`ಹೂ ಆರ್ ದಿ ಚಾಂಪಿಯನ್ಸ್ ದಿಸ್ ಇಯರ್?~ ಎಂಬ ಘೋಷಣಾ ವಾಕ್ಯದೊಂದಿಗೆ ಬೆಂಗಳೂರು ಅಂತರರಾಷ್ಟ್ರೀಯ ತಾಂತ್ರಿಕ ಉದ್ಯಾನವನ (ಐಟಿಪಿಬಿ) ಇತ್ತೀಚೆಗಷ್ಟೆ ಆಯೋಜಿಸಿದ್ದ 15ನೇ ವಾರ್ಷಿಕ ಹೆಲ್ತಿ ಲೈಫ್‌ಸ್ಟೈಲ್ ಮೀಟ್‌ನ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದವರ ಹೆಸರನ್ನು ಏಪ್ರಿಲ್ 2ರಂದು ಘೋಷಿಸಲಾಯಿತು.
ಐಟಿ ಮಂದಿಗೆಂದು ಏರ್ಪಡಿಸಿದ್ದ ಸ್ಪರ್ಧೆಯಲ್ಲಿ 45 ಐಟಿ ಕಂಪೆನಿಗಳ ಸುಮಾರು 2200ಕ್ಕೂ ಹೆಚ್ಚು ಪ್ರತಿನಿಧಿಗಳು 13 ವಲಯದ ಕ್ರೀಡೆಗಳಲ್ಲಿ ಭಾಗವಹಿಸಿದ್ದರು. ಕ್ರಿಕೆಟ್, ಫುಟ್‌ಬಾಲ್, ವಾಲಿಬಾಲ್, ಥ್ರೊಬಾಲ್‌ನಂತಹ ಹೊರಾಂಗಣ ಕ್ರೀಡೆಗಳೊಂದಿಗೆ ಕೇರಂ, ಚೆಸ್‌ನಂತಹ ಒಳಾಂಗಣ ಕ್ರೀಡೆ ಮತ್ತು ಫಿಟ್‌ನೆಸ್ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಇಂಟರ್-ಕಾರ್ಪೊರೇಟ್ ಬೌಲಿಂಗ್ ಪಂದ್ಯ ಈ ಬಾರಿಯ ಪ್ರಮುಖ ಆಕರ್ಷಣೆಯಾಗಿತ್ತು. ಸ್ಪರ್ಧೆಯಲ್ಲಿ ಜನರಲ್ ಮೋಟಾರ್ಸ್ ಟೆಕ್ನಿಕಲ್ ಸೆಂಟರ್ ಇಂಡಿಯಾ ಐಟಿಪಿಬಿಯ ಒಟ್ಟಾರೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಆರಂಭದಲ್ಲಿ ಫಸ್ಟ್ ಅಡ್ವಾಂಟೇಜ್ ಆಫ್ ಶೋರ್ ಮತ್ತು ಟಾಟಾ ಕನ್ಸೆಲ್ಟೆನ್ಸಿ ಕಂಪೆನಿಗಳು ಜನರಲ್ ಮೋಟಾರ್ಸ್‌ಗೆ ತೀವ್ರ ಸ್ಪರ್ಧೆ ಒಡ್ಡಿದ್ದವು. ಅಂತಿಮ ಹಂತದಲ್ಲಿ ಜನರಲ್ ಮೋಟಾರ್ಸ್ ವಿಜೇತರಾಗಿದ್ದಾರೆ.
ಇದೇ ಸಂದರ್ಭದಲ್ಲಿ ಐಟಿಪಿಬಿ ನಿರ್ವಹಣಾ ಸಂಸ್ಥೆ ಅಸೆಂಡಸ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಥಾಮಸ್ ಮಾತನಾಡಿ, ಐಟಿಪಿಬಿಯ 15ನೇ ವಾರ್ಷಿಕ ಹೆಲ್ತಿ ಲೈಫ್ ಸ್ಟೈಲ್ ಮೀಟ್‌ನ ಈ ಸಂದರ್ಭ ತುಂಬಾ ಸಂತಸ ತಂದಿದೆ. ಈ ಕ್ರೀಡಾ ಸ್ಪರ್ಧೆಗಳಲ್ಲಿ 2200 ಮಂದಿ ಭಾಗವಹಿಸಿರುವುದು ನಿಜಕ್ಕೂ ವಿಶೇಷವೆನಿಸಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.