ADVERTISEMENT

ದಿನ ಭವಿಷ್ಯ: ಹೊಸ ಜೀವನ ಪ್ರಾರಂಭವಾಗುವುದರಿಂದ ದೇವತಾ ಕಾರ್ಯ ಗಳ ಬಗ್ಗೆ ಯೋಚಿಸಿ.

ದಿನ ಭವಿಷ್ಯ: ಫೆ. 09–02–2024

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 8 ಫೆಬ್ರುವರಿ 2024, 23:53 IST
Last Updated 8 ಫೆಬ್ರುವರಿ 2024, 23:53 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ವೃತ್ತಿಗೆ ಸಂಬಂಧಿಸಿದಂತೆ ಕೆಲವೊಂದು ಉಪಯುಕ್ತ ಮಾಹಿತಿಗಳು ಲಭಿಸುವವು. ಕೋರ್ಟ್ ವ್ಯವಹಾರದಲ್ಲಿ ದೇವರ ಕೃಪೆಯಿಂದ ನಿಮ್ಮ ನಿರೀಕ್ಷೇಗೂ ಮೀರಿದ ಜಯ ಸಿಗುವುದು. ದಂತ ಬೇನೆ ಕಾಣಬಹುದು.
  • ವೃಷಭ
  • ಸಂಕಷ್ಟಕ್ಕೆ ಸಿಲುಕಿರುವ ನಿಮಗೆ ಅಪರಿಚಿತರಿಂದ ಸಹಾಯ ಹಸ್ತಗಳು ಪ್ರಾಪಿಯಾಗುವುದು. ಸಂಶೋಧನಾ ವೃತ್ತಿಯಲ್ಲಿರುವವರಿಗೆ ಈ ದಿನ ಅಧ್ಯಯನಕ್ಕೆ ಸುಸಮಯ. ವಾಹನ ಚಾಲನೆ ವೇಳೆ ಜಾಗ್ರತರಾಗಿರಿ.
  • ಮಿಥುನ
  • ಯಾವುದೇ ಸಂಕೋಚವಿಲ್ಲದೆ ನೂತನ ಕಾರ್ಯಭಾರವನ್ನು ಒಪ್ಪಿಕೊಳ್ಳಿ. ಏಕೆಂದರೆ ನಿಮ್ಮ ಮೇಲಿರುವ ನಂಬುಗೆ ಮತ್ತು ವಿಶ್ವಾಸದಿಂದಾಗಿ ಈ ಅವಕಾಶಗಳು ನಿಮ್ಮದಾಗಲಿವೆ. ವಿಲಾಸಿ ಜೀವನದ ಸುಖ ಅನುಭವಿಸಬಹುದು.
  • ಕರ್ಕಾಟಕ
  • ಹೊಸ ಜೀವನ ಪ್ರಾರಂಭವಾಗುವುದರಿಂದ ದೇವತಾ ಕಾರ್ಯ ಗಳನ್ನು ಜರುಗಿಸುವ ಬಗ್ಗೆ ಯೋಚಿಸಿ. ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರಾದರೂ ಆತಂಕ ಬೇಡ. ಕ್ರೀಡೆಗಳಲ್ಲಿ ಹೆಚ್ಚಿನ ಸಮಯ ಕಳೆಯುವಿರಿ.
  • ಸಿಂಹ
  • ನಿಮ್ಮ ತಂದೆಯ ಕನಸಾದ ಒಂದು ಹೊಸ ಯೋಜನೆಯನ್ನು ನೀವು ಪ್ರಾರಂಭಿಸುವಿರಿ. ಸಂಸ್ಥೆಯೊಂದರ ಸಲಹೆಗಾರರಾಗಿ ನೇಮಕಗೊಂಡಿರುವ ನಿಮ್ಮಿಂದ ಈ ದಿನ ಸಂಸ್ಥೆಗೆ ನಷ್ಟ ಸಂಭವಿಸುವಂತಾಗಬಹುದು ಜಾಗ್ರತರಾಗಿರಿ.
  • ಕನ್ಯಾ
  • ಕೆಲಸ ಕಾರ್ಯದಲ್ಲಿ ಸಮಾನ ಮನಸ್ಕರು ಸಿಗುವುದರಿಂದ ವ್ಯವಸ್ಥಿತವಾಗಿ ಮಾತುಕತೆ ನಡೆದು ಕಾರ್ಯಭಾರವು ಸುಗಮವಾಗುತ್ತದೆ. ನಿಮ್ಮ ಪರೋಪಕಾರ ಮನೋಭಾವದಿಂದಾಗಿ ಯಶಸ್ಸು ಲಭಿಸಲಿದೆ.
  • ತುಲಾ
  • ಆಲಸ್ಯಕರ ದೇಹ ಸ್ಥಿತಿಯಿಂದ ಕೆಲಸ ಕಾರ್ಯ ವಿಳಂಬಗತಿಯಲ್ಲಿ ಸಾಗಲಿದೆ. ಆದಾಯ ಸ್ಥಿರವಾಗಿ ಇರುವುದು. ಮನಸ್ಸಿನಲ್ಲಿ ಏಕಾಗ್ರತೆಯಿಂದ ಶಿವನ ನಾಮ ಸ್ಮರಣೆ ಅಥವಾ ಧ್ಯಾನ ಮಾಡುವುದು ಒಳ್ಳೆಯದು.
  • ವೃಶ್ಚಿಕ
  • ಅಪರೂಪದ ಮತ್ತು ಸಂತೋಷಮಯವಾದ ಔತಣ ಕೂಟ ವೊಂದರಲ್ಲಿ ಭಾಗವಹಿಸುವ ಸಲುವಾಗಿ ಆಮಂತ್ರಣ ಬರಲಿದೆ. ಕಾರ್ಮಿಕ ಜನರಿಗೆ ಆಡಳಿತ ವರ್ಗದವರಿಂದ ಅನೇಕ ಅನುಕೂಲಗಳು ಉಂಟಾಗಲಿವೆ.
  • ಧನು
  • ದಾಖಲೆ ಪತ್ರಗಳನ್ನು ಬರೆಸುವ ಸಂದರ್ಭವಿದ್ದಲ್ಲಿ, ಸಂಖ್ಯೆಗಳಲ್ಲಿ ಅಥವಾ ವಾಕ್ಯಗಳಲ್ಲಿ ಹೆಚ್ಚಿನ ಗಮನವಹಿಸಿ ಮತ್ತು ಪರಿಣತರ ಅನುಭವವನ್ನು ಕೇಳಿ ಮುನ್ನುಗ್ಗಿ. ವಾದವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿ.
  • ಮಕರ
  • ನಿಮ್ಮ ಪರೋಪಕಾರದಂಥ ಒಳ್ಳೆಯ ನಿರ್ಧಾರಗಳಿಂದ ಸಹೋದ್ಯೋಗಿಗಳಿಗೆ ಸಂತಸವಾಗುವುದು. ಹೂಡಿಕೆ ವಿಚಾರದಲ್ಲಿ ಎಚ್ಚರಿಕೆಯಿಂದ ತೀರ್ಮಾನ ಕೈಗೊಳ್ಳಿ. ಭವಿಷ್ಯದ ಕುರಿತು ಗಂಭೀರ ಚರ್ಚೆ ನಡೆಸುವಿರಿ.
  • ಕುಂಭ
  • ಬಹಳ ದಿನದ ನಂತರ ಸಹೋದರಿ ಆಗಮನ ಮತ್ತು ಭೇಟಿಯು ಮನೆಯ ಸಂತೋಷಕ್ಕೆ ಕಾರಣವಾಗುತ್ತದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಕೆಲಸಗಳನ್ನು ಈ ದಿನದಲ್ಲಿ ಪೂರ್ತಿಗೊಳಿಸುವ ಪ್ರಯತ್ನ ಮಾಡಿ.
  • ಮೀನ
  • ಸಮಾಜದಲ್ಲಿ ಅದರಲ್ಲೂ ವಿಶೇಷವಾಗಿ ಹೆಂಡತಿಯ ಬಳಗದಲ್ಲಿ ಆದಷ್ಟು ಮೌನವಾಗಿರಲು ನಿಶ್ಚಯಿಸಿ. ನೂತನ ವಾಹನ ಕೊಳ್ಳುವುದನ್ನು ಸ್ವಲ್ಪ ದಿನಗಳ ಮಟ್ಟಿಗೆ ಮುಂದೂಡುವುದು ಎಲ್ಲಾ ರೀತಿಯಲ್ಲೂ ಉತ್ತಮ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.