ADVERTISEMENT

ಆಭರಣ ಪ್ರದರ್ಶನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2014, 19:30 IST
Last Updated 27 ಫೆಬ್ರುವರಿ 2014, 19:30 IST
ಆಭರಣ ಪ್ರದರ್ಶನಕ್ಕೆ ಚಾಲನೆ
ಆಭರಣ ಪ್ರದರ್ಶನಕ್ಕೆ ಚಾಲನೆ   

ಆಭರಣಪ್ರಿಯರ ನೆಚ್ಚಿನ ಪ್ರದರ್ಶನ ಮತ್ತು ಮಾರಾಟ ಮೇಳ ‘ಜ್ಯುವೆಲ್ಸ್‌ ಎಕ್ಸಾಟಿಕ’ ಮತ್ತೊಮ್ಮೆ ಬಂದಿದೆ. ಎಕ್ಸ್‌ಪೋ ವರ್ಲ್ಡ್ ಜ್ಯುವೆಲ್ಸ್‌ ಆಫ್‌ ಇಂಡಿಯಾ ಆಯೋಜಿಸಿರುವ ಈ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳವು ಮಾರ್ಚ್‌ 2ರವರೆಗೆ ನಡೆಯಲಿದೆ.

ಶುಕ್ರವಾರ ಮಧ್ಯಾಹ್ನ 12.30ಕ್ಕೆ ನಟಿ ಪ್ರಣೀತಾ ಸುಭಾಷ್‌ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತರಾದ ಭೀಮೇಶ್ವರ ಜೋಷಿ ಅವರ ಪತ್ನಿ ರಾಜಲಕ್ಷ್ಮಿ ಬಿ.ಜೋಷಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಪ್ರದರ್ಶನಕ್ಕೆ ಚಾಲನೆ ಸಿಕ್ಕ ನಂತರ ರೂಪದರ್ಶಿಗಳು ಆಕರ್ಷಕ ವಿನ್ಯಾಸದ ಆಭರಣಗಳನ್ನು ಧರಿಸಿ ರ್‍ಯಾಂಪ್ ವಾಕ್‌ ಮಾಡಲಿದ್ದಾರೆ. ಅದಕ್ಕಾಗಿ ಫ್ಯಾಷನ್‌ ಷೋ ಏರ್ಪಡಿಸಲಾಗಿದೆ. ನಟಿ ಪ್ರಣೀತಾ ಅವರು ಅದ್ದೂರಿ ಆಭರಣಗಳನ್ನು ಧರಿಸಿ ಕ್ಯಾಟ್‌ವಾಕ್‌ ಮಾಡುವುದಷ್ಟೇ ಅಲ್ಲದೇ ಷೋ ಸ್ಟಾಪರ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ. 

ಅಂದಹಾಗೆ, ಪ್ರದರ್ಶನ ಮೇಳದಲ್ಲಿ ಜೈಪುರದ ಆಮ್ರಪಾಲಿ, ಧವನಂ ಜ್ಯುವೆಲರ್ಸ್, ಗೆಹ್ನಾ ಜ್ಯುವೆಲರ್ಸ್, ಜೋಧ್‌ಪುರದ ಜೆಮ್ಸ್ ಅಂಡ್ ಜ್ಯುವೆಲ್ಸ್ ಸೇರಿದಂತೆ ದೇಶದ ಪ್ರಮುಖ ೫೦ ಆಭರಣ ಮಳಿಗೆಗಳು ತಮ್ಮ ಹೊಸ ವಿನ್ಯಾಸದ ಆಭರಣಗಳನ್ನು ಪ್ರದರ್ಶಿಸಲಿವೆ. ಸಾಂಪ್ರದಾಯಿಕ ವಿನ್ಯಾಸದಿಂದ ಸಮಕಾಲೀನ ವಿನ್ಯಾಸದ ಆಭರಣಗಳವರೆಗೆ ಬಹುಬಗೆ ವಿನ್ಯಾಸದ ಆಭರಣಗಳು ಒಂದೇ ಸೂರಿನಡಿ ಲಭ್ಯವಿರುತ್ತವೆ.
ಸ್ಥಳ: ಶೆರಟಾನ್ ಹೋಟೆಲ್, ಒರಾಯನ್ ಮಾಲ್, ಡಾ.ರಾಜ್‌ಕುಮಾರ್‌ ರಸ್ತೆ. ಮಾಹಿತಿಗೆ: 72595 14859.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.