ADVERTISEMENT

ಆರೋಗ್ಯಕ್ಕಾಗಿ ನಡಿಗೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 19:30 IST
Last Updated 3 ಅಕ್ಟೋಬರ್ 2012, 19:30 IST

ಮಲ್ಲೇಶಪಾಳ್ಯ ಮುಖ್ಯರಸ್ತೆ ಹಿಂಭಾಗದಲ್ಲಿರುವ ಮೆಡಿ ಹೋಪ್ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯು ಸೆಪ್ಟೆಂಬರ್ 30ರಂದು ವಿಶ್ವ ಹೃದಯ ದಿನದ ಅಂಗವಾಗಿ ವಾಕಥಾನ್ ಆಯೋಜಿಸಿತ್ತು.

ಮೆಡಿ ಹೋಪ್ ಆಸ್ಪತ್ರೆಯಿಂದ ಆರಂಭವಾದ ವಾಕಥಾನ್ ಕಡಗದಾಸಪುರ, ಸಿ.ವಿ. ರಾಮನ್ ನಗರ, ಬಾಗ್ಮನೆ ಟೆಕ್‌ಪಾರ್ಕ್ ಮೂಲಕ ಆಸ್ಪತ್ರೆವರೆಗೆ ಹಮ್ಮಿಕೊಳ್ಳಲಾಗಿತ್ತು. ಒಟ್ಟು ಮೂರು ಕಿ.ಮೀ ದೂರದ  ವಾಕಥಾನ್‌ನಲ್ಲಿ ಆಸ್ಪತ್ರೆ ವೈದ್ಯರು ಸೇರಿದಂತೆ ಸುಮಾರು 70ಕ್ಕೂ ಹೆಚ್ಚಿನ ಮಂದಿ ಪಾಲ್ಗೊಂಡಿದ್ದರು.

ಬೆಳಿಗ್ಗೆ 7.30ಕ್ಕೆ ಆರಂಭವಾದ ವಾಕಥಾನ್ ನೇತೃತ್ವವನ್ನು ನಟ, ಕಿರುತೆರೆ ನಿರ್ದೇಶಕ ಮಾಸ್ಟರ್ ಆನಂದ್ ವಹಿಸಿದ್ದರು. ಜನರಲ್ಲಿ ಹೃದಯವನ್ನು ಆರೋಗ್ಯಯುತವಾಗಿ ಇಟ್ಟುಕೊಳ್ಳುವ ಹಾಗೂ ಅದರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ವಾಕಥಾನ್ ಆಯೋಜಿಸಿಲಾಗಿತ್ತು.

ವಿಶ್ವದಾದ್ಯಂತ ಹೃದ್ರೋಗಗಳ ಕಾರಣದಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ವಿಶ್ವದಾದ್ಯಂತ ಹೃದಯಾಘಾತ ಹಾಗೂ ಹೃದಯವನ್ನು ಸಂರಕ್ಷಿಸುವ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ವಾಕಥಾನ್‌ನಿಂದ ಜನರಲ್ಲಿ ಅರಿವು ಮೂಡಿಸಲಾಯಿತು. ಜೊತೆಗೆ ಆಸ್ಪತ್ರೆ ವತಿಯಿಂದ ಉಚಿತ ಹೃದಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.