ದಿನ ಭವಿಷ್ಯ: ಕೋಪ ನಿಯಂತ್ರಿಸದಿದ್ದರೆ ಸಹೋದರರು, ಗೆಳೆಯರು ಎದುರಾಳಿಗಳಾಗುವ ಸಂಭವ
ದಿನ ಭವಿಷ್ಯ: 27 ಜುಲೈ 2024 ಶನಿವಾರ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 26 ಜುಲೈ 2024, 23:34 IST
Last Updated 26 ಜುಲೈ 2024, 23:34 IST
ದಿನ ಭವಿಷ್ಯ
ಮೇಷ
ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕ ಉಪಕಾರಕ್ಕಿಂತ ತೊಂದರೆಗೆ ಕಾರಣವಾಗುವುದು. ದೀನರ ಸೇವೆಯಿಂದ ಅದೃಷ್ಟ ಇಮ್ಮಡಿಗೊಳ್ಳಲಿದೆ. ಆಲಂಕಾರಿಕ ವಸ್ತು ಖರೀದಿಗೆ ಹಣ ವಿನಿಯೋಗಿಸುವಿರಿ.
ವೃಷಭ
ಶ್ರದ್ಧೆ, ತಾಳ್ಮೆ ಹಾಗೂ ಹಿಂದಿನ ಸೋಲು ಹೇಳಿಕೊಟ್ಟ ಪಾಠದಿಂದ ಕಾರ್ಯ ಸಿದ್ಧಿಯಾಗಲಿದೆ. ಕೊಟ್ಟ ಮಾತು ಉಳಿಸಿಕೊಳ್ಳಲು ಶ್ರಮಿಸಿ. ಕುಟುಂಬ ಸದಸ್ಯರ ಆರೋಗ್ಯದ ಬಗೆಗಿನ ಚಿಂತೆ ತಪ್ಪಿದ್ದಲ್ಲ.
ಮಿಥುನ
ದೈವಾನುಗ್ರಹ ನಿಮ್ಮ ಪಾಲಿಗಿದ್ದು, ತೊಂದರೆಗಳನ್ನು ನಿವಾರಿಸಿ ವೃತ್ತಿರಂಗದಲ್ಲಿ ಉತ್ತಮ ರೀತಿಯಲ್ಲಿ ಮುಂದುವರಿಯಲು ಪೂರಕವಾಗುತ್ತದೆ. ಕಾರ್ಖಾನೆ ಕೆಲಸಗಾರರ ಬೇಡಿಕೆಗಳು ಇತ್ಯರ್ಥವಾಗಲಿವೆ.
ಕರ್ಕಾಟಕ
ಗುರಿ ಸಾಧನೆಗೆ ಅವಿರತ ಶ್ರಮ ಹಾಗೂ ಆರ್ಥಿಕ ಬಲ ಅಗತ್ಯ ಮತ್ತು ಅನಿವಾರ್ಯವಾಗುವುದು. ಹಾಗಾಗಿ ಆಲಸ್ಯವನ್ನು ಬಿಟ್ಟು ಶ್ರದ್ಧೆಯಿಂದ ಸಿದ್ಧತೆ ನಡೆಸುವುದು ಒಳಿತು.
ಸಿಂಹ
ಕೋಪವನ್ನು ನಿಯಂತ್ರಿಸದಿದ್ದರೆ ಸಹೋದರರು ಮತ್ತು ಸ್ನೇಹಿತರು ಎದುರಾಳಿಗಳಾಗುವ ಸಂಭವವಿದೆ. ಸ್ವಪ್ರಯತ್ನದಿಂದ ಶ್ರಮಿಸಿದಲ್ಲಿ ಆರ್ಥಿಕ ಬೆಳವಣಿಗೆ ಉಂಟಾಗುವುದು.
ಕನ್ಯಾ
ಕಾರ್ಯಕ್ಷೇತ್ರದಲ್ಲಿ ಶಾಂತಚಿತ್ತದಿಂದ ವ್ಯವಹರಿಸಿದರೆ ಉತ್ತಮ ಫಲಿತಾಂಶ ಸಿಗಲಿದೆ. ವೃತ್ತಿ ಹಾಗೂ ಪ್ರವೃತ್ತಿಗಳಲ್ಲಿ ಸಮತೋಲನ ಕಾಯ್ದುಕೊಳ್ಳಿ. ಮಕ್ಕಳ ಶೈಕ್ಷಣಿಕ ವಿಚಾರದಲ್ಲಿ ಮುತುವರ್ಜಿ ವಹಿಸಿ.
ತುಲಾ
ಮನೆಯಲ್ಲಿನ ಸಂಭ್ರಮಾಚರಣೆಯಿಂದಾಗಿ ಅಥವಾ ವೃಥಾ ತಿರುಗಾಟದಿಂದಾಗಿ ಖರ್ಚು ಹೆಚ್ಚಲಿದೆ. ಏನನ್ನೇ ಆಗಲಿ ಸಾಧಿಸಿ ತೋರಿಸುವ ಶಕ್ತಿ ಸಾಮರ್ಥ್ಯವಿರುವ ನಿಮಗೆ ಉದ್ಯೋಗದಲ್ಲಿ ಪ್ರಗತಿ ಇರುವುದು.
ವೃಶ್ಚಿಕ
ಮಹತ್ವದ ನಿರ್ಧಾರ ತೆಗೆದುಗೊಳ್ಳಲು ತಾಳ್ಮೆ ಅತಿ ಮುಖ್ಯ. ಉದ್ಯೋಗ ಬದಲಿಸುವ ಬಗ್ಗೆ ಆಳವಾಗಿ ಯೋಚಿಸುವುದು ಒಳಿತು. ನವದಂಪತಿಗಳಿಗೆ ಸಂತಾನದ ಶುಭ ಸುದ್ದಿ ಕೇಳಿ ಬರುವುದು.
ಧನು
ಯಾವುದೇ ವಿಷಯವನ್ನು ಸೋಮಾರಿತನದಿಂದಾಗಲೀ, ಆರ್ಥಿಕ ಸಮಸ್ಯೆಯಿಂದಾಗಲೀ ಮುಂದೂಡುವುದು ಸರಿಯಲ್ಲ. ದೈವಬಲವಿರುವ ಕಾರಣ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.
ಮಕರ
ಇಟ್ಟ ಗುರಿಯನ್ನು ಸಾಧಿಸಿದ ಸಂತೃಪ್ತಿ ನಿಮಗೆ ಸಿಗಲಿದೆ. ಕನ್ಯೆಯ ವಿವಾಹದ ವಿಚಾರದಲ್ಲಿ ಶುಭವಾಗುವ ಲಕ್ಷಣವಿದೆ. ನಿಮ್ಮ ವಾಸಸ್ಥಾನ ಅಥವಾ ಉದ್ಯೋಗ ಬದಲಾಗುವ ಸಂಭವವಿದೆ.
ಕುಂಭ
ಬೆಳ್ಳಗೆ ಇರುವುದೆಲ್ಲವೂ ಹಾಲು ಎಂದು ನಂಬುವ ಮನೋಧರ್ಮದಿಂದ ಮೋಸ ಹೋಗುವಿರಿ. ಕೆಲಸವನ್ನು ಗುತ್ತಿಗೆ ನೀಡುವ ಆಲೋಚನೆ ಸಮಸ್ಯೆ ಸೃಷ್ಟಿಸಲಿದೆ. ವೃತ್ತಿ ಜೀವನದಲ್ಲಿ ಯಶಸ್ಸು ಸಿಗಲಿದೆ.
ಮೀನ
ಜವಳಿ ಉದ್ಯಮದವರಿಗೆ ರಫ್ತು ವ್ಯಾಪಾರದಿಂದ ಹೆಚ್ಚಿನ ಲಾಭ ದೊರೆಯಲಿದೆ. ಏನನ್ನಾದರೂ ಸಾಧಿಸಲೇ ಬೇಕೆಂದಿರುವ ನಿಮಗೆ
ಆತ್ಮವಿಶ್ವಾಸದ ಕೊರತೆ ಕಾಣಿಸದು.