ADVERTISEMENT

ಕರೆಂಟ್ ಲೆಕ್ಕಾಚಾರ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 19:30 IST
Last Updated 9 ಜುಲೈ 2012, 19:30 IST
ಕರೆಂಟ್ ಲೆಕ್ಕಾಚಾರ
ಕರೆಂಟ್ ಲೆಕ್ಕಾಚಾರ   

ಕ್ಯಾಂಪ್ಕೊ ಚಾಕೊಲೇಟ್ ಕಾರ್ಖಾನೆಯ ಸದ್ಯದ ಉತ್ಪಾದನಾ ಸಾಮರ್ಥ್ಯ ವರ್ಷಕ್ಕೆ 17 ಸಾವಿರ ಟನ್. ಬೇಕಾದ ವಿದ್ಯುತ್ 72 ಲಕ್ಷ ಯೂನಿಟ್. ಆದರೆ ಇದೀಗ ವೇಪರ್ ಅಬ್ಸಾರ್ಪ್ಷನ್ ಮೆಕ್ಯಾನಿಸಂ (ವಿಎಎಂ) ವ್ಯವಸ್ಥೆ ಅಳವಡಿಸಿರುವುದರಿಂದ ಬಳಸುವ ವಿದ್ಯುತ್‌ನಲ್ಲಿ 12 ಲಕ್ಷ ಯೂನಿಟ್‌ನಷ್ಟು ಉಳಿತಾಯವಾಗಿದ್ದು, ವರ್ಷಕ್ಕೆ 60 ಲಕ್ಷ ಯೂನಿಟ್ ವಿದ್ಯುತ್ ಸಾಕಾಗುತ್ತದೆ.

ಕ್ಯಾಂಪ್ಕೊ ಪವನ ವಿದ್ಯುತ್ ಸ್ಥಾವರಗಳಿಂದ ಹೂವಿನಹಡಗಲಿಯಲ್ಲಿ 1.25 ಮೆಗಾವಾಟ್ (ಸುಮಾರು 22 ಲಕ್ಷ ಯೂನಿಟ್) ಮತ್ತು ಮೇಜಿಯಲ್ಲಿ 1.70 ಮೆಗಾವಾಟ್ (ಸುಮಾರು 35 ಲಕ್ಷ ಯೂನಿಟ್) ವಿದ್ಯುತ್ ಉತ್ಪಾದನೆಯಾಗುತ್ತಿದೆ .

ಈ ವಿದ್ಯುತ್ತನ್ನು ಆಯಾ ಸ್ಥಳದಲ್ಲಿ ವಿದ್ಯುತ್ ಪ್ರಸರಣ ಕಂಪೆನಿಗೆ ಪೂರೈಸಲಾಗುತ್ತಿದೆ. ಅದಕ್ಕೆ ಪ್ರತಿಯಾಗಿ ಪುತ್ತೂರಿನಲ್ಲಿ ಅಷ್ಟೇ ಪ್ರಮಾಣದ ಅಂದರೆ ಸುಮಾರು 57 ಲಕ್ಷ ಯೂನಿಟ್ ವಿದ್ಯುತ್ತನ್ನು ಚಾಕೊಲೇಟ್ ಕಾರ್ಖಾನೆಗೆ ಪಡೆಯಲಾಗುತ್ತದೆ.

ಅಂದರೆ ಕ್ಯಾಂಪ್ಕೊದ ವಿದ್ಯುತ್ ಬೇಡಿಕೆಯ ಬಹುಭಾಗ ಸ್ವಂತ ಮೂಲದಿಂದ ಲಭಿಸುತ್ತಿದೆ. ಕಂಪೆನಿಯೊಂದಿಗೆ ಮಾಡಿಕೊಳ್ಳಲಾದ ಒಡಂಬಡಿಕೆಯಂತೆ ಕಾರ್ಖಾನೆಗೆ ತಡೆರಹಿತ ವಿದ್ಯುತ್ ಪೂರೈಕೆಯಾಗುತ್ತದೆ.

ಕ್ಯಾಂಪ್ಕೊ ಉತ್ಪಾದಿಸುವ ವಿದ್ಯುತ್‌ಗೆ ಯೂನಿಟ್‌ಗೆ 3.20 ರೂಪಾಯಿಯಂತೆ ವೆಚ್ಚ ತಗುಲಿದರೆ, ಮೆಸ್ಕಾಂ ಪೂರೈಸುವ ವಿದ್ಯುತ್ ದರ ಯೂನಿಟ್‌ಗೆ 5.20 ರೂ. ಸಂಸ್ಥೆ ತನ್ನದೇ ಮೂಲದ ವಿದ್ಯುತ್ ಉತ್ಪಾದಿಸಿದ್ದರಿಂದ ಪ್ರತಿ ಯೂನಿಟ್‌ಗೆ ಸದ್ಯ 2 ರೂಪಾಯಿಯಷ್ಟು ಉಳಿತಾಯವಾಗುತ್ತಿದೆ.

ಹೀಗೆ ಸ್ವಂತ ವಿದ್ಯುತ್ ಮೂಲ ಮಾಡಿಕೊಂಡರೆ ತೆರಿಗೆ ವಿನಾಯ್ತಿಯೂ ಸಿಗುತ್ತದೆ. ಅದೆಲ್ಲವನ್ನೂ ಲೆಕ್ಕಹಾಕಿದಾಗ ಸ್ವಂತ ಉತ್ಪಾದನೆಯ ವಿದ್ಯುತ್‌ನ ಮಹತ್ವ ಬಹಳ ದೊಡ್ಡದಾಗಿ ಕಾಣಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.