ADVERTISEMENT

ವಾರ ಭವಿಷ್ಯ | 2025 ನವೆಂಬರ್ 9 –15: ಈ ರಾಶಿಯವರು ಜನರ ಕೋಪಕ್ಕೆ ಗುರಿಯಾಗುವಿರಿ

ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
Published 8 ನವೆಂಬರ್ 2025, 23:31 IST
Last Updated 8 ನವೆಂಬರ್ 2025, 23:31 IST
<div class="paragraphs"><p>ವಾರ ಭವಿಷ್ಯ</p><p></p></div>

ವಾರ ಭವಿಷ್ಯ

   
ಮೇಷ
  • ನಿಮ್ಮ ಮಾತು ಮತ್ತು ಆಚರಣೆಯಲ್ಲಿ ವ್ಯತ್ಯಾಸವಿರುತ್ತದೆ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಸೋದರಿಯರ ಅಥವಾ ತಾಯಿಯ ಸಹಕಾರ ಬಹಳ ಸಿಗುತ್ತದೆ. ಸ್ಥಿರಾಸ್ತಿಯನ್ನು ಮಾಡುವ ಯೋಗವಿದೆ. ವಿದ್ಯಾರ್ಥಿಗಳು ಹೆಚ್ಚು ಪರಿಶ್ರಮ ವಹಿಸಿದಲ್ಲಿ ಮಾತ್ರ ಫಲಿತಾಂಶ ಸಿಗುತ್ತದೆ. ಸಂಪನ್ಮೂಲಗಳ ಅಭಿವೃದ್ಧಿಗಾಗಿ ಹಲವಾರು ದಾರಿಗಳನ್ನು ಹುಡುಕುವಿರಿ. ಮಹತ್ತರವಾದ ಯೋಜನೆಗಳನ್ನು ಆರಂಭಿಸಬೇಡಿರಿ. ಮಕ್ಕಳ ವಿಷಯದಲ್ಲಿ ಸ್ವಲ್ಪ ಬೇಸರ ಮೂಡಬಹುದು. ಸ್ತ್ರೀಯರಿಗೆ ಅಧಿಕ ದೈಹಿಕ ಶ್ರಮ ಆಗಬಹುದು. ಹಣದ ವಿಷಯದಲ್ಲಿ ದುಡುಕಿನ ಮಾತುಗಳು ಬೇಡವೇ ಬೇಡ. ಪಾಲುದಾರಿಕೆಯ ವ್ಯವಹಾರಗಳಲ್ಲಿ ಕಠಿಣ ನಿಲುವುಗಳು ಬೇಡ.  (ಅಶ್ವಿನಿ ಭರಣಿ ಕೃತಿಕ 1)
  • ವೃಷಭ
  • ಸಾಮಾಜಿಕ ಕೆಲಸಗಳನ್ನು ಮಾಡುವವರಿಗೆ ಜನಮನ್ನಣೆ ಒದಗಿ ಬರುತ್ತದೆ. ನಿಮ್ಮ ಸೌಮ್ಯ ನುಡಿ ಬಂಧುಗಳಲ್ಲಿ ಸಮಾಧಾನ ತರಬಹುದು. ಆದಾಯವು ಅಗತ್ಯಗಳನ್ನು ಪೂರೈಸುತ್ತದೆ. ಚಿನ್ನದ ಆಭರಣಗಳನ್ನು ಕಂತಿನ ರೂಪದಲ್ಲಿ ಕೊಳ್ಳುವ ಯೋಗವಿದೆ. ನೀವು ಅಂದುಕೊಂಡ ಕಾರ್ಯಗಳನ್ನು ಸಾಧಿಸಲು ಹಲವು ಮಾರ್ಗಗಳ ಹುಡುಕಾಟ ಮಾಡುವಿರಿ. ಕೋರ್ಟು ಕಛೇರಿ ವ್ಯವಹಾರಗಳಲ್ಲಿ ನಿಧಾನಗತಿಯ ಫಲಿತಾಂಶವನ್ನು ಕಾಣಬಹುದು. ತಾಯಿಯೊಡನೆ ಸಂಬಂಧ ಸುಧಾರಿಸುತ್ತದೆ. ತಾಯಿಯು ನಿಮಗೆ ಆರ್ಥಿಕ ಸಹಾಯವನ್ನು ಮಾಡುವರು. ಸರ್ಕಾರಿ ಮಟ್ಟದ ಸಾಲ ಸೌಲಭ್ಯಗಳು ದೊರೆಯುತ್ತವೆ. ಕೃಷಿ ಉತ್ಪನ್ನಗಳಿಂದ ಹೆಚ್ಚು ಲಾಭವಿರುತ್ತದೆ. (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
  • ಮಿಥುನ
  • ವಾರದ ಆರಂಭ ಆಹ್ಲಾದಕರವಾಗಿರುತ್ತದೆ. ಹಿರಿಯ ಉದ್ಯೋಗಸ್ಥರಿಗೆ ಹೊಸ ರೀತಿಯ ಸ್ಥಾನಮಾನಗಳು ದೊರೆಯುವ ಸಾಧ್ಯತೆಗಳಿವೆ. ಹಣದ ಒಳಹರಿವು ಸಮಾಧಾನ ತರುತ್ತದೆ. ವೃತ್ತಿರಂಗದಲ್ಲಿ ಸೂಕ್ತ ಬೆಳವಣಿಗೆಯನ್ನು ಕಾಣಬಹುದು. ಕೆಲವು ರಾಜಕಾರಣಿಗಳಿಗೆ ಸ್ಥಾನಮಾನ ಅನಿರೀಕ್ಷಿತವಾಗಿ ದೊರೆಯುತ್ತದೆ. ಗುತ್ತಿಗೆದಾರರಿಗೆ ವ್ಯವಹಾರದಲ್ಲಿ ಮುನ್ನಡೆ ಇರುತ್ತದೆ. ಉದ್ದಿಮೆದಾರರಿಗೆ ಇದ್ದ ಸಂಕಷ್ಟಗಳು ನಿವಾರಣೆಯಾಗಿ ಉದ್ದಿಮೆಯನ್ನು ಮುನ್ನಡೆಸುವ ಅವಕಾಶ ಒದಗುತ್ತದೆ. ಸಾಕಷ್ಟು ಆಲೋಚನೆ ಮಾಡಿ ಆಂತರಿಕ ಗೊಂದಲಗಳನ್ನು ನಿವಾರಣೆ ಮಾಡಿಕೊಳ್ಳುವಿರಿ. ಸಂಘ ಸಂಸ್ಥೆಗಳ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶಗಳಿವೆ. (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
  • ಕರ್ಕಾಟಕ
  • ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚು ಮುನ್ನಡೆ ಇರುತ್ತದೆ. ಪ್ರಮುಖ ಯೋಜನೆಗಳ ಆಗುಹೋಗುಗಳ ಬಗ್ಗೆ ಪರಿಣತರ ಹತ್ತಿರ ವಿಚಾರ ಮಾಡುವಿರಿ. ಸಂಗೀತ ಮತ್ತು ಇತರೆ ಲಲಿತ ಕಲೆಗಳಲ್ಲಿ ಇರುವವರಿಗೆ ಮನ್ನಣೆ ದೊರೆತು ಸಂತಸವಾಗುತ್ತದೆ. ಅವಿವಾಹಿತರಿಗೆ ವಿವಾಹ ಸಂಬಂಧ ಒದಗಿಬರುವ ಅವಕಾಶಗಳಿವೆ. ಆದಾಯವು ಉತ್ತಮವಾಗಿರುತ್ತದೆ. ಕೆಲವರಿಗೆ ಕಚೇರಿ ಕೆಲಸದ ಮೇಲೆ ವಿದೇಶಕ್ಕೆ ಅಥವಾ ದೂರ ಪ್ರದೇಶಗಳಿಗೆ ಹೋಗಬೇಕಾಗಬಹುದು. ಹೊಸ ವ್ಯಕ್ತಿಗಳ ಪರಿಚಯದಿಂದ ಹೊಸ ವ್ಯವಹಾರಗಳನ್ನು ಆರಂಭಿಸುವ ಸಾಧ್ಯತೆಗಳಿವೆ. ಚಿನ್ನದ ವ್ಯಾಪಾರಿಗಳಿಗೆ ವ್ಯವಹಾರ ವೃದ್ಧಿಸುತ್ತದೆ. (ಪುನರ್ವಸು 4 ಪುಷ್ಯ ಆಶ್ಲೇಷ)
  • ಸಿಂಹ
  • ಯಾವುದೇ ಕೆಲಸವನ್ನು ಆತುರದಿಂದ ಮಾಡಬೇಡಿರಿ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಶುಭಕಾರ್ಯಗಳಿಗಾಗಿ ದೂರ ಪ್ರಯಾಣದ ಸಾಧ್ಯತೆಗಳಿವೆ. ಉದ್ಯೋಗದಲ್ಲಿ ಪ್ರಗತಿಯನ್ನು ಕಾಣಬಹುದು. ಹಿರಿಯರ ಸಲಹೆಗಳಿಂದ ಬರಲಿದ್ದ ಗಂಡಾಂತರಗಳಿಂದ ಪಾರಾಗುವಿರಿ. ಗೃಹ ನವೀಕರಣ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಿರಿ. ಹಳೆ ವಾಹನವನ್ನು ನವೀಕರಣಗೊಳಿಸುವಿರಿ. ಶತ್ರುಗಳನ್ನು ಜಾಣ್ಮೆಯಿಂದ ಗೆಲ್ಲುವಿರಿ. ಗೃಹ ನಿರ್ಮಾಣ ಕಾರ್ಯಗಳನ್ನು ಈಗ ಕೈಗೆತ್ತಿಕೊಳ್ಳಬೇಡಿ. ಆಸ್ತಿ ಖರೀದಿಯಲ್ಲಿ ತಕರಾರು ಮೂಡಬಹುದು. ಹೈನುಗಾರಿಕೆ ಮಾಡುವವರಿಗೆ ಲಾಭವಿದೆ. ರಾಸಾಯನಿಕ ವಸ್ತುಗಳನ್ನು  ಮಾರಾಟ ಮಾಡುವವರಿಗೆ ಲಾಭವಿರುತ್ತದೆ. (ಮಖ  ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1) 
  • ಕನ್ಯಾ
  • ನಿಮ್ಮದೇ ಭಿನ್ನಾಭಿಪ್ರಾಯದಿಂದಾಗಿ ನಿಂತುಹೋಗಿದ್ದ ಕೆಲಸ ಈಗ ಆರಂಭಗೊಳ್ಳುವುದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ ಇರುತ್ತದೆ. ಸಂಪತ್ತಿನಲ್ಲಿ ವೃದ್ಧಿಯನ್ನು ಕಾಣಬಹುದು. ಜಲ ಸಂಬಂಧಿ ಉದ್ಯೋಗದಲ್ಲಿರುವವರಿಗೆ ಅಭಿವೃದ್ಧಿ ಇರುತ್ತದೆ. ನಿಮ್ಮ ಕೆಲಸಗಳಿಗೆ ರಾಜಕೀಯ ವ್ಯಕ್ತಿಗಳಿಂದ ಕಿರಿಕಿರಿ ಆಗಬಹುದು. ನಿಮ್ಮ ಅಭಿವೃದ್ಧಿಗೆ ಪೂರಕವಾದ ಕೆಲವು ಅವಕಾಶಗಳು ಒದಗಿಬರುತ್ತವೆ, ಅವುಗಳನ್ನು ಸರಿಯಾಗಿ ಬಳಸಿಕೊಳ್ಳಿರಿ. ಸರ್ಕಾರದ ಕಡೆಯಿಂದ ಆಗಬೇಕಾದ ಕೆಲಸಗಳು ಸ್ವಲ್ಪ ನಿಧಾನ ಆದರೂ ಆಗುತ್ತದೆ. ವಿದೇಶಿ ವ್ಯವಹಾರ ಮಾಡುತ್ತಿರುವವರಿಗೆ ಕಾನೂನಿನ ತೊಡಕುಗಳು ಬರಬಹುದು. (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
  • ತುಲಾ
  • ನಿಮ್ಮ ಕೆಲವು ನಿಲುವುಗಳಲ್ಲಿ ಆಕಸ್ಮಿಕ  ಬದಲಾವಣೆಗಳನ್ನು ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಗಳಿವೆ. ಆದಾಯವು ಸಾಮಾನ್ಯವಾಗಿರುತ್ತದೆ. ಹಿರಿಯರಿಂದ ನಿಮಗೆ  ಹೆಚ್ಚಿನ ಸಹಾಯ ದೊರೆಯುತ್ತದೆ. ವೈದ್ಯಕೀಯ ಔಷಧ ಸಂಶೋಧಕರಿಗೆ ಉತ್ತಮ ಫಲಿತಾಂಶ ದೊರೆಯುತ್ತವೆ. ವೃತ್ತಿಯಲ್ಲಿ ಹೆಚ್ಚಿನ ಒತ್ತಡ ಇರುವುದಿಲ್ಲ. ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಹಿನ್ನಡೆಯನ್ನು ಕಾಣಬಹುದು. ಕೆಲವು ವ್ಯವಹಾರಗಳಲ್ಲಿ ಅನಿರೀಕ್ಷಿತ ಲಾಭವನ್ನು ಕಾಣಬಹುದು. ಕೃಷಿಕರು ಬೆಳೆದ ಬೆಳೆಗೆ ಹೆಚ್ಚಿನ ಲಾಭ ದೊರೆಯುತ್ತದೆ. ಸಂಗಾತಿಯ ಸಲಹೆಗಳು ನಿಮಗೆ ಆತ್ಮಸ್ಥೈರ್ಯವನ್ನು ತುಂಬುತ್ತವೆ. ಆದಾಯದಷ್ಟೇ ಖರ್ಚು ಇರುತ್ತದೆ.   (ಚಿತ್ತಾ 3 4 ಸ್ವಾತಿ ವಿಶಾಖ 1 2 3)
  • ವೃಶ್ಚಿಕ
  • ವಾರದ ಆರಂಭದಲ್ಲಿ ದ್ವಂದ್ವ ನಿರ್ಧಾರಗಳು ಇರುತ್ತವೆ. ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಪ್ರಗತಿ ಇರುತ್ತದೆ. ಆದಾಯವು ಚೇತರಿಕೆಯತ್ತ ಹೊರಳುತ್ತದೆ. ಸಾಂಸಾರಿಕ ಜೀವನದಲ್ಲಿ ಸಾಕಷ್ಟು ಹೊಂದಾಣಿಕೆಯನ್ನು ಕಾಣುವ ಸಾಧ್ಯತೆಗಳಿವೆ. ಎದುರಾದ ಸಮಸ್ಯೆಗಳನ್ನು ಈಗ ಮೆಟ್ಟಿನಿಲ್ಲುವ ಸಾಮರ್ಥ್ಯಗಳಿವೆ. ನಿಮ್ಮ ನಿಕಟವರ್ತಿಗಳಿಂದ ಸಹಾಯ ದೊರೆತು ಆತ್ಮಸ್ಥೈರ್ಯ ಹೆಚ್ಚುವುದು. ಕೃಷಿಯಿಂದ ಆದಾಯ ಕಡಿಮೆಯಾಗಬಹುದು. ಹೊಸ ರೀತಿಯ ವ್ಯಾಪಾರಗಳಿಗೆ ಕರೆ ಬಂದಲ್ಲಿ ಅದರಲ್ಲಿನ ಆಗುಹೋಗುಗಳ ಬಗ್ಗೆ ಸರಿಯಾಗಿ ತಿಳಿದು ಮುನ್ನಡೆಯಿರಿ. ಕೀಲು ನೋವು ನಿಮ್ಮನ್ನು ಕಾಡಬಹುದು. ವೃತ್ತಿಯಲ್ಲಿ ಯಾವುದೇ ರೀತಿಯ ಏರಿಳಿತಗಳು ಇರುವುದಿಲ್ಲ. (ವಿಶಾಖಾ 4  ಅನುರಾಧ  ಜೇಷ್ಠ)  
  • ಧನು
  • ಕುಟುಂಬದಲ್ಲಿ ಹೊಂದಾಣಿಕೆಯಿಂದ ಎಲ್ಲರ ಬೆಂಬಲಗಳಿಸುವಿರಿ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ನಿಮ್ಮ ಶತ್ರುಗಳೇ ನಿಮ್ಮ ಮಿತ್ರರಾಗುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಮಂದಗತಿಯ ಪ್ರಗತಿ ಇರುತ್ತದೆ. ಸರ್ಕಾರಿ ಉದ್ಯೋಗಿಗಳಿಗೆ ಸ್ಥಾನಪಲ್ಲಟ ಬರುವ ಸಾಧ್ಯತೆ ಇದೆ. ನಿಮ್ಮ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳಲು ಈಗ ಸಕಾಲ. ನಿಮ್ಮ ನಿರೀಕ್ಷಿತ ಮೂಲಗಳಿಂದ ಆದಾಯವಿರುತ್ತದೆ. ಆದರೆ ಆದಾಯದಷ್ಟೇ ಖರ್ಚು ಇರುತ್ತದೆ. ಶುಭಕಾರ್ಯಗಳನ್ನು ಮಾಡುವ ಉತ್ಸಾಹ ಬರುತ್ತದೆ. ಕೆಲವು ರಾಜಕಾರಣಿಗಳ ಮಕ್ಕಳಿಗೆ ರಾಜಕೀಯ ಪ್ರವೇಶ ಮಾಡುವ ಅವಕಾಶ ಸಿಗುತ್ತದೆ. ವಾತ ಸಂಬಂಧಿ ದೋಷವಿರುವವರು ಹೆಚ್ಚು ಎಚ್ಚರವಹಿಸುವುದು ಅಗತ್ಯ. (ಮೂಲ ಪೂರ್ವಾಷಾಢ ಉತ್ತರಾಷಾಢ 1  )
  • ಮಕರ
  • ವಿಶಾಲ ಮನೋಭಾವದಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಿರಿ. ಕ್ಲಿಷ್ಟವಾದ ಕೆಲಸಗಳನ್ನು ಆಶ್ಚರ್ಯಕರವಾದ ರೀತಿಯಲ್ಲಿ ಸಾಧಿಸಿ ಪ್ರಶಂಸೆಗೆ ಒಳಗಾಗುವಿರಿ. ರಾಜಕೀಯ ಕ್ಷೇತ್ರದಲ್ಲಿ ಸೂತ್ರಧಾರರಾಗಿ ಕೆಲಸ ಮಾಡುವವರಿಗೆ ಬೆಳವಣಿಗೆ ಇರುತ್ತದೆ. ಧನಾದಾಯ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ನಿಮ್ಮ ಒಂದು ಹವ್ಯಾಸ ಸಂಪಾದನೆ ಮಾಡುವ ವೃತ್ತಿಯಾಗಿ ಬದಲಾಗಬಹುದು. ನೀವು ಕೊಡುವ ಸಲಹೆಗಳು ಸಂದರ್ಭೋಚಿತವಾಗಿ ಕೆಲವರಿಗೆ ಸಹಾಯವಾಗಿ ಒಳಿತಾಗುತ್ತದೆ. ಕೆಲವೊಂದು ವಿಚಾರಗಳಲ್ಲಿ ನಿಮ್ಮಲ್ಲಿರುವ ಕೀಳರಿಮೆಯನ್ನು ತೊಡೆದು ಮುನ್ನುಗ್ಗಿದಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ.  (ಉತ್ತರಾಷಾಢ 2 3 4 ಶ್ರವಣ  ಧನಿಷ್ಠ 1.2)  
  • ಕುಂಭ
  • ಚಿನ್ನದ ಸಗಟು ಆಭರಣ ತಯಾರಿಕರಿಗೆ ಲಾಭವಿರುತ್ತದೆ. ಆದಾಯವು ಕಡಿಮೆ ಇರುತ್ತದೆ. ವ್ಯವಹಾರಗಳಲ್ಲಿ ಹೆಚ್ಚಿನ ಹೂಡಿಕೆ ಬೇಡ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಹೆಚ್ಚಿನ ಅನುಕೂಲವಾಗುತ್ತದೆ. ಸರ್ಕಾರಿ ನೌಕರರಿಗೆ ವೃತ್ತಿಯಲ್ಲಿನ ಅಕಾಲಿಕ ಪ್ರಯಾಣದಿಂದ ಕಿರಿ ಕಿರಿಯಾಗುತ್ತದೆ ಮತ್ತು ವೃಥಾ ಖರ್ಚಾಗುತ್ತದೆ. ಮಹಿಳೆಯರು ನಡೆಸುವ ವ್ಯಾಪಾರ-ವ್ಯವಹಾರಗಳಲ್ಲಿ ಅಭಿವೃದ್ಧಿ ಇರುತ್ತದೆ. ಯುವಕರಿಗೆ ವೃತ್ತಿಯಲ್ಲಿ ನಿರೀಕ್ಷಿತ ಮಟ್ಟದ ಪ್ರಗತಿ ಇರುವುದಿಲ್ಲ. ಶ್ವಾಸಕೋಶದ ತೊಂದರೆ ಇರುವವರು ಚಿಕಿತ್ಸೆಯನ್ನು ಪಡೆಯುವುದು ಉತ್ತಮ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಮುನ್ನಡೆ ಕಾಣಬಹುದು. ಕೃಷಿಕರಿಗೆ ಆದಾಯ ಹೆಚ್ಚಾಗುವ ಲಕ್ಷಣಗಳಿವೆ. (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
  • ಮೀನ
  • ಎಲ್ಲರನ್ನು ಸಂದೇಹಿಸುವುದು ಬೇಡ. ಸ್ನೇಹಿತರೊಂದಿಗೆ ಮುಕ್ತವಾಗಿ ಮಾತನಾಡುವುದರಿಂದ ಮನಸ್ಸಿನಲ್ಲಿ ಇದ್ದ ತಪ್ಪು ಕಲ್ಪನೆಗಳು ದೂರವಾಗಿ ಸಂಬಂಧ ಗಟ್ಟಿಯಾಗುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ವ್ಯವಸಾಯದಲ್ಲಿನ ಅಭಿವೃದ್ಧಿ ಕುಂಟಿತವಾಗಬಹುದು. ವೃತ್ತಿಯಲ್ಲಿ ಅಧಿಕ ಒತ್ತಡ ತಡೆದುಕೊಳ್ಳಬೇಕಾದ ಅನಿವಾರ್ಯವಿರುತ್ತದೆ. ಅನವಶ್ಯಕವಾಗಿ ಬೇರೆಯವರ ವ್ಯವಹಾರಗಳಲ್ಲಿ ಭಾಗಿಯಾಗುವುದುರಿಂದ ಕೆಲವು ಆಪಾದನೆಗಳನ್ನು ಎದುರಿಸಬೇಕಾದೀತು. ಸರ್ಕಾರಿ ಕೆಲಸಗಳು ನಿಧಾನವಾಗುತ್ತದೆ. ಯೋಜನಾ ವಿಭಾಗದಲ್ಲಿ ಕೆಲಸ ಮಾಡುವವರ ಹೊಸ ಯೋಜನೆಯೊಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)