ಇಸ್ಕಾನ್‌ನಲ್ಲಿ ಈ ದೀಪಾವಳಿಯನ್ನು ವಿಶೇಷವಾಗಿ ಆಚರಿಸಲಾಯಿತು.
ಇಂದ್ರನು ಸುರಿಸಿದ ಮಳೆಯಿಂದ ಬೃಂದಾವನವನ್ನು ರಕ್ಷಿಸಲು ಕೃಷ್ಣ ತನ್ನ ಕಿರುಬೆರಳಿನಿಂದ ಗೋವರ್ಧನಗಿರಿಯನ್ನು ಎತ್ತಿ ಹಿಡಿಯುತ್ತಾನೆ. ಬೆಟ್ಟದಡಿ ಬೃಂದಾವನದ ಸಮಸ್ತ ಜೀವಿಗಳೂ ಆಸರೆ ಪಡೆಯುತ್ತಾರೆ. ಇಂದ್ರನ ಮೇಲಿನ ವಿಜಯವನ್ನು ದೀಪಾವಳಿಯಂದು ಆಚರಿಸಲಾಗುತ್ತದೆ.
ಈ ನೆನಪಿನಲ್ಲಿ ನಗರದ ಇಸ್ಕಾನ್ ದೇವಾಲಯದಲ್ಲಿಯೂ ಗೋಪೂಜೆ ಹಾಗೂ ಕೃಷ್ಣನ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. 500 ಕೆ.ಜಿ. ತೂಕದ ಪ್ಲಮ್ ಕೇಕ್‌ನಲ್ಲಿ ಗೋವರ್ಧನ ಗಿರಿಯ ಮಾದರಿಯನ್ನು ಸೃಷ್ಟಿಸಲಾಗಿತ್ತು.
ಗೋವರ್ಧನ ಗಿರಿಯ ಅಲಂಕಾರಕ್ಕೆ 2000 ವಿವಿಧ ಬಗೆಯ ಕುಕ್ಕೀಸ್, 30 ಕೆ.ಜಿ ಹಾಲಿನ ಸಿಹಿ ಖಾದ್ಯವನ್ನೂ ಬಳಸಲಾಗಿತ್ತು. ಕೃಷ್ಣ ಮತ್ತು ಬಲರಾಮನ ಪೂಜೆಯ ನಂತರ ಈ ಕೇಕು ಹಾಗೂ ಕುಕ್ಕಿಸ್‌ಗಳನ್ನು ಭಕ್ತಾದಿಗಳಿಗೆ ಪ್ರಸಾದದ ರೂಪದಲ್ಲಿ ಹಂಚಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.