ADVERTISEMENT

ಕರಡಿ ರೈಮ್ಸ್ ಖುಷಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 19:30 IST
Last Updated 2 ಜನವರಿ 2014, 19:30 IST
ಕರಡಿ ರೈಮ್ಸ್ ಖುಷಿ
ಕರಡಿ ರೈಮ್ಸ್ ಖುಷಿ   

ಮಕ್ಕಳು ಮತ್ತು ಹಿರಿಯರ ಸಂತೋಷಕ್ಕೆ ಅಲ್ಲಿ ಪಾರವೇ ಇರಲಿಲ್ಲ. ‘ಒನ್ಸ್ ಅಪಾನ್ ಎ ಬಕ್-ಬಕ್ ಟ್ರೀ’ ಎಂಬ ಸಂಗೀತ ನಾಟಕವನ್ನು ‘ಕರಡಿ ರೈಮ್ಸ್‌’ಗಳೊಂದಿಗೆ ಆಸ್ವಾದಿಸಲು ಸಿಕ್ಕ ಅವಕಾಶ ಅದು. ಬೆಂಗಳೂರಿನ ಗುಡ್ ಶೆಫರ್ಡ್ ಆಡಿಟೋರಿಯಂನಲ್ಲಿ ನಡೆದ ಈ ಕಾರ್ಯಕ್ರಮವನ್ನು ‘ಕರಡಿ ಪಾತ್ ಎಜುಕೇಷನ್ ಕಂಪೆನಿ’ ಮತ್ತು ‘ಏವಮ್’ ಜಂಟಿಯಾಗಿ ಆಯೋಜಿಸಿದ್ದವು. ಅಲ್ಲಿದ್ದ ಚಿಣ್ಣರು, ಚೆನ್ನರು ಅನುರಾಧ ಶ್ರೀರಾಮ್ ಅವರೊಂದಿಗೆ ಕರಡಿ ರೈಮ್‌ಗಳನ್ನು ಹಾಡಿ ಕುಣಿದು, ಹರ್ಷ ವ್ಯಕ್ತಪಡಿಸಿದರು.

ಅವರಿಗೆ ಕುನ್ಯೂ (ಚಿಕ್ಕ ಇಲಿ), ಲೋಕಿ (ದುಃಖತಪ್ತ ಮೊಸಳೆ), ಶೂಷಾ (ಹರ್ಷಗೊಂಡ ಕೋತಿ), ಸಾಂಬ (ಭಯಂಕರ ಸಿಂಹ), ಬಕ್-ಬಕ್(ಬುದ್ಧಿವಂತ ಮಾವಿನ ಮರ)ಗಳ ಪರಿಚಯ ಮಾಡಿಕೊಡಲಾಯಿತು.

ಈ ಸಂದರ್ಭದಲ್ಲಿ ‘ಕರಡಿ ರೈಮ್ಸ್-–-ಒನ್ಸ್ ಅಪಾನ್ ಎ ಬಕ್-ಬಕ್ ಟ್ರೀ’ಯ ನಿರ್ದೇಶಕರಾದ ಭಾರ್ಗವ ರಾಮಕೃಷ್ಣನ್ ಮಾತನಾಡಿ, ‘ಈ ಪ್ರದರ್ಶನ ಸೊಗಸಾಗಿತ್ತು. ಮಕ್ಕಳು ಕಾರ್ಯಕ್ರಮದ ತಾರೆಗಳಾಗಿದ್ದರು. ಅವರ ಉತ್ಸಾಹ ಎಂಥವರಲ್ಲೂ ಸ್ಫೂರ್ತಿ ತುಂಬುವಂಥದ್ದು’ ಎಂದರು.

ಅನುರಾಧಾ ಶ್ರೀರಾಮ್ ಮಾತನಾಡಿ, ಮಕ್ಕಳೊಂದಿಗೆ ಸಂಪರ್ಕ ಅದ್ಭುತವಾಗಿದ್ದು, ಅವರು ನಿಜ ಅರ್ಥದಲ್ಲಿ ಪ್ರೇಕ್ಷಕರು ಎಂದರು. ಕರಡಿ ಟೇಲ್ಸ್‌ನ ಸಹಸ್ಥಾಪಕರಾದ ಶೋಭಾ ವಿಶ್ವನಾಥ್ ಕೂಡ ಸಂಭ್ರಮಕ್ಕೆ ಸಾಕ್ಷಿಯಾದರು. ಈ ಕಾರ್ಯಕ್ರಮ ಹೈದರಾಬಾದ್, ಪುಣೆ, ಚೆನ್ನೈಗಳಲ್ಲೂ ಪ್ರದರ್ಶಿತವಾಗಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.