ADVERTISEMENT

ವಾರ ಭವಿಷ್ಯ: ಈ ರಾಶಿಯವರು ಸಂಸಾರದಲ್ಲಿ ಮೌನವಾಗಿರುವುದು ಒಳ್ಳೆಯದು

2025ರ ಡಿಸೆಂಬರ್‌ 28ರಿಂದ 2026ರ ಜನವರಿ 3ರವರೆಗೆ

ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
Published 27 ಡಿಸೆಂಬರ್ 2025, 23:30 IST
Last Updated 27 ಡಿಸೆಂಬರ್ 2025, 23:30 IST
<div class="paragraphs"><p>ವಾರ ಭವಿಷ್ಯ</p></div>

ವಾರ ಭವಿಷ್ಯ

   
ಮೇಷ
  • ಹೊಸ ಹೊಸ ಆಲೋಚನೆಗಳು ನಿಮ್ಮಲ್ಲಿ ಇರುತ್ತವೆ. ಆದಾಯವು ಕಡಿಮೆ ಇರುತ್ತದೆ. ಉತ್ತಮ ಕೆಲಸಗಳಿಗೆ ಹಿರಿಯರ ಸಹಕಾರ ದೊರೆಯುತ್ತದೆ. ವಿದ್ಯಾರ್ಥಿಗಳು ಶ್ರಮಪಟ್ಟು ಓದಬೇಕು. ನರ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ವಾಹನ ಚಾಲನೆಯನ್ನು ಮಾಡುವಾಗ ಹೆಚ್ಚು ಜಾಗರೂಕರಾಗಿರುವುದು ಉತ್ತಮ.
  • ವೃಷಭ
  • ವಾರದ ಆರಂಭದಲ್ಲಿ ಜಡತ್ವ ತುಂಬಿರುತ್ತದೆ. ಆದಾಯವು ನಿರೀಕ್ಷೆಯ ಮಟ್ಟಕ್ಕೆ ಇರುತ್ತದೆ. ಆಸ್ತಿ ವ್ಯವಹಾರ ಮಾಡುವವರಿಗೆ ಅಲ್ಪ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷೆಯ ಹತ್ತಿರದ ಫಲಿತಾಂಶ ಬರುತ್ತದೆ. ವ್ಯವಹಾರಕ್ಕೆ ತಾಯಿಯಿಂದ ಮಾರ್ಗದರ್ಶನದ ಜತೆಗೆ ಸ್ವಲ್ಪ ಹಣ ಸಹಾಯವೂ ದೊರೆಯುವುದು. ಮನೆಯ ಹಿರಿಯರ ಆರೋಗ್ಯದ ಬಗ್ಗೆ ಬಹಳ ಕಾಳಜಿಯನ್ನು ವಹಿಸಬೇಕಾದೀತು. ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ ಹಣ ಬೇಕಾಗುತ್ತದೆ.
  • ಮಿಥುನ
  • ಎಲ್ಲರಿಂದಲೂ ಗೌರವವನ್ನು ನಿರೀಕ್ಷೆ ಮಾಡುವಿರಿ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಸಮಾಜ ಸೇವೆ ಮಾಡುವವರಿಗೆ ಜನರಿಂದ ಸಹಕಾರ ಸಿಗುತ್ತದೆ. ಆಸ್ತಿ ಖರೀದಿ ಮಾಡುವಾಗ ಎಚ್ಚರವಹಿಸಿ. ಗಣಿತ ವಿದ್ಯಾರ್ಥಿಗಳಿಗೆ ಫಲಿತಾಂಶ ಕಡಿಮೆಯಾಗಬಹುದು. ರಕ್ತ ಪರಿಚಲನೆಯಲ್ಲಿ ಕೆಲವರಿಗೆ ಏರುಪೇರಾಗಬಹುದು. ನೆರೆಹೊರೆಯವರೊಂದಿಗೆ ಇದ್ದ ಮುನಿಸುಗಳು ದೂರವಾಗುತ್ತವೆ. ನ್ಯಾಯ ಸಂಬಂಧಿ ವ್ಯವಹಾರಗಳಲ್ಲಿ ನಿಮಗೆ ಯಶಸ್ಸು ಇರುತ್ತದೆ.
  • ಕರ್ಕಾಟಕ
  • ನಿಮ್ಮ ಕೆಲಸಗಳಲ್ಲಿ ಹಿರಿಯರ ಛಾಯೆಯನ್ನು ಕಾಣಬಹುದು. ಆದಾಯವು ಕಡಿಮೆ ಇರುತ್ತದೆ. ಧಾರ್ಮಿಕ ಕೆಲಸಗಳನ್ನು ಮಾಡುವವರ ಆದಾಯ ಹೆಚ್ಚುತ್ತದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಲಾಭ ಇರುವುದಿಲ್ಲ. ಉನ್ನತ ಹುದ್ದೆಯಲ್ಲಿರುವವರಿಗೆ ಜನರಿಂದ ಅಭಿಮಾನದ ಮಾತುಗಳು ಕೇಳಿಬರುತ್ತವೆ. ಮಹಿಳೆಯರ ಕೆಲವು ಇಷ್ಟಾರ್ಥಗಳು ಪೂರ್ಣಗೊಂಡು ಸಂತಸಪಡುವರು.
  • ಸಿಂಹ
  • ನಿಮ್ಮ ಉದಾಸೀನತೆ ನಿಮಗೆ ತೊಂದರೆ ತರುತ್ತದೆ. ತುರ್ತು ವಿಷಯಕ್ಕಾಗಿ ಸಂಬಂಧಿಕರ ನೆರವನ್ನು ಪಡೆಯಬೇಕಾಗುತ್ತದೆ. ಆದಾಯವು ಮಧ್ಯಮಗತಿಯಲ್ಲಿ ಇರುತ್ತದೆ. ಅನಗತ್ಯ ಸುತ್ತಾಟದಿಂದ ದೇಹಾಲಸ್ಯವಾಗಬಹುದು. ಕೆಲವು ಅರೆಕಾಲಿಕ ನೌಕರರಿಗೆ ನೌಕರಿ ಖಾಯಂ ಆಗಬಹುದು. ತಾಂತ್ರಿಕ ಶಿಕ್ಷಣವನ್ನು ಪಡೆಯುತ್ತಿರುವವರಿಗೆ ಹೆಚ್ಚು ಯಶಸ್ಸು ಇರುತ್ತದೆ. ವಿದೇಶದಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ.
  • ಕನ್ಯಾ
  • ಆದಾಯವು ಸಾಮಾನ್ಯ ಮಟ್ಟದಲ್ಲಿರುತ್ತದೆ. ನಯವಾಗಿ ಮಾತನಾಡಿ ಜನರನ್ನು ಒಲಿಸಿಕೊಳ್ಳಲು ಪ್ರಯತ್ನಪಡುವಿರಿ. ಅಧ್ಯಯನದಲ್ಲಿ ಆಸಕ್ತಿಯು ಸ್ವಲ್ಪ ಕಡಿಮೆಯಾಗುವ ಸಂದರ್ಭವಿದೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಪ್ರತಿಭೆಗೆ ಗೌರವ ದೊರೆಯುತ್ತದೆ. ಕೃಷಿಕರು ಬೆಳೆಗೆ ಉತ್ತಮ ಬೆಲೆಯನ್ನು ನಿರೀಕ್ಷೆ ಮಾಡಬಹುದು.
  • ತುಲಾ
  • ಆದಾಯವು ಮಧ್ಯಮಗತಿಯಲ್ಲಿರುತ್ತದೆ. ನಿಮ್ಮ ನಡವಳಿಕೆಯಲ್ಲಿ ಸಾಕಷ್ಟು ವ್ಯಾವಹಾರಿಕತೆ ತುಂಬಿರುತ್ತದೆ. ವಿದೇಶದಲ್ಲಿ ಓದಬೇಕೆನ್ನುವವರಿಗೆ ಈಗ ಅವಕಾಶಗಳು ದೊರೆಯುತ್ತವೆ. ಕಣ್ಣಿನ ಸೋಂಕುಗಳು ಕೆಲವರನ್ನು ಕಾಡಬಹುದು. ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಮನಸ್ತಾಪಗಳು ಎದುರಾಗುವ ಸಂದರ್ಭವಿದೆ. ಅಪೇಕ್ಷಿಸಿದ್ದ ಸಾಲ ದೊರೆಯುತ್ತದೆ. ಸಂಸಾರದಲ್ಲಿ ಮೌನವಾಗಿರುವುದು ಒಳ್ಳೆಯದು.
  • ವೃಶ್ಚಿಕ
  • ಬುದ್ಧಿವಂತಿಕೆಯೇ ನಿಮ್ಮ ಆಸ್ತಿಯಾಗಿರುತ್ತದೆ. ಸ್ಥಿರಾಸ್ತಿಯ ಬೆಲೆಯಲ್ಲಿ ಏರಿಕೆಯನ್ನು ಕಾಣಬಹುದು. ಹೂವುಗಳ ವ್ಯಾಪಾರಿಗಳಿಗೆ ವ್ಯಾಪಾರ ವೃದ್ಧಿಸಿ, ಆದಾಯ ಹೆಚ್ಚುತ್ತದೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಮಕ್ಕಳಿಗಾಗಿ ಹೆಚ್ಚಿನ ಹಣವನ್ನು ಖರ್ಚುಮಾಡಬೇಕಾಗುತ್ತದೆ. ರಾಜಕಾರಣಿಗಳಿಗೆ ಆಪಾದನೆಗಳಿಂದ ಮಾನಸಿಕ ಒತ್ತಡ ಹೆಚ್ಚಬಹುದು. ಒಡಹುಟ್ಟಿದವರು ವಿನಾಕಾರಣ ನಿಮ್ಮ ಮೇಲೆ ಕೂಗಾಡಬಹುದು.
  • ಧನು
  • ಬಹಳ ಚೇತನಾಶೀಲರಾಗಿರುವಿರಿ. ಆದಾಯವು ಸ್ವಲ್ಪ ಚೇತರಿಸಿಕೊಳ್ಳುತ್ತದೆ. ಬಂಧುಗಳು ನಿಮ್ಮ ಸಾತ್ವಿಕತೆಯನ್ನು ದುರುಪಯೋಗ ಮಾಡಿಕೊಳ್ಳಬಹುದು. ಕೃಷಿ ಭೂಮಿ ಕೊಳ್ಳುವ ಯೋಗವಿದೆ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶವಿರುತ್ತದೆ. ಪಾದದ ನೋವು ಕೆಲವರಿಗೆ ಕಾಡಬಹುದು. ಹಿರಿಯ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ದೊರೆಯುವ ಸಂದರ್ಭವಿದೆ. ಚಿನ್ನದ ವ್ಯಾಪಾರಿಗಳಿಗೆ ಆದಾಯ ಹೆಚ್ಚಾಗುವುದು.
  • ಮಕರ
  • ಶ್ರಮಪಟ್ಟು ಕೆಲಸ ಮಾಡಲು ಇಷ್ಟಪಡುವಿರಿ. ವಿದೇಶಿ ವ್ಯವಹಾರ ಮಾಡುವವರ ಆದಾಯ ಹೆಚ್ಚುತ್ತದೆ. ಶತ್ರುಗಳನ್ನು ಸರಿಯಾಗಿ ಗುರುತಿಸಿ ಮಟ್ಟ ಹಾಕುವಿರಿ. ಕಟ್ಟಡ ನಿರ್ಮಾಣಕಾರರಿಗೆ ಸ್ವಲ್ಪ ನಷ್ಟವಾಗುವ ಸಂದರ್ಭವಿದೆ. ಕೆಲಸಗಾರರ ಕೊರತೆಯಿಂದಾಗಿ ಉದ್ದಿಮೆಗಳಲ್ಲಿ ತಯಾರಿಕೆಗೆ ಬಹಳ ಅಡಚಣೆ ಉಂಟಾಗುತ್ತದೆ. ಕೃಷಿ ಕ್ಷೇತ್ರದಲ್ಲಿನ ಯಂತ್ರೋಪಕರಣಗಳನ್ನು ತಯಾರಿಸುವವರಿಗೆ ಅಭಿವೃದ್ಧಿ ಇರುತ್ತದೆ.
  • ಕುಂಭ
  • ‌ಆದಾಯವು ಸ್ವಲ್ಪ ಚೇತರಿಕೆಯನ್ನು ಕಾಣುತ್ತದೆ. ಕೃಷಿಯಿಂದ ಆದಾಯವಿರುತ್ತದೆ. ಸರ್ಕಾರಿ ಕೆಲಸಕಾರ್ಯಗಳಲ್ಲಿ ಲಾಭವಿರುತ್ತದೆ. ಸ್ಥಿರಾಸ್ತಿ ಮಾಡುವ ಕಾರ್ಯ ವಿಳಂಬವಾಗುತ್ತದೆ. ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವವರಿಗೆ ಜನರಿಂದ ಸಹಾಯ ದೊರೆಯುತ್ತದೆ. ಪ್ರೀತಿಪಾತ್ರರ ಭೇಟಿಯಿಂದ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವಿರಿ. ಮಕ್ಕಳಿಂದ ಹಿರಿಯರಿಗೆ ಬೇಸರ ಉಂಟಾಗಬಹುದು.
  • ಮೀನ
  • ಅತಿಯಾದ ಆಲಸಿತನ ನಿಮ್ಮಲ್ಲಿರುತ್ತದೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ನಿಮ್ಮ ಚುಚ್ಚು ಮಾತುಗಳು ನಿಮಗೇ ಮುಳುವಾಗಬಹುದು. ದೃಢ ನಿರ್ಧಾರಗಳಿಲ್ಲದೆ ಪರದಾಡುವಿರಿ. ಸಂಸಾರದಲ್ಲಿ ಸಂತೋಷವಿರುತ್ತದೆ. ವಿದ್ಯಾರ್ಥಿಗಳಿಗೆ ತಿಂಗಳಿಗೆ ನಿರೀಕ್ಷೆಯ ಹತ್ತಿರದ ಫಲಿತಾಂಶ ಬರುತ್ತದೆ. ಹೊಟ್ಟೆಯೊಳಗೆ ತೊಂದರೆ ಕಾಣಿಸಿಕೊಳ್ಳಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.