆ ಕಂಡು ದುರ್ಘಟನೆಗಳಿಂದ ಪಾರಾಗುವಿರಿ.
  • ತುಲಾ
  • ಮನೆಯಲ್ಲಿ ನೆಮ್ಮದಿಯನ್ನು ಕಾಪಾಡುವ ಕಾರಣಕ್ಕಾಗಿ ಹಿರಿಯರನ್ನು ಸುಮ್ಮನಿರಿಸುವಂಥ ಕೆಲಸವನ್ನು ಮಾಡುವಿರಿ. ಜಾಗ ಖರೀದಿಸಲು ಅಥವಾ ಒಪ್ಪಂದಕ್ಕೆ ಸಹಿ ಹಾಕಲು ಸುದಿನ. ಆತ್ಮವಿಶ್ವಾಸ ವೃದ್ಧಿಯಾಗುವುದು.
  • ವೃಶ್ಚಿಕ
  • ಹೂಡಿಕೆ ವಿಚಾರದಲ್ಲಿ ಆಳವಾಗಿ ಯೋಚಿಸಿ ತೀರ್ಮಾನ ಕೈಗೊಳ್ಳುವಂತೆ ಮಿತ್ರರಿಂದ ಬಂದಿರುವ ಸಲಹೆ ಸರಿಯಾದದ್ದಾಗಿರುತ್ತದೆ. ಗುಪ್ತಚರ ದಳ ಮಂದಿಗೆ ಕಾರ್ಯಭಾರಗಳು ಹೆಚ್ಚಲಿವೆ.
  • ಧನು
  • ಕಷ್ಟವಾಗಿದ್ದರೂ ವೈಯಕ್ತಿಕ ಕಾರ್ಯಗಳನ್ನು ಸಾಧಿಸಿಕೊಳ್ಳುವ ಸಲುವಾಗಿ ಯಾವುದೇ ತರಹದ ವಾಮಮಾರ್ಗವನ್ನು ಹಿಡಿಯಬೇಡಿ. ಉನ್ನತ ಪೊಲೀಸ್ ಅಧಿಕಾರಿಗಳಿಗೆ ಸಂತಸದ ಸುದ್ದಿ ಕೇಳುವಂತಾಗಲಿದೆ.
  • ಮಕರ
  • ವ್ಯವಹಾರದಲ್ಲಿ ಸಂಭವಿಸುವ ಲಾಭನಷ್ಟಗಳನ್ನು ಸುಧಾರಿಸಿಕೊಂಡು ಹೋಗುವ ಮನಸ್ಸು ಬರಲಿದೆ. ನಿರೀಕ್ಷಿತ ಯಶಸ್ಸು ಪಡೆಯುವಲ್ಲಿ ತೊಡಕು ಇರಲಿದೆ. ಮನೆಯೇ ಸೌಖ್ಯವೆಂದು ಅನಿಸಲಿದೆ.
  • ಕುಂಭ
  • ಅಧಿಕವಾಗಿ ಎಣ್ಣೆಯಲ್ಲಿ ಕರಿದ ಪದಾರ್ಥ ದೇಹಪ್ರಕೃತಿಗೆ ಸರಿ ಹೊಂದುವುದಿಲ್ಲ. ಹಾಗಾಗಿ ಸಮಾರಂಭದ ಊಟದಲ್ಲಿ ಜಾಗ್ರತೆ ವಹಿಸಿ. ಸಾಂಸಾರಿಕವಾಗಿ ಸುಖ ಹಾಗೂ ನೆಮ್ಮದಿ ಇರಲಿದೆ.
  • ಮೀನ
  • ಕಾರಣವು ನಿಮಗೆ ತಿಳಿಯದೇ ಹೋದರೂ ತಂದೆ ತಾಯಿಯರ ಮುನಿಸು ಸಮಂಜಸವಾಗಿಯೇ ಇರುತ್ತದೆ. ಹೂವು ಹಣ್ಣಿನ ವ್ಯಾಪಾರಿಗಳಿಗೆ ಲಾಭದ ದಿನ. ಯೋಗಾಭ್ಯಾಸ ಮನೋಲ್ಲಾಸ ಹೆಚ್ಚಿಸುತ್ತದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.