ADVERTISEMENT

ಗುಜರಾತಿ ಕೌಶಲ್ಯ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 19:30 IST
Last Updated 21 ಸೆಪ್ಟೆಂಬರ್ 2011, 19:30 IST

ಕಛ್‌ನ ಬಣ್ಣದ ಬ್ಲಾಕ್ ಪ್ರಿಂಟ್ ವಸ್ತ್ರ, ವರ್ಣಮಯ ಬಾಂದನಿ, ಸಲ್ವಾರ್ ಸೂಟ್, ಜಾಕೆಟ್, ಉದ್ದನೆಯ ಸ್ಕರ್ಟ್, ಸೀರೆ, ಬೆಡ್ ಕವರ್, ಕುಶನ್ ಕವರ್... ಪುರುಷರಿಗಾಗಿ ಚಿಕನ್ ಕುರ್ತಾ, ಮಕ್ಕಳಿಗಾಗಿ ಚನ್ಯಾ ಚೋಲಿ, ಸಂಬಲ್‌ಪುರಿ ಕಾಟನ್ ಸೀರೆ, ಖಾದಿ ವಸ್ತ್ರ...

ನಗರದಲ್ಲಿ ನಡೆಯುತ್ತಿರುವ ಗುಜರಾತ್ ಕೈಮಗ್ಗ ಮತ್ತು ಕರಕುಶಲ ಸಹಕಾರಿ ಒಕ್ಕೂಟ `ಗುರ್ಜರಿ~ ಪ್ರದರ್ಶನದಲ್ಲಿ ಕಾಣುತ್ತಿರುವ ವಸ್ತ್ರ ವೈಭವ ಇದು.ಮ್ಯಾಚಿಂಗ್‌ಪ್ರಿಯ ಆಧುನಿಕ ಮಹಿಳೆಯರಿಗಾಗಿ ಕುರ್ತಾ, ಲೆದರ್ ಬ್ಯಾಗ್, ಕೃತಕ ಆಭರಣ.

ಮನೆಯ ಒಳಾಲಂಕಾರ ಬದಲಿಸುವವರಿಗಾಗಿ ಸೆಣಬಿನ ಕುರ್ಚಿ, ಸೆಣಬಿನ ಜಂಭದ ಚೀಲ, ವಾಲ್ ಹ್ಯಾಂಗಿಂಗ್, ಫ್ರೇಮ್, ಮರದ ಪೀಠೋಪಕರಣ, ಕಿಶನ್‌ಗೇಟ್ ಪೀಠೋಪಕರಣಗಳೆಲ್ಲ ಇವೆ.

ಸ್ಥಳ: ಸಫೀನಾ ಪ್ಲಾಜಾ, ಇನ್‌ಫೆಂಟ್ರಿ ರಸ್ತೆ. ಬೆಳಿಗ್ಗೆ 10ರಿಂದ ರಾತ್ರಿ 9. ಪ್ರದರ್ಶನ ಸೆ. 25ಕ್ಕೆ ಮುಕ್ತಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.