ADVERTISEMENT

ಉತ್ತರಹಳ್ಳಿ ಪಟಾಲಮ್ಮ ದೇವಿ ಉತ್ಸವ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 19:30 IST
Last Updated 26 ಏಪ್ರಿಲ್ 2012, 19:30 IST

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಉತ್ತರಹಳ್ಳಿಯ ಪಟಾಲಮ್ಮ, ಮಾರಮ್ಮ, ಆಂಜನೇಯ ಸ್ವಾಮಿ, ನಗರದೇವತೆ ಅಣ್ಣಮ್ಮದೇವಿಯ ಉತ್ಸವ, ಪಲ್ಲಕ್ಕಿ ಉತ್ಸವ, ಜಾನಪದ ಕಲೆ, ಗ್ರಾಮೀಣ ಸಂಸ್ಕೃತಿಯ ಹಬ್ಬ ಏ.28ರಿಂದ 30 ವರೆಗೆ ನಡೆಯಲಿದೆ.

ಎರಡು ವರ್ಷಕ್ಕೊಮ್ಮೆ ನಡೆಯಲಿರುವ ದೇವರ ಉತ್ಸವಕ್ಕೆ ಸಕಲ ಸಿದ್ಧತೆ ನಡೆದಿದೆ.
ಏಪ್ರಿಲ್ 28ರಂದು ಬೆಳಗ್ಗೆ 11ಕ್ಕೆ ಜಾನಪದ ಕಲಾ ತಂಡಗಳ ಪ್ರದರ್ಶನದೊಂದಿಗೆ ನಗರ ದೇವತೆ ಅಣ್ಣಮ್ಮ ದೇವಿಯ ಗ್ರಾಮ ಪ್ರವೇಶ. ಸಂಜೆ 4ಕ್ಕೆ ಆಂಜನೇಯ ಸ್ವಾಮಿಗೆ ಸಾವಿರಾರು ಮಹಿಳೆಯರು ಬೆಲ್ಲದ ಆರತಿಯೊಂದಿಗೆ ಮೆರವಣಿಗೆ. ಪೂಜಾ ಕುಣಿತ, ಪಟ್ಟ ಕುಣಿತದ ಮೂಲಕ ದೇವರುಗಳ ಉತ್ಸವ ನಡೆಯಲಿದೆ.

ನಂತರ ಅಂತರರಾಷ್ಟ್ರೀಯ ದೇಹಧಾರ್ಡ್ಯ ಪ್ರದರ್ಶನ , ಬಿ. ಬೋಯಿಂಗ್ ಸೈಬರ್ ತಂಡದವರಿಂದ ನೃತ್ಯ ಪ್ರದರ್ಶನ ನಡೆಯಲಿದ್ದು, ಸಂಜೆ 7ಕ್ಕೆ ಜೂನಿಯರ್ ರಾಜ್ ಕುಮಾರ್ ಖ್ಯಾತಿಯ ಅಶೋಕ್ ಬಸ್ತಿ ತಂಡದಿಂದ ಸಾಂಸ್ಕೃತಿಕ ಹಾಗೂ ಹಾಸ್ಯ ನಗೆ ಕೂಟ ಏರ್ಪಡಿಸಿದೆ.

29ರ ಬೆಳಗ್ಗೆ 5ಕ್ಕೆ ಅಣ್ಣಮ್ಮ, ಮಾರಮ್ಮ, ಪಟ್ಟಾಲಮ್ಮ, ಆಂಜನೇಯ ಸ್ವಾಮಿಗೆ ಪೂಜೆ. ಸಂಜೆ 6.30ಕ್ಕೆ ನಂದಿತ ಮತ್ತು ಹೇಮಂತ್ ತಂಡದಿಂದ `ಸಂಗೀತ ಸಂಜೆ~ ಕಾರ್ಯಕ್ರಮ ನಡೆಯಲಿದೆ.

ಸೋಮವಾರ (ಏ.30) ಬೆಳಿಗ್ಗೆ 9.30ಕ್ಕೆ ಮಹಾಮಂಗಳಾರತಿ. ಸಂಜೆ 4ಕ್ಕೆ ಅಣ್ಣಮ್ಮ, ಆಂಜನೇಯ, ಮಾರಮ್ಮ, ಪಟ್ಟಾಲಮ್ಮ ದೇವರುಗಳ ಮುತ್ತಿನ ಪಲ್ಲಕ್ಕಿ ಉತ್ಸವ. ನಾಡಿನ ವಿವಿಧ ಜನಪದ ಕಲಾ ತಂಡಗಳ ವೈವಿಧ್ಯಮಯ ಪ್ರದರ್ಶನ. ಜೊತೆಗೆ ಗ್ರಾಮೀಣ ಸಂಸ್ಕೃತಿ ಬಿಂಬಿಸುವ ಪೌರಾಣಿಕ. ಜಾನಪದ. ಕ್ರೀಡಾ ಪ್ರದರ್ಶನವನ್ನು ಸಂಸ್ಥೆಯು ಆಯೋಜಿಸಿದೆ.
 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.