ADVERTISEMENT

ಎಚ್‌ಪಿಯಿಂದ ನೂತನ ಪ್ರಿಂಟರ್

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2012, 19:30 IST
Last Updated 5 ಏಪ್ರಿಲ್ 2012, 19:30 IST

ಹ್ಯೂಯಿಟ್ ಪ್ಯಾಕಾರ್ಡ್ (ಎಚ್‌ಪಿ) ಕಂಪೆನಿಯು ಮೊದಲ `ಎಚ್‌ಪಿ~ ಇಂಡಿಗೋ ಡಬ್ಲ್ಯೂ7200 ಡಿಜಿಟಲ್ ಆಫ್‌ಸೆಟ್ ಪ್ರೆಸ್ಸನ್ನು ಪರಿಚಯಿಸಿದೆ. ನಗರದ `ಕಲರ್ ಕೋಡ್ ಡಿಜಿಟಲ್ ಪ್ರೆಸ್~ ಈ ಪ್ರಿಂಟರನ್ನು ಅಳವಡಿಸಿಕೊಂಡ ಮೊದಲ ಸಂಸ್ಥೆ ಎನಿಸಿಕೊಂಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕಲರ್ ಕೋಡ್ ಡಿಜಿಟಲ್ ಪ್ರೆಸ್‌ನ ವ್ಯವಸ್ಥಾಪಕ ನಿರ್ದೇಶಕ ಕಯು ದಂಭೂರಾ, `2008ರಲ್ಲಿ ಎಚ್‌ಪಿ ಇಂಡಿಗೋ ಪ್ರೆಸ್ 5500~ನ್ನು ಅಳವಡಿಸಿಕೊಂಡ ನಾವು, ಅದರಿಂದ ಯಶಸ್ಸು ಸಾಧಿಸಿದ್ದೇವೆ. ಆದರೆ ಇನ್ನೂ ಹೆಚ್ಚು ಸಾಮರ್ಥ್ಯದ ಅಗತ್ಯವಿತ್ತು. ಹಾಗಾಗಿ ಎಚ್‌ಪಿ ಇಂಡಿಗೋ ಡಬ್ಲ್ಯೂ7200 ಡಿಜಿಟಲ್ ಆಫ್‌ಸೆಟ್ ಪ್ರೆಸ್ ಅಳವಡಿಸಿಕೊಂಡೆವು ಎಂದರು.

ಹೊಸ ಪ್ರಿಂಟರ್‌ನಿಂದಾಗಿ ಆನ್-ಡಿಮ್ಯಾಂಡ್, ಶಾರ್ಟ್-ರನ್ ಬುಕ್ಸ್, ನಿಯತಕಾಲಿಕೆಗಳು, ಮ್ಯೋನುಯಲ್, ಬ್ರೌಷರ್‌ಗಳು, ಮಾರ್ಕೆಟಿಂಗ್ ಸಾಮಗ್ರಿ, ಯೆಲ್ಲೋಬುಕ್ಸ್‌ಗಳ ತಯಾರಿಕೆಯಲ್ಲಿ ಅತ್ಯುತ್ತಮ ಆಫ್‌ಸೆಟ್ ಗುಣಮಟ್ಟದ ಸೇವೆ ಒದಗಿಸಬಹುದಾಗಿದೆ.

`ಎಚ್‌ಪಿ ಇಂಡಿಗೋದ ಈವರೆಗಿನ ಅತ್ಯಂತ ವೇಗವಾಗಿ ಔಟ್‌ಪುಟ್ ಕೊಡುವ ಆಫ್‌ಸೆಟ್ ಪ್ರೆಸ್ ಇದಾಗಿದ್ದು, `ಡಿಜಿಟಲ್ ಪ್ರಿಂಟಿಂಗ್‌ನ ಪವರ್ ಹೌಸ್~ ಎನಿಸಿದೆ ಎನ್ನುತ್ತಾರೆ ಎಚ್‌ಪಿ-ಐಪಿಜಿಯ ಗ್ರಾಫಿಕ್ ಸಲ್ಯೂಷನ್ ವ್ಯವಹಾರ ವಿಭಾಗದ ನಿರ್ದೇಶಕ ಪುನೀತ್ ಚೆಡಾ.

ಇದು ಬೈಂಡಿಂಗ್, ಪಂಚಿಂಗ್, ಕೇಸ್-ಮೇಕಿಂಗ್ ಮತ್ತು ಲ್ಯಾಮಿನೇಷನ್ ಸೇರಿದಂತೆ ಎಲ್ಲ ವಿಧದ ಪ್ರಿಂಟಿಂಗ್ ಸೇವೆಗಳನ್ನು ಒದಗಿಸುತ್ತದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.