ದೇಹದಲ್ಲಿ ಶಕ್ತಿ ಕುಂದಿದಂತೆ ಭಾಸವಾಗುವುದು. ಆದಾಯವು ನಿರೀಕ್ಷೆಯಷ್ಟಿದ್ದರೂ, ಖರ್ಚಿನ ಪಟ್ಟಿಯೂ ಬೆಳೆಯುತ್ತದೆ. ಹಿರಿಯರ ಜತೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶವಿರುವುದಿಲ್ಲ. ಮಕ್ಕಳ ನಡವಳಿಕೆಯ ಬಗ್ಗೆ ಸರಿಯಾಗಿ ಗಮನ ಇಡುವುದು ಒಳ್ಳೆಯದು. ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಸಂಗಾತಿ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ಕೃಷಿ ವ್ಯವಹಾರಗಳಿಂದ ಲಾಭ ಕಡಿಮೆ ಇರುತ್ತದೆ. ನಿಮ್ಮ ವೃತ್ತಿಯಲ್ಲಿ ಅಭಿವೃದ್ಧಿ ಇರುತ್ತದೆ. (ಅಶ್ವಿನಿ ಭರಣಿ ಕೃತಿಕ 1)
ವೃಷಭ
ಅಲಂಕಾರದ ಬಗ್ಗೆ ಹೆಚ್ಚಿನ ಗಮನ ಕೊಡುವಿರಿ. ಆದಾಯವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ಮಕ್ಕಳಿಂದ ನಿಮಗೆ ಉತ್ತಮ ಸಹಕಾರ ಸಿಗುತ್ತದೆ. ಮಕ್ಕಳಿಗಾಗಿ ಸ್ವಲ್ಪಹಣ ಖರ್ಚಾಗುತ್ತದೆ. ಸಂಗೀತಗಾರರಿಗೆ ಬೇಡಿಕೆ ಕಡಿಮೆಯಾಗಬಹುದು. ಸಂಗಾತಿಯಿಂದ ಕುಟುಂಬದಲ್ಲಿ ಸಂತೋಷದ ವಾತಾವರಣ ಮೂಡುತ್ತದೆ. ಅನಿರೀಕ್ಷಿತ ಆದಾಯ ಲಭಿಸಬಹುದು. ತಂದೆಯಿಂದ ಕೃಷಿ ಭೂಮಿ ದೊರೆಯುವ ಸಾಧ್ಯತೆಗಳಿವೆ. ಕೆಲವರಿಗೆ ವಿದೇಶಿಯಾನದ ಯೋಗವಿದೆ.
(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಮಿಥುನ
ನಿಮ್ಮ ನಿರೀಕ್ಷೆಗೆ ಮೀರಿದ ಗೌರವ ನಿಮಗೆ ದೊರೆಯುತ್ತದೆ. ಆದಾಯವು ಉತ್ತಮವಾಗಿರುತ್ತದೆ. ಬಂಧುಗಳ ಅಸಹಕಾರ ನಿಮ್ಮನ್ನು ಕಾಡುತ್ತದೆ. ಹಣದಿಂದ ಸಂಸಾರದಲ್ಲಿ ಸಂತೋಷವನ್ನು ಕಾಣಬಹುದು. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶವಿರುತ್ತದೆ. ಕೃಷಿ ಸಲಕರಣೆಗಳನ್ನು ಬಳಸುವಾಗ ಎಚ್ಚರ. ಸಂಗಾತಿಯು ಎಲ್ಲ ಸಂದರ್ಭಗಳಲ್ಲೂ ನಿಮಗೆ ಪೂರಕವಾಗಿರುವರು. ರಾಜಕಾರಣಿಗಳ ಸಹಾಯದಿಂದ ವೃತ್ತಿಯಲ್ಲಿ ಮೇಲೆ ಬರಬಹುದು. ವೃತ್ತಿಯಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯುತ್ತದೆ.
(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಕರ್ಕಾಟಕ
ಬುದ್ಧಿವಂತಿಕೆಯಿಂದ ಸಾಕಷ್ಟು ಗೌರವವನ್ನು ಪಡೆದುಕೊಳ್ಳುವಿರಿ. ಆತ್ಮವಿಶ್ವಾಸವು ಹೆಚ್ಚಾಗಿರುತ್ತದೆ. ಆದಾಯವು ಕಡಿಮೆ ಇರುತ್ತದೆ. ಕೃಷಿಯಿಂದ ಆದಾಯವನ್ನು ನಿರೀಕ್ಷೆ ಮಾಡಬಹುದು. ಒರಟು ಮಾತುಗಳು ಖಂಡಿತ ಬೇಡ. ಕಟ್ಟಡಗಳಿಗೆ ಅಲಂಕಾರ ಮಾಡುವ ನುರಿತ ಕೆಲಸಗಾರರಿಗೆ ಬೇಡಿಕೆ ಹೆಚ್ಚಾಗಿ, ಆದಾಯವು ಹೆಚ್ಚುತ್ತದೆ. ಮಕ್ಕಳಿಂದ ಕಠಿಣ ನುಡಿಗಳನ್ನು ಕೇಳಬೇಕಾಗಬಹುದು. ಪಿತ್ತ ಸಂಬಂಧಿ ದೋಷಗಳು ಕಾಡಬಹುದು.
( ಪುನರ್ವಸು 4 ಪುಷ್ಯ ಆಶ್ಲೇಷ)
ಸಿಂಹ
ಕ್ರೀಡಾಪಟುಗಳಿಗೆ ಉತ್ತಮ ಈಗ ಅವಕಾಶ ಮತ್ತು ಸೌಲಭ್ಯ ದೊರೆಯುತ್ತವೆ. ಆದಾಯವು ಕಡಿಮೆಯಿದ್ದು, ಖರ್ಚು ಹೆಚ್ಚಾಗುವ ಸಾಧ್ಯತೆಗಳಿವೆ. ನಿಮ್ಮ ವೈಯಕ್ತಿಕ ಮನೋಬಲ ಕುಗ್ಗಿದಂತಾಗುತ್ತದೆ. ಸಂಗಾತಿಯಿಂದ ಸಂಸಾರದಲ್ಲಿ ಸಂತೋಷ ಹೆಚ್ಚುತ್ತದೆ. ಹಳೆಯ ಕಾಯಿಲೆಗಳು ಮರುಕಳಿಸುವ ಸಾಧ್ಯತೆಗಳಿವೆ. ಸಂಗಾತಿಯ ಕಠಿಣ ಪ್ರಶ್ನೆಗಳನ್ನು ಎದುರಿಸಲಾಗದೆ ಒದ್ದಾಡುವಿರಿ. ವ್ಯಾಪಾರದಲ್ಲಿ ಅನೀರಿಕ್ಷಿತ ಹಿನ್ನಡೆ ಕಾಣಬಹುದು.
(ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಕನ್ಯಾ
ಆದಾಯವು ಕಡಿಮೆಯಿದ್ದು, ಹಿರಿಯರ ಸಹಕಾರದಿಂದ ಆರ್ಥಿಕ ಸ್ಥಿರತೆಯನ್ನು ಕಾಣಬಹುದು. ಕೃಷಿಯಿಂದ ನಿಮ್ಮ ನಿರೀಕ್ಷೆಯಷ್ಟು ಆದಾಯ ಬರುವುದಿಲ್ಲ. ಮನೆಪಾಠ ಹೇಳಿಕೊಡುವವರ ಆದಾಯ ಹೆಚ್ಚುತ್ತದೆ. ಮಕ್ಕಳ ಏಳಿಗೆ ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ. ವಿದೇಶಿ ಸಂಸ್ಥೆಗಳಲ್ಲಿ ಹೂಡಿದ ಹಣ ಈಗ ಮುಳುಗಡೆಯಾಗಬಹುದು. ಸಂಗಾತಿಯ ಉದಾಸೀನ ಮನೋಭಾವ ಚಿಂತೆಗೀಡುಮಾಡುತ್ತದೆ. ಎಲೆಕ್ಟ್ರಾನಿಕ್ ಉದ್ದಿಮೆಗಾರರಿಗೆ ವ್ಯಾಪಾರದಲ್ಲಿ ಸ್ವಲ್ಪ ಹಿನ್ನಡೆಯಾಗಬಹುದು. ಸ್ತ್ರೀಯರ ಅಲಂಕಾರಿಕ ವಸ್ತುಗಳನ್ನು ತಯಾರು ಮಾಡುವವರಿಗೆ ಲಾಭ ಹೆಚ್ಚುತ್ತದೆ.
( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ತುಲಾ
ಆದಾಯವು ಕಡಿಮೆ ಇರುತ್ತದೆ. ನಿಮ್ಮ ನಡವಳಿಕೆಗಳಲ್ಲಿ ಈಗ ಯಾವುದೋ ಗುರಿಸಾಧನೆ ಮಾಡುವ ಆಲೋಚನೆ ಇರುತ್ತದೆ. ಕೃಷಿ ಭೂಮಿಗೆ ಹಣ ಹಾಕುವ ಮುಂಚೆ ಎಚ್ಚರವಹಿಸಿ. ಮಕ್ಕಳು ಸ್ವಲ್ಪ ಕಠಿಣವಾಗಿ ಮಾತನಾಡುವ ಸಾಧ್ಯತೆಗಳಿವೆ. ವಿದೇಶಿ ವ್ಯವಹಾರ ಮಾಡುವವರ ಆದಾಯ ಹೆಚ್ಚುತ್ತದೆ. ಹಳೆಯ ಮೂಳೆನೋವುಗಳು ಕೆಲವರನ್ನು ಕಾಡಬಹುದು. ನಿಮ್ಮ ಕೆಲಸ ಕಾರ್ಯಗಳಿಗೆ ಹಿರಿಯರಿಂದ ಸಾಲ ಸಿಗುವ ಸಾಧ್ಯತೆಗಳಿವೆ.
( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ವೃಶ್ಚಿಕ
ನಿಮ್ಮ ಸಂಗಾತಿಯ ಒಲವು ಜಾಸ್ತಿ ಆಗುತ್ತದೆ. ಆದಾಯವು ಕಡಿಮೆ ಇರುತ್ತದೆ. ನಿಮ್ಮ ಶತ್ರುಗಳೇ ಈಗ ನಿಮ್ಮ ಮಿತ್ರರಾಗುವರು. ವಿದೇಶಿ ಕಂಪನಿಗಾಗಿ ಭೂಮಿಯನ್ನು ಒದಗಿಸಿ ಕೊಡುವವರಿಗೆ ಆದಾಯ ಹೆಚ್ಚುತ್ತದೆ. ಉಷ್ಣ ಸ್ಥಾವರಗಳಲ್ಲಿ ಕೆಲಸ ಮಾಡುವವರು ಹೆಚ್ಚು ಎಚ್ಚರವಹಿಸಿ. ಸಂಗಾತಿಯಿಂದ ಧನಸಹಾಯ ಹರಿದುಬರುತ್ತದೆ. ವಿದ್ಯಾಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ಕಾನೂನಿನ ತೊಡಕುಗಳು ಎದುರಾಗಬಹುದು. ನಿಮ್ಮ ಹಿರಿಯರ ವ್ಯವಹಾರಗಳಲ್ಲಿ ನಿಮಗೂ ಪಾಲು ದೊರೆತು ಆದಾಯ ಬರುತ್ತದೆ.
(ವಿಶಾಖಾ 4 ಅನುರಾಧ ಜೇಷ್ಠ)
ಧನು
ಆಲಸಿತನದಿಂದ ಯಾವುದೇ ಕೆಲಸ ಮಾಡಲು ಮನಸ್ಸಿರುವುದಿಲ್ಲ. ಆದಾಯವು ತಕ್ಕ ಮಟ್ಟಿಗೆ ಇರುತ್ತದೆ. ವಿದೇಶದಲ್ಲಿರುವ ಸ್ನೇಹಿತರ ಸಹಾಯದಿಂದ ನೀವು ವಿದೇಶಕ್ಕೆ ಹೋಗಲು ಪ್ರಯತ್ನಪಡಬಹುದು. ಸಾಂಪ್ರದಾಯಿಕ ಕೃಷಿ ಮಾಡಲು ತಯಾರಿ ನಡೆಸುವಿರಿ. ಹಿರಿಯರ ಧಾರ್ಮಿಕ ಕಾರ್ಯಗಳಲ್ಲಿ ನೆರವಾಗುವಿರಿ. ಸಂಗಾತಿಯಿಂದ ಆರ್ಥಿಕ ಸಹಾಯ ಸಿಗುತ್ತದೆ. ಸರ್ಕಾರಿ ವ್ಯವಹಾರಗಳಲ್ಲಿ ನಿರೀಕ್ಷಿತ ಪ್ರಗತಿ ಇರುವುದಿಲ್ಲ. ವೃತ್ತಿಯಲ್ಲಿ ಹಿತಶತ್ರುಗಳು ಜಾಸ್ತಿಯಾಗಬಹುದು.
( ಮೂಲ ಪೂರ್ವಾಷಾಢ ಉತ್ತರಾಷಾಢ 1 )
ಮಕರ
ವಿದೇಶಿ ವ್ಯಾಪಾರ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ವಿದೇಶಿ ಭಾಷಾ ಬೋಧಕರಿಗೆ ಬೇಡಿಕೆ ಬರುತ್ತದೆ. ಶತ್ರುಗಳನ್ನು ಹುಡುಕಿ ಮಣಿಸುವಿರಿ. ಕೃಷಿ ತಂತ್ರಜ್ಞರಿಗೆ ನಿರೀಕ್ಷಿತ ಫಲಿತಾಂಶಗಳು ದೊರೆಯುವುದಿಲ್ಲ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ದೊರೆಯುವ ಯೋಗವಿದೆ. ಯಾವುದೇ ರೀತಿಯ ಸಾಲದ ವ್ಯವಹಾರಗಳು ಖಂಡಿತ ಬೇಡ. ಸಂಗಾತಿ ಮಾಡುತ್ತಿರುವ ಸರ್ಕಾರಿ ವ್ಯವಹಾರಗಳಲ್ಲಿ ಲಾಭ ಹೆಚ್ಚುತ್ತದೆ. ಬಂಧುಗಳು ನಿರೀಕ್ಷಿತ ಸಮಯದಲ್ಲಿ ನಿಮ್ಮ ಬೆಂಬಲಕ್ಕೆ ನಿಲ್ಲುವುದಿಲ್ಲ.
( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಕುಂಭ
ಯುವಕರಲ್ಲಿ ಕೋಪ ಹೆಚ್ಚಾಗಿರುತ್ತದೆ. ಆದಾಯವು ಕಡಿಮೆ ಇರುತ್ತದೆ. ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಉತ್ತಮ ಅನುಕೂಲವಿರುತ್ತದೆ. ಉಷ್ಣ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ನಿಮ್ಮ ಸಂಗಾತಿ ಕಡೆಯವರಿಂದ ಒಳ್ಳೆಯ ಕೆಲಸಗಳಿಗೆ ಸಹಕಾರ ದೊರೆಯುತ್ತದೆ. ಸರ್ಕಾರಿ ಗುತ್ತಿಗೆ ಹಣ ಬರುವುದು ನಿಧಾನವಾಗಬಹುದು. ನಿಮ್ಮ ಹಿರಿಯರ ಜತೆ ಪುಣ್ಯ ಕ್ಷೇತ್ರದ ದರ್ಶನಗಳನ್ನು ಮಾಡುವ ಯೋಗವಿದೆ. ಉದ್ಯೋಗ ಸ್ಥಳದಲ್ಲಿ ಅಧಿಕಾರಿಗಳು ನಿಮ್ಮ ಮೇಲೆ ಕಣ್ಣಿಡುವರು.
( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಮೀನ
ಶ್ರಮಪಟ್ಟು ಕೆಲಸ ಮಾಡಲು ಪ್ರಯತ್ನ ಪಡುವಿರಿ. ಆದಾಯವು ಮಂದಗತಿಯಲ್ಲಿರುತ್ತದೆ. ಆಸ್ತಿ ಕೊಳ್ಳಲು ಬೇಕಾದ ಹಣ ಹೊಂದಿಕೆಯಾಗಲಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ಹರಿತವಾದ ಆಯುಧಗಳಿಂದ ಗಾಯವಾಗುವ ಸಂದರ್ಭವಿದೆ. ಸಂಗಾತಿಯಿಂದ ಧಾರ್ಮಿಕ ಸ್ಥಳಗಳಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ತಾಯಿಯೊಡನೆ ಕಾವೇರಿದ ಮಾತುಗಳಾಗಬಹುದು. ತಂದೆಯಿಂದ ಬರಬೇಕಾದ ಆಸ್ತಿ ಬರುವುದು ನಿಧಾನವಾಗುತ್ತದೆ. ವೃತ್ತಿಯಲ್ಲಿ ಹೆಚ್ಚಿನ ಅನುಕೂಲಗಳಾಗುತ್ತವೆ.
( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)