ADVERTISEMENT

ಕಾರ್ಯಾಗಾರ - ತರಬೇತಿ - ಶಿಬಿರ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 19:30 IST
Last Updated 10 ಫೆಬ್ರುವರಿ 2012, 19:30 IST

ನಾಯಕತ್ವ ಸಾಮರ್ಥ್ಯ
ಬ್ರಿಟಿಶ್ ಲೈಬ್ರರಿಯು `ನಾಯಕತ್ವ ಸಾಮರ್ಥ್ಯ~ ವಿಷಯದ ಕುರಿತು ಇದೇ 12ರಂದು (ಭಾನುವಾರ) ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.

ಯಾವುದೇ ಸಂಸ್ಥೆ ನಿರ್ದೇಶಕರು, ಪ್ರಾಂಶುಪಾಲರು, ಮೇಲ್ವಿಚಾರಕರು, ಉದ್ಯೋಗಿಗಳು ಈ ಕಾರ್ಯಾಗಾರದಿಂದ ಉಪಯೋಗ ಪಡೆದುಕೊಳ್ಳಬಹುದು.
ನಾಯಕತ್ವ ಎಂದರೇನು? ನಾಯಕತ್ವದ ವಿಧಗಳು, ನಾಯಕತ್ವದ ಸಾಮರ್ಥ್ಯ, ಬದಲಾಗುತ್ತಿರುವ ನಾಯಕತ್ವದ ಕಲ್ಪನೆ ಇವುಗಳನ್ನು ಕಾರ್ಯಾಗಾರದಲ್ಲಿ ವಿವರಿಸಲಾಗುವುದು.

ಲಿಂಕ್‌ಕಮ್ಯುನಿಕೇಶನ್ಸ್ ಸಂಸ್ಥೆಯ  ರಾಣಿ ಇನ್ನಸ್ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ. ಫೆಬ್ರುವರಿ 12ರ ಭಾನುವಾರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಕಾರ್ಯಾಗಾರ ನಡೆಯಲಿದೆ. ಸ್ಥಳ: ಬ್ರಿಟಿಷ್ ಲೈಬ್ರರಿ, 23,ಕಸ್ತೂರ್‌ಬಾ ರಸ್ತೆ. ಮಾಹಿತಿಗೆ: 22489220.

ಉಚಿತ ನೇತ್ರ ತಪಾಸಣೆ
ಹೈಪರ್‌ಸಿಟಿಯು ಅಗರ್‌ವಾಲ್ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಶನಿವಾರ (ಫೆ.) `ವಿಷನ್ ಫಾರ್ ಆಲ್~ ಹೆಸರಿನಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಿದೆ.  ಶಿಬಿರದಲ್ಲಿ ವೈದ್ಯಕೀಯ ಸಲಹೆಯನ್ನು ಪಡೆಯಬಹುದು.
ಸ್ಥಳ: ಹೈಪರ್‌ಸಿಟಿ ಮಳಿಗೆ, ರಾಯಲ್ ಮೀನಾಕ್ಷಿ ಮಾಲ್, ಬನ್ನೇರುಘಟ್ಟ ರಸ್ತೆ.  ಬೆಳಿಗ್ಗೆ 10.30ರಿಂದ ಮಧ್ಯಾಹ್ನ 4.
ಮಾಹಿತಿಗೆ: 89714 98865

ಆರೋಗ್ಯ ತಪಾಸಣಾ ಶಿಬಿರ
ವಿಕಾಸ ಡಯಾಗ್ನೋಸ್ಟಿಕ್ಸ್: ಶನಿವಾರದಿಂದ (ಫೆ.11ರಿಂದ 14) ಮಂಗಳವಾರದವರೆಗೆ ಮಧುಮೇಹ , ರಕ್ತದೊತ್ತಡ, ಕಣ್ಣು ಹಾಗೂ ಹಲ್ಲುಗಳ ಉಚಿತ ತಪಾಸಣಾ ಶಿಬಿರ ಆಯೋಜಿಸಿದೆ.
ಸ್ಥಳ: ನಂ 24, ಹೊಂಗಸಂದ್ರ ಬಸ್ ನಿಲ್ದಾಣ, ಆಂಜನೇಯ ದೇವಸ್ಥಾನ ಸಮೀಪ, ಹೊಂಗಸಂದ್ರ. ಬೆಳಿಗ್ಗೆ 6.30ರಿಂದ ರಾತ್ರಿ10. ಮಾಹಿತಿಗೆ: 91413 37171.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.