ADVERTISEMENT

ದಿನ ಭವಿಷ್ಯ: ಜನವರಿ 7 ಬುಧವಾರ 2026– ಪಾಲುದಾರರಿಂದ ಮೋಸ ಹೋಗುವ ಸಾಧ್ಯತೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 6 ಜನವರಿ 2026, 19:06 IST
Last Updated 6 ಜನವರಿ 2026, 19:06 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಸತ್ಯದ ಹಾದಿಗೆ ಯಾವಾಗಲೂ ಅಡೆತಡೆಗಳಿರುತ್ತವೆ ಎಂಬುದನ್ನು ಮರೆಯದಿರಿ. ಆದರೆ ಜಯವೂ ಇರುವುದು ಎಂಬುದನ್ನು ಅರಿಯಿರಿ. ನಿಮ್ಮ ನೆಚ್ಚಿನ ಕಲಾವಿದರನ್ನು ಭೇಟಿಯಾಗಲು ಸ್ನೇಹಿತರು ಸಹಾಯ ಮಾಡಲಿದ್ದಾರೆ.
  • ವೃಷಭ
  • ಬಹು ದಿನಗಳ ಕಠಿಣ ಪ್ರಯತ್ನಗಳು ಫಲಕಾರಿಯಾಗಿ ಆರ್ಥಿಕವಾಗಿ ಅನುಕೂಲ ಮತ್ತು ಮನಸ್ಸಿಗೆ ಸಂತೋಷ ಉಂಟಾಗುವುದು. ಮನೆಯ‌ ಬಗ್ಗೆ ಹೆಚ್ಚು ಗಮನ ನೀಡಬೇಕಾಗುವುದು.
  • ಮಿಥುನ
  • ನಿರ್ಮಾಣ ಕಾರ್ಯದಂಥ ‌ಯೋಜನೆಗಳು ನಿರಾತಂಕವಾಗಿ ಮುಂದುವರಿಯಲಿದೆ. ಬದಲಾವಣೆ ಬಯಸಿದಲ್ಲಿ ಕಾಯುವುದು ಆವಶ್ಯ. ವೈದ್ಯ ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಪ್ರಗತಿ ಕಂಡು ಬರುವುದು.
  • ಕರ್ಕಾಟಕ
  • ಹಣಕಾಸಿನ ವಿಚಾರದಲ್ಲಿ ಭವಿಷ್ಯದ ಕುರಿತು ಯೋಚಿಸಿ ನಿರ್ಧಾರ ಕೈಗೊಳ್ಳುವುದರಿಂದ ಮುಂದಿನ ದಿನಗಳು ನೆಮ್ಮದಿದಾಯಕವಾಗಿ ಇರುವುದು. ಪಾಲುದಾರರಿಂದ ಮೋಸ ಹೋಗುವ ಸಾಧ್ಯತೆಯು ಇರಲಿದೆ.
  • ಸಿಂಹ
  • ವಿಶೇಷ ಕಾರಣದಿಂದಾಗಿ ಮನೆಗೆ ಬರುತ್ತಿರುವ ಮಗಳಿಗೆ ಪ್ರಿಯವಾಗುವ ಖಾದ್ಯಗಳನ್ನು ತಯಾರು ಮಾಡುವಿರಿ. ಮಗಳ ಮಾತಿಗೆ ಬೆಲೆ ಕೊಡಿ. ಗುತ್ತಿಗೆ ವ್ಯವಹಾರಗಳಲ್ಲಿ ಎಡವಬಹುದು, ಜಾಗೃತರಾಗಿರಿ.
  • ಕನ್ಯಾ
  • ಕೆಲಸದ ಮೇಲೆ ಗಮನ ಕಡಿಮೆಯಾದಲ್ಲಿ ಸಿಗಬೇಕಾದ ಅವಕಾಶಗಳು ಬೇರೆಯವರ ಪಾಲಾಗಲಿವೆ. ಆದ್ದರಿಂದ ಸುತ್ತಲಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ವ್ಯವಹರಿಸಿ. ಎಲ್ಲಾ ಕಾರ್ಯಗಳು ಶುಭವಾಗುವುದು.
  • ತುಲಾ
  • ನೀವು ಅಂದುಕೊಂಡಂತೆ ಪ್ರಯಾಣ ಸುಗಮವಾಗಿರುವುದಿಲ್ಲ. ಆದ್ದರಿಂದ ರಾಹುಕಾಲದ ಬಳಿಕ ಸಂಚಾರ ಮಾಡಿ. ತಾಂತ್ರಿಕ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವವರಿಗೆ ಉತ್ತಮ ಅವಕಾಶಗಳು ಅರಸಿ ಬರಲಿವೆ.
  • ವೃಶ್ಚಿಕ
  • ಉಪಾಹಾರ ಮಂದಿರ, ಐಸ್‌ಕ್ರೀಮ್, ತಂಪು ಪಾನೀಯದ ಅಂಗಡಿಯವರಿಗೆ ಈ ದಿನವು ಸುಗ್ಗಿ ಹಬ್ಬದಂತಾಗುವುದು. ಆಯುರ್ವೇದ ಔಷಧಿ ಸೇವನೆಯಿಂದ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು.
  • ಧನು
  • ಈ ದಿನ ಗ್ರಹಗಳು ಪೂರಕವಾಗಿವೆ. ನಿಮ್ಮಿಚ್ಛೆಯಂತೆ ಚಟುವಟಿಕೆಗಳು ನಡೆಯುವುದು. ಈ ಫಲವನ್ನು ಸದುಪಯೋಗಪಡಿಸಿಕೊಳ್ಳಿರಿ. ಮಕ್ಕಳು ಮಳೆಯಲ್ಲಿ ನೆನೆಯದಂತೆ ನೋಡಿಕೊಳ್ಳುವುದೇ ಸವಾಲಾಗುವುದು.
  • ಮಕರ
  • ವಿವಾಹ ಸಂಬಂಧ ನಿಮ್ಮ ಮನೋಸಂಕಲ್ಪವನ್ನು ಈಡೇರಿಸಿಕೊಳ್ಳಲು ತಾಯಿಯ ಮತ್ತು ಅಣ್ಣಂದಿರ ಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗುವಿರಿ. ಕುಟುಂಬದಲ್ಲಿ ನಡೆದ ದುರ್ಘಟನೆಗಳಿಂದ ಮನಸ್ಸು ದುರ್ಬಲವಾಗಬಹುದು.
  • ಕುಂಭ
  • ಬಹುಜನರಲ್ಲಿ ಮಾಡಿದ ಸಾಲಗಳು ತೀರಿದ್ದರಿಂದ ಮನೆಯಲ್ಲಿ ನೆಮ್ಮದಿಯ ವಾತಾವರಣ ಸೃಷ್ಟಿಯಾಗಲಿದೆ. ವ್ಯವಸಾಯಗಾರರಿಗೆ ಹೆಚ್ಚಿನ ಬೆಳೆ ಕೈ ಸೇರುವ ನಿರೀಕ್ಷೆ ಇರುವುದು. ಗುರುವಿನ ಮಾರ್ಗದರ್ಶನ ಪಡೆಯುವಿರಿ.
  • ಮೀನ
  • ಉದ್ಯೋಗ ಬದಲಾವಣೆ ವಿಚಾರದಲ್ಲಿದ್ದ ಗೊಂದಲವನ್ನು ಮಾರ್ಗದರ್ಶಕರ ಸೂಚನೆಯಂತೆ ನಿವಾರಿಸಿಕೊಳ್ಳಿರಿ. ಅಪರಿಚಿತರೊಬ್ಬರ ಅನವಶ್ಯಕವಾದ ಮಾತುಗಳು ನಿಮ್ಮ ತಾಳ್ಮೆಯನ್ನು ಕೆಡಿಸುತ್ತವೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.