
ರೈಲು ಪ್ರಯಾಣ ಅತ್ಯಂತ ಆರಾಮದಾಯಕ ಪ್ರಯಾಣಗಳಲ್ಲಿ ಒಂದು. ಭಾರತೀಯರು ಈ ಪ್ರಯಾಣವನ್ನು ಅತೀ ಹೆಚ್ಚು ಬಳಕೆ ಮಾಡುತ್ತಾರೆ. ವಿಶ್ವದ ಐಷಾರಮಿ ರೈಲುಗಳ ಪಟ್ಟಿಯಲ್ಲಿ ಭಾರತದ ಒಂದು ರೈಲು ಕೂಡ ಸ್ಥಾನ ಪಡೆದಿದೆ. ಆ ರೈಲು ಯಾವುದು? ಮತ್ತು ಅದರ ದರ ಹಾಗೂ ಎಲ್ಲಿ ಪ್ರಯಾಣಿಸುತ್ತದೆ ಎಂಬುದನ್ನು ತಿಳಿಯೋಣ.

ಭಾತರದ ಐಷಾರಾಮಿ ಪ್ರವಾಸಿ ರೈಲು ಮಹಾರಾಜ ಎಕ್ಸ್‌ಪ್ರೆಸ್ ಆಗಿದೆ. ಈ ರೈಲು ಭಾರತೀಯ ಸಂಸ್ಕೃತಿಯನ್ನು ತಿಳಿಸುವ ರೈಲು ಎಂಬ ಖ್ಯಾತಿ ಪಡೆದಿದೆ. ಈ ಪ್ರಯಾಣವು ಪ್ರಯಾಣಿಕರಿಗೆ ಮಹಾರಾಜರ ಅನುಭವ ನೀಡುತ್ತದೆ. ಅಲ್ಲದೆ ರೈಲಿನೊಳಗೆ ಐಷಾರಮಿ ವಾತಾವರಣವನ್ನು ಕಲ್ಪಿಸುತ್ತದೆ.
ಈ ರೈಲು ಭಾರತದ ಪ್ರಸಿದ್ಧ ಅರಮನೆ, ಕೋಟೆ ಮತ್ತು ವನ್ಯಜೀವಿ ಧಾಮಗಳನ್ನು ಒಳಗೊಂಡಂತೆ ಇತರೆ ಸಾಂಪ್ರದಾಯಿಕ ಸ್ಥಳಗಳ ಮೂಲಕ ಪ್ರವಾಸಿಗರನ್ನುಹೊತ್ತು ಸಾಗುತ್ತದೆ. ಈ ರೈಲಿನಲ್ಲಿ 84 ಪ್ರಯಾಣಿಕರು ಪ್ರಯಾಣಿಸಬಹುದು.
ಬೋಗಿಗಳೊಳಗೆ ಸಿಂಗಲ್ ಅಥವಾ ಡಬಲ್ ಹಾಸಿಗೆಗಳು, ಸ್ನಾನ ಗೃಹ, ಹವಾನಿಯಂತ್ರಣ ಸೇರಿದಂತೆ ವೈ–ಫೈ ಸೇವೆ ಲಭ್ಯವಿದೆ. ರೈಲಿನಲ್ಲಿ 'ಮಯೂರ್ ಮಹಲ್' ಮತ್ತು 'ರಂಗ್ ಮಹಲ್' ಎಂಬ ಎರಡು ಅಲಂಕಾರಿಕ ರೆಸ್ಟೋರೆಂಟ್‌ಗಳಿವೆ. ಇಲ್ಲಿ ವಿಶ್ವ ದರ್ಜೆಯ ಆಹಾರಗಳು ದೊರೆಯುತ್ತವೆ.
ಮಹಾರಾಜ ಎಕ್ಸ್‌ಪ್ರೆಸ್ ಅಕ್ಟೋಬರ್‌ನಿಂದ ಏಪ್ರಿಲ್ ತಿಂಗಳ ನಡುವೆ ಕಾರ್ಯನಿರ್ವಹಿಸುತ್ತದೆ. ಪ್ರಮುಖವಾಗಿ ಭಾರತದ 10 ಸ್ಥಳಗಳಿಗೆ ಪ್ರಯಾಣಿಕರನ್ನು ಸಾಗಿಸುತ್ತದೆ. ಆ ಮಾರ್ಗಗಳು ಇಲ್ಲಿವೆ.
ದೆಹಲಿ, ಆಗ್ರಾ, ರಣಥಂಬೋರ್, ಜೈಪುರ, ಬಿಕಾನೇರ್, ಜೋಧಪುರ, ಉದಯಪುರ ಮತ್ತು ಮುಂಬೈ.
ಮುಂಬೈ, ಉದಯಪುರ, ಜೋಧಪುರ, ಬಿಕಾನೇರ್, ಜೈಪುರ, ರಣಥಂಬೋರ್, ಆಗ್ರಾ ಮತ್ತು ದೆಹಲಿ.
ದೆಹಲಿ, ಜೈಪುರ, ರಣಥಂಬೋರ್, ಫತೇಪುರ್ ಸಿಕ್ರಿ, ಆಗ್ರಾ, ಓರ್ಚಾ, ಖಜುರಾಹೊ, ವಾರಣಾಸಿ ಮತ್ತು ದೆಹಲಿ.
ದೆಹಲಿ, ಆಗ್ರಾ, ರಣಥಂಬೋರ್, ಮತ್ತು ಜೈಪುರಕ್ಕೆ ಭೇಟಿ ನೀಡಿ ದೆಹಲಿಗೆ ಹಿಂತಿರುಗುತ್ತದೆ.
ಏಷ್ಯಾದ ಅತ್ಯಂತ ದುಬಾರಿ ರೈಲುಗಳಲ್ಲಿ ಒಂದಾಗಿದ್ದು, ಟಿಕೆಟ್ ದರ ₹6,92,727.43 ಆರಂಭವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.