
ಪ್ರಜಾವಾಣಿ ವಾರ್ತೆ
ರಂಗಭೂಮಿಯನ್ನು ಪ್ರೋತ್ಸಾಹಿಸುವ ಹಾಗೂ ಯುವ ಜನಾಂಗದಲ್ಲಿ ರಂಗಭೂಮಿ ಕುರಿತು ಆಸಕ್ತಿ ಮೂಡಿಸುವ ಸಲುವಾಗಿ ಜೈನ್ ವಿಶ್ವವಿದ್ಯಾಲಯವು ‘ಅಭಿನಯ’ ಎಂಬ ರಾಷ್ಟ್ರಮಟ್ಟದ ಕಿರುನಾಟಕ ಸ್ಪರ್ಧೆಯನ್ನು ಆಯೋಜಿಸಿದೆ.
ಭಾನುವಾರ (ಜ. 5) ನಡೆಯಲಿರುವ ಅಭಿನಯದ ಅಂತಿಮ ಸುತ್ತಿನಲ್ಲಿ ಬೆಳಿಗ್ಗೆ 10.30ಕ್ಕೆ ರಂಗಪಯಣ ತಂಡದಿಂದ ‘ಶ್ರದ್ಧಾ’ ನಾಟಕ, 12ಕ್ಕೆ ಸಂದೇಶ ತಂಡದಿಂದ ‘ಸಾಮಂತಿನಿ’, ಮಧ್ಯಾಹ್ನ 2ಕ್ಕೆ ರಂಗವರ್ತುಲ ತಂಡದಿಂದ ‘ಟ್ರೆಡ್‌ಮಿಲ್’, ಮಧ್ಯಾಹ್ನ 3.30ಕ್ಕೆ ಜೆಎಸ್‌ಎಸ್ ಧಾರವಾಡ ತಂಡದಿಂದ ‘ದೇವರ ಹೆಣ’ ನಾಟಕ ಪ್ರದರ್ಶನವಾಗಲಿದೆ.
ಸ್ಥಳ: ಜಾಗೃತಿ ರಂಗಭೂಮಿ, ರಾಮಗೊಂಡನಹಳ್ಳಿ, ವರ್ತೂರು ಮುಖ್ಯರಸ್ತೆ, ವೈಟ್‌ಫೀಲ್ಡ್.
ಪ್ರವೇಶ ಉಚಿತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.