ADVERTISEMENT

ಅರಕ್ಕನ್, ಮೃಚ್ಛಕಟಿಕ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 18:30 IST
Last Updated 7 ಫೆಬ್ರುವರಿ 2011, 18:30 IST

ರಂಗಶಂಕರ: ಮಂಗಳವಾರ ಸೃಷ್ಟಿ ಸಾಂಸ್ಕೃತಿಕ ವೇದಿಕೆಯಿಂದ ಅರಕ್ಕನ್ (ಹೂಲಿ ಶೇಖರ್ ಅವರ ‘ರಾಕ್ಷಸ’ ನಾಟಕವನ್ನು ಎಸ್. ಕುಮಾರ್ ಅವರು ತಮಿಳಿಗೆ ‘ಅರಕ್ಕನ್’ ಆಗಿ ಅನುವಾದಿಸಿದ್ದಾರೆ. ನಿರ್ದೇಶನ: ರಾಜ್ ಕುಮಾರ್, ಮುಖ್ಯ ಪಾತ್ರದಲ್ಲಿ ಜ್ಯೋತಿಪ್ರಿಯಾ) ತಮಿಳು ನಾಟಕ.

‘ಉತ್ತಮಪಾಲಯಂ’ ಎಂಬ ಊರಿನ ಉತ್ತರಸ್ವಾಮಿ ಮಠದ ಸ್ವಾಮೀಜಿ ಗ್ರಾಮದಲ್ಲಿ ದುಷ್ಟಶಕ್ತಿ ತಲೆ ಎತ್ತದಂತೆ ಧರ್ಮಪಾಲನೆ ಮಾಡುತ್ತಿರುತ್ತಾರೆ. ಇಂಥ ಸಂದರ್ಭದಲ್ಲಿ ಬರ ಬೀಳುತ್ತದೆ. ಇದರಿಂದ ಪಾರಾಗಲು ಊರ ಗೌಡರ ಮಗ ರಾಮುವಿಗೆ ಕಾಡಿನಿಂದ ಅಮೂಲ್ಯ ವಸ್ತವೊಂದನ್ನು ತರಲು ಹೇಳುತ್ತಾರೆ.

ಅದರಂತೆ ಕಾಡಿಗೆ ಹೋದ ರಾಮು ಅಲ್ಲಿ ‘ಮಾಯೆ’ಯ ಬಲೆಗೆ ಬಿದ್ದು ಮಧುರಸದ ದಾಸನಾಗುತ್ತಾನೆ. ನಂತರ ಅದನ್ನು ಗ್ರಾಮಕ್ಕೆ ತರುತ್ತಾನೆ. ಅದರಿಂದ ಗ್ರಾಮದವರೆಲ್ಲ ಮದ್ಯ ವ್ಯಸನಿಗಳಾಗುತ್ತಾರೆ. ಮುಂದೆ ಕತೆ ವಿಶಿಷ್ಟ ತಿರುವು ಪಡೆದುಕೊಳ್ಳುತ್ತದೆ.

ಬುಧವಾರ  ಅನಿಕೇತನ ತಂಡದಿಂದ ಶೂದ್ರಕನ ಮೃಚ್ಛಕಟಿಕ ನಾಟಕ (ನಿರ್ದೇಶನ: ಸಣ್ಣೇಗೌಡ). ಸ್ಥಳ: ರಂಗಶಂಕರ, ಜೆ.ಸಿ. ರಸ್ತೆ. ಸಂಜೆ 7.30.  g

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.