ವಾರ ಭವಿಷ್ಯ: ಈ ರಾಶಿಯ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಲಕ್ಷಣ
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
Published 17 ಜನವರಿ 2026, 23:30 IST
Last Updated 17 ಜನವರಿ 2026, 23:30 IST
ವಾರ ಭವಿಷ್ಯ
ಮೇಷ
ನಿಮ್ಮದೇ ಮಾತು ನಡೆಯಬೇಕೆನ್ನುವ ಹಠ ನಿಮ್ಮಲ್ಲಿರುತ್ತದೆ. ವೃತ್ತಿಯಿಂದ ಆದಾಯ ಹೆಚ್ಚಾಗುವ ಸಂಭವವಿದೆ. ಮೂಳೆ ಮತ್ತು ಪಾದ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ಕಚೇರಿಯಲ್ಲಿ ನಿಮ್ಮ ಸ್ಥಾನದ ಜವಾಬ್ದಾರಿಯನ್ನು ಅರಿತು ನಡೆಯಿರಿ. ಎತ್ತರದ ಸ್ಥಳಗಳಲ್ಲಿ ಕೆಲಸ ಮಾಡುವರು ಜಾಗ್ರತೆ ವಹಿಸಿ. ಸಾಹಸ ಕಲಾವಿದರು ತಮ್ಮ ಕಾರ್ಯ ನಿರ್ವಹಿಸುವಾಗ ಎಚ್ಚರಿಕೆಯಂದಿರಿ.
ವೃಷಭ
ಹಿರಿಯರ ಬಗ್ಗೆ ಹೆಚ್ಚು ಗೌರವ ತೋರುವಿರಿ. ಆದಾಯವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ನಿಮ್ಮ ಮೇಲೆ ಮಹಿಳೆಯರ ಕೋಪವಿರುತ್ತದೆ. ಕೃಷಿಭೂಮಿಯನ್ನು ಅಭಿವೃದ್ಧಿಪಡಿಸಬಹುದು. ಧಾರ್ಮಿಕ ಕಾರ್ಯಗಳನ್ನು ಮಾಡುವವರಿಗೆ ಸಮಾಜದ ಸಹಕಾರ ದೊರೆಯುತ್ತದೆ. ಅತಿ ಉಷ್ಣ ಕೆಲವರನ್ನು ಕಾಡಬಹುದು. ಸಿನಿಮಾ ನಟರುಗಳಿಗೆ ಉತ್ತಮ ಅವಕಾಶ ಸಿಗುವ ಸಾಧ್ಯತೆಗಳಿವೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಲಕ್ಷಣಗಳಿವೆ.
ಮಿಥುನ
ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಸಮಾಜ ಸೇವೆ ಮಾಡುವವರಿಗೆ ಗೌರವ ದೊರೆಯುತ್ತದೆ. ಭೂಮಿ ವ್ಯವಹಾರ ಮಾಡುವವರಿಗೆ ಲಾಭವಿದೆ. ವಿದ್ಯಾರ್ಥಿಗಳು ಶ್ರಮಪಟ್ಟಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು. ಉಷ್ಣ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಸಾಕಷ್ಟು ಹಿಡಿತ ಸಾಧಿಸುವಿರಿ. ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಕೆಲಸದ ಒತ್ತಡ ಹೆಚ್ಚಾಗಬಹುದು.
ಕರ್ಕಾಟಕ
ಶೀತ ಬಾಧೆ ನಿಮ್ಮನ್ನು ಕಾಡುತ್ತದೆ. ಆದಾಯವು ಕಡಿಮೆ ಇರುತ್ತದೆ. ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗದೆ ಒದ್ದಾಡುವಿರಿ. ಸಿದ್ಧ ಉಡುಪುಗಳನ್ನು ತಯಾರಿಸುವವರಿಗೆ ಲಾಭವಿದೆ. ಸಂಸಾರದಲ್ಲಿನ ಜವಾಬ್ದಾರಿ ಹೆಚ್ಚಾಗಲಿದೆ. ಗೃಹ ಸಾಮಗ್ರಿಗಳ ಖರ್ಚು ಹೆಚ್ಚಾಗುತ್ತದೆ. ಪುಸ್ತಕ ವ್ಯಾಪಾರಿಗಳಿಗೆ ಲಾಭ ಹೆಚ್ಚುವ ಸಾಧ್ಯತೆ ಇದೆ. ವಿವಾದಗಳಿಂದ ದೂರ ಉಳಿದು ನಿಮ್ಮ ಗೌರವವನ್ನು ಕಾಪಾಡಿಕೊಳ್ಳಿ.
ಸಿಂಹ
ಗಣ್ಯ ವ್ಯಕ್ತಿಗಳಿಗೆ ಸಮಾಜದಲ್ಲಿ ಗೌರವ ದೊರೆಯುತ್ತದೆ. ಆದಾಯವು ಸಾಮಾನ್ಯಗತಿಯಲ್ಲಿರುತ್ತದೆ. ಕೆಲವರಿಗೆ ರಾಜಕೀಯ ಪ್ರವೇಶ ದೊರೆಯುವ ಸಾಧ್ಯತೆಗಳಿವೆ. ನಿಮ್ಮ ವ್ಯವಹಾರಗಳಲ್ಲಿ ಆತ್ಮೀಯರ ಸಲಹೆಗಳನ್ನು ಪರಿಗಣಿಸುವುದು ಬಹಳ ಉತ್ತಮ. ದೈವದ ಹರಕೆ ತೀರಿಸಲು ಈಗ ಕುಟುಂಬ ಸಮೇತ ಹೋಗುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ.
ಕನ್ಯಾ
ಆಲಸ್ಯ ಮೈದುಂಬಿರುತ್ತದೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಒಡಹುಟ್ಟಿದವರಿಂದ ಸಹಕಾರ ಪಡೆಯುವಿರಿ. ಆಭರಣ ಕೊಳ್ಳುವಾಗ ಮೋಸ ಹೋಗುವ ಸಾಧ್ಯತೆಗಳಿವೆ ಎಚ್ಚರವಹಿಸಿ. ಕೆಲವು ದುಂದು ವೆಚ್ಚಗಳಿಂದ ಸಂಸಾರ ನಿರ್ವಹಣೆಯ ವೆಚ್ಚಗಳು ಹೆಚ್ಚಾಗುತ್ತವೆ. ಚಿನ್ನದ ಕುಸುರಿ ಕೆಲಸ ಮಾಡುವವರಿಗೆ ಬೇಡಿಕೆ ಹೆಚ್ಚುತ್ತದೆ. ವೃತ್ತಿಯಲ್ಲಿ ನಿಧಾನವಾಗಿ ಕೆಲಸ ಮಾಡುವಾಗ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡುವರು.
ತುಲಾ
ವ್ಯಕ್ತಿಗತ ಸೌಂದರ್ಯದ ಬಗ್ಗೆ ಹೆಚ್ಚು ಗಮನ ಕೊಡುವಿರಿ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ನಿಮ್ಮ ಕೆಲಸಗಳಿಗೆ ಹಿರಿಯರ ಸಹಕಾರವನ್ನು ಪಡೆಯಲು ಪ್ರಯತ್ನಪಡುವಿರಿ. ಬರಹಗಾರರಿಗೆ ಹೆಚ್ಚು ಪ್ರಾಮುಖ್ಯ ದೊರೆಯುತ್ತದೆ. ಸಂಶೋಧಕರಿಗೆ ಅಗತ್ಯವಿದ್ದ ಮಾಹಿತಿಯ ಪುಸ್ತಕ ದೊರೆಯುತ್ತದೆ. ಸನ್ನಿವೇಶಕ್ಕೆ ತಕ್ಕಂತೆ ಬದಲಾಗುವ ನಿಮ್ಮ ಗುಣ ಕೆಲವರಿಗೆ ಬೇಸರ ತರಿಸಬಹುದು. ಮನಸ್ತಾಪಗಳು ಬರುವ ಸಂಭವವಿದೆ.
ವೃಶ್ಚಿಕ
ಚುರುಕಾದ ನಡವಳಿಕೆ ಇರುತ್ತದೆ. ಆದಾಯವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ವಿದೇಶದಲ್ಲಿರುವವರು ಸ್ವದೇಶದಲ್ಲಿ ಆಸ್ತಿ ಮಾಡಬಹುದು. ವಿದ್ಯಾರ್ಥಿಗಳಿಗೆ ಫಲಿತಾಂಶ ಉತ್ತಮವಾಗಿರುವುದಿಲ್ಲ. ಯಾವುದೇ ಅಪೇಕ್ಷೆ ಇಲ್ಲದೆ ಮಾಡುವ ಕೆಲಸಗಳಿಗೆ ಉತ್ತಮ ಫಲ ದೊರೆಯುತ್ತದೆ. ಶತ್ರುಗಳನ್ನು ಪತ್ತೆ ಮಾಡಲು ಹಲವಾರು ತಂತ್ರಗಳನ್ನು ಬಳಸುವಿರಿ.
ಧನು
ಮನಸ್ಸಿನಲ್ಲಿ ಏನೋ ಒಂದು ಸಾಧಿಸಿದ ಸಂತೋಷ ಇರುತ್ತದೆ. ಆದಾಯವು ಏರಿಕೆ ಕಾಣುತ್ತದೆ. ನಿಮ್ಮ ಕಾರ್ಯ ಒತ್ತಡದ ನಡುವೆ ಕುಟುಂಬದ ಕಡೆಗೂ ಗಮನಹರಿಸಿರಿ. ಮನೆಯ ತಾಪತ್ರೆಯಗಳೆಲ್ಲ ಈಗ ನಿಧಾನವಾಗಿ ಕಡಿಮೆಯಾಗುತ್ತದೆ. ರಾಜಕೀಯದಲ್ಲಿರುವ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯ ದೊರೆಯುತ್ತದೆ. ಆಹಾರ ಪದಾರ್ಥಗಳನ್ನು ಸ್ವತಃ ತಯಾರಿಸಿ ಮಾರುವವರಿಗೆ ಆದಾಯವು ಹೆಚ್ಚುತ್ತದೆ.
ಮಕರ
ನಿಮ್ಮ ಕಾರ್ಯ ಶ್ರದ್ಧೆ ನಿಮ್ಮನ್ನು ಗೌರವಿಸುವಂತೆ ಮಾಡುತ್ತದೆ. ನಿಮ್ಮ ಕೆಲಸ ಕಾರ್ಯಗಳಿಗೆ ಹಿರಿಯರ ಆಶೀರ್ವಾದ ಇರುತ್ತದೆ. ಈಗ ಆದಾಯ ತಕ್ಕಮಟ್ಟಿಗೆ ಇರುತ್ತದೆ. ಆಸ್ತಿ ಮಾಡುವ ಆಲೋಚನೆಗೆ ಚಾಲನೆ ಸಿಗುತ್ತದೆ. ದೂರ ಪ್ರಯಾಣದ ಕೆಲಸಗಳಲ್ಲಿ ನಿಮಗೆ ಲಾಭವಿರುತ್ತದೆ. ಸೂಕ್ಷ್ಮವಿಚಾರಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಹೆಚ್ಚು ಎಚ್ಚರವಹಿಸಿ. ಸಹೋದ್ಯೋಗಿಗಳು ನಿಮ್ಮ ಬಗ್ಗೆ ಈಗ ಕಾಳಜಿ ತೋರುವರು.
ಕುಂಭ
ಹೊಸ ಸ್ಥಳದಲ್ಲಿ ಶಿಕ್ಷಕ ವೃತ್ತಿ ಆರಂಭಿಸುವವರಿಗೆ ಸೂಕ್ತ ಅನೂಕೂಲಗಳಿರುತ್ತವೆ. ಆದಾಯವು ಸಾಮಾನ್ಯಗತಿಯಲ್ಲಿರುತ್ತದೆ. ವಿದ್ಯಾರ್ಥಿಗಳಿಗೆ ಅತಿಹೆಚ್ಚು ಯಶಸ್ಸು ದೊರೆಯುತ್ತದೆ. ಬಟ್ಟೆ ತಯಾರಿಸುವವರಿಗೆ ಹೆಚ್ಚು ತಯಾರಿಕಾ ಆದೇಶಗಳು ಬರುವ ಸಾಧ್ಯತೆಗಳಿವೆ. ಕೆಲವರು ನಿಮ್ಮ ಹೆಸರನ್ನು ಬಳಸಿಕೊಂಡು ಅವರ ಕಾರ್ಯಸಾಧನೆ ಮಾಡಿಕೊಳ್ಳುವರು. ರಾಜಕೀಯ ವ್ಯಕ್ತಿಗಳಿಗೆ ಕೆಲವು ಸನ್ನಿವೇಶಗಳು ಅನುಕೂಲಕರವಾಗಿ ಒದಗಿ ಬರುತ್ತವೆ.
ಮೀನ
ಅಪಹಾಸ್ಯಕ್ಕೆ ಒಳಗಾಗುವ ಸಂದರ್ಭವಿದೆ ಎಚ್ಚರವಾಗಿರಿ. ಆದಾಯವು ತಕ್ಕಮಟ್ಟಿಗೆ ಇರುತ್ತದೆ. ಸರ್ಕಾರಿ ಅನುದಾನಗಳು ಸರಾಗವಾಗಿ ಬರುತ್ತವೆ. ಇಚ್ಛೆಪಟ್ಟ ಆಸ್ತಿಯನ್ನು ಕೊಳ್ಳುವ ಅವಕಾಶವಿದೆ. ಅದಿರು ಮಾರಾಟಗಾರರಿಗೆ ವ್ಯವಹಾರ ವಿಸ್ತರಣೆಯಾಗುವ ಸಂದರ್ಭವಿದೆ. ಸಹೋದ್ಯೋಗಿಗಳ ನಡುವೆ ಕಿರಿಕಿರಿ ವಾತಾವರಣ ಇರುತ್ತದೆ.