ADVERTISEMENT

Deepavali 2025: ಅಸ್ತಮಾ ಇದ್ದರೆ ಪಟಾಕಿ ಮಾಲಿನ್ಯದಿಂದ ದೂರವಿರಿ

ರೂಪಾ .ಕೆ.ಎಂ.
Published 20 ಅಕ್ಟೋಬರ್ 2025, 9:34 IST
Last Updated 20 ಅಕ್ಟೋಬರ್ 2025, 9:34 IST
   

ಬೆಳಕಿನ ಹಬ್ಬ ದೀಪಾವಳಿಯ ಹೊಸ್ತಿಲಲ್ಲಿ ಇದ್ದೇವೆ. ಪಟಾಕಿಯೆಂಬುದು ದೀಪಾವಳಿಯ ಸಂಭ್ರಮವನ್ನು ಹೆಚ್ಚು ಮಾಡುತ್ತದೆ ಎನ್ನುವುದು ನಿಜವಾದರೂ, ಅಸ್ತಮಾ ಹಾಗೂ ಅಲರ್ಜಿ ಇರುವಂಥವರು, ಶ್ವಾಸಕೋಶದ ಸಂಬಂಧಿತ ಸಮಸ್ಯೆಗಳಿಂದ ಬಳಲುವವರು ಹೆಚ್ಚು ಜಾಗ್ರತೆ ವಹಿಸಬೇಕು ಎನ್ನುವುದು ತುಂಬಾ ಮುಖ್ಯ. ಹಾಗಾಗಿ ಇಲ್ಲಿದೆ ಕೆಲವು ಉಪಯುಕ್ತ ಸಲಹೆಗಳು

ಹೊಗೆಯಿಂದ ದೂರವಿರಿ: ಆದಷ್ಟು ದೀಪಾವಳಿ ಸಂದರ್ಭದಲ್ಲಿ ಅಸ್ತಮಾ ಮತ್ತು ಅಲರ್ಜಿ ಇರುವವರು ಆದಷ್ಟು ಪಟಾಕಿ ಹೊಡೆಯವ ಸ್ಥಳಗಳಿಂದ ದೂರವಿರಿ. ಹೊಗೆಯ ಮಾಲಿನ್ಯವು ಅಸ್ತಮಾ ಸಮಸ್ಯೆಯನ್ನು ಉಲ್ಬಣಗೊಳ್ಳುವಂತೆ ಮಾಡಬಹುದು.

ಒಳಾಂಗಣದಲ್ಲಿ ಏರ್‌ ಪ್ಫೂರಿಫೈಯರ್ ಬಳಸಿ: ಹೊರಗಿನಿಂದ ಪಟಾಕಿ ಸಿಡಿದ ಮೇಲೆ ಬರುವ ಕಣಗಳು ಮನೆಯೊಳಗೆ ಬಾರದಂತೆ ನೋಡಿಕೊಳ್ಳಿ. ಅದಕ್ಕಾಗಿ ಬಾಗಿಲು ಹಾಗೂ ಕಿಟಕಿಗಳನ್ನ ಮುಚ್ಚಿ. ಉತ್ತಮ ಗಾಳಿಗಾಗಿ ಸಾಧ್ಯವಾದಷ್ಟು ಮನೆಯಲ್ಲಿಯೇ ಏರ್‌ ಪ್ಯೂರಿಫೈಯರ್ ಬಳಸಿ.

ADVERTISEMENT

ಮಾಸ್ಕ್‌ ಹಾಕಿಕೊಳ್ಳಿ: ಹೊರಗೆ ಹೋಗುವುದಿದ್ದರೆ ಮಾಸ್ಕ್ ಬಳಸುವುದನ್ನು ಮರೆಯಬೇಡಿ. ಸಾಧ್ಯವಾದಷ್ಟು ಎನ್‌_95 ಮುದ್ರೆ ಇರುವ ಮಾಸ್ಕ್‌ಗಳನ್ನು ಬಳಸಿದರೆ ಉತ್ತಮ.

ಔಷಧಿಗಳನ್ನು ಬಳಿ ಇಟ್ಟುಕೊಳ್ಳಿ: ದೂಳಿನ ಕಣಗಳಿಂದಾಗಿ ಮತ್ತು ಸಿಡಿಮದ್ದಿನ ರಾಸಾಯನಿಕ ಕಣಗಳಿಂದಾಗಿಯೂ ಯಾವಾಗ ಬೇಕಾದರೂ ಅಸ್ತಮಾ ಸಮಸ್ಯೆ ಕಾಣಿಸಿಕೊಳ್ಳಬಹುದು. ಹಾಗಾಗಿ ಸಾಧ್ಯವಾದಷ್ಟು ಔಷಧಿಗಳು ನಿಮ್ಮ ಬಳಿ ಇರುವಂತೆ ನೋಡಿಕೊಳ್ಳಿ. ಇನ್‌ಹೇಲರ್‌ನಂಥ ಪರಿಕರಗಳು ಇದ್ದರೆ ಒಳ್ಳೆಯದು.

ಚೆನ್ನಾಗಿ ನೀರು ಕುಡಿಯಿರಿ: ಸಾಧ್ಯವಾದಷ್ಟು ಬೆಚ್ಚಗಿನ ನೀರನ್ನು ಆಗಾಗ್ಗೆ ಸೇವಿಸುತ್ತಿರಿ. ಇದರಿಂದ ಎದೆಗೂಡಿನಲ್ಲಿ ಕಫ ಶೇಖರಣೆಯಾಗುವುದನ್ನು ತಪ್ಪಿಸಬಹುದು. ಇದು ಉಸಿರಾಟವನ್ನು ಸರಾಗಗೊಳಿಸಲು ಸಹಾಯಮಾಡುತ್ತದೆ.

ವ್ಯಾಯಾಮ ಕಡ್ಡಾಯವಾಗಿರಲಿ: ನಿತ್ಯ ಬದುಕಿನಲ್ಲಿ ಲಘು ವ್ಯಾಯಾಮವನ್ನು ಕಡ್ಡಾಯವಾಗಿ ರೂಢಿಸಿಕೊಳ್ಳಿ. ಜತೆಗೆ ಪ್ರಾಣಾಯಾಮ ಮಾಡಿ. ನಾಡಿಶೋಧನಾ, ಬಾಸ್ತ್ರಿಕಾ ಪ್ರಾಣಾಯಾಮಗಳು ಅಸ್ತಮಾವನ್ನು ನಿಯಂತ್ರಣದಲ್ಲಿ ಇಡಲು ಬಹುಮುಖ್ಯವಾಗಿವೆ.

ಉಲ್ಭಣಕ್ಕೆ ಉಂಟು ಹಲವು ಕಾರಣಗಳು: ಪಟಾಕಿಯಲ್ಲಿರುವ ರಾಸಾಯನಿಕ ಕಣಗಳಷ್ಟೆ ಅಲ್ಲದೇ ಬೇರೆ ಬೇರೆ ಕಾರಣಗಳಿಗೂ ಅಸ್ತಮಾ ಉಲ್ಭಣಗೊಳ್ಳುವ ಸಾಧ್ಯತೆ ಇರುತ್ತದೆ. ಮನೆಯನ್ನು ಸ್ವಚ್ಛಗೊಳಿಸುವಾಗ ಇರುವ ದೂಳು, ಪುಸ್ತಕದ ದೂಳು. ಅತಿಯಾಗಿ ತಿನ್ನುವುದು, ಮದ್ಯಪಾನ ಸೇವನೆಯೂ ಕೂಡ ಅಸ್ತಮಾ ಇದ್ದಕ್ಕಿದ್ದ ಹಾಗೆ ಕಾಣಿಸಿಕೊಳ್ಳಲು ಕಾರಣವಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.