ಬೈಕ್‌ನಲ್ಲಿ ಸುತ್ತುವ ಹವ್ಯಾಸವುಳ್ಳವರಿಗಾಗಿಯೇ ಜೀನ್ಸ್ ಹಾಗೂ ಡೆನಿಮ್ ಸಿದ್ಧಪಡಿಸುವ ಅಮೆರಿಕದ ವ್ರ್ಯಾಂಗ್ಲರ್ ಕಂಪೆನಿಯು ಸತತವಾಗಿ ಮೂರನೇ ಬಾರಿಗೆ ಟ್ರೂ ವಾಂಡರರ್ಸ್ 3.0 ಅನ್ನು ಮತ್ತೊಮ್ಮೆ ಆರಂಭಿಸಿದೆ. ಬೈಕ್ ಸುತ್ತಾಟದ ಮೋಜು ಸವಿಯುವವರಿಗಾಗಿಯೇ ಆಯೋಜಿಸಲಾಗುವ ಈ ಸ್ಪರ್ಧೆಗೆ ಫೆ. 14ರಿಂದ ಆರಂಭಗೊಂಡಿದೆ.
ಎಕ್ಸ್‌ಬಿಎಚ್‌ಪಿ ಜತೆಗೂಡಿ ಆಯೋಜಿಸಲಾದ ಟ್ರೂ ವಾಂಡರರ್ಸ್‌ನಲ್ಲಿ ಪಾಲ್ಗೊಳ್ಳುವ ಬೈಕರ್‌ಗಳು ತಮಗೆ ಸೂಚಿಸಿದ ಮಾರ್ಗದಲ್ಲಿ ಚಲಿಸುತ್ತಾ ಆಯಾಯ ದಿನದ ಘಟನೆಗಳು, ಸಾಗಿದ ದಾರಿ ಸೇರಿದಂತೆ ಸ್ವಾರಸ್ಯಕರ ಸಂಗತಿಗಳನ್ನು ತಮ್ಮ ಬ್ಲಾಗ್ ಹಾಗೂ ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಬೇಕೆನ್ನುವುದು ಸ್ಪರ್ಧೆಯ ನಿಯಮಗಳಲ್ಲೊಂದು. ಇವುಗಳಲ್ಲಿ ಓದುಗರು ಅತಿ ಹೆಚ್ಚು ಓಟ್ ಮಾಡುವ ಹಾಗೂ ತೀರ್ಪುಗಾರರು ಆಯ್ಕೆ ಮಾಡುವ ಸ್ಪರ್ಧಿ ಅಂತಿಮವಾಗಿ ವಿಜೇತರಾಗಲಿದ್ದಾರೆ.
ಪ್ರತಿಕೂಲ ಹವಾಮಾನ, ಕಚ್ಚಾ ರಸ್ತೆಯಲ್ಲಿ ಸಾಗುವ ಬೈಕರ್‌ಗಳಿಗಾಗಿಯೇ ವ್ರ್ಯಾಂಗ್ಲರ್ ಜೀನ್ಸ್‌ಗಳನ್ನು ಸಿದ್ಧಪಡಿಸಿದೆ. ನೀರು, ಎಣ್ಣೆಗಳಿಗೆ ಒದ್ದೆಯಾಗದ ಡೆನಿಮ್ಸ್ ಇದು. ಸ್ಪರ್ಧೆಯಲ್ಲಿ ಗೆದ್ದವರಿಗೆ ಕವಾಸಕಿ ಝಡ್800 ಬೈಕ್ ನೀಡಲಾಗುವುದು ಎಂದು ಸಂಸ್ಥೆ ಹೇಳಿದೆ.
ಸ್ಪರ್ಧಿಗಳು www.truewanderers.in ಜಾಲತಾಣದಲ್ಲಿ ತಮ್ಮ ಪ್ರವಾಸದ ವಿವರಗಳನ್ನು ದಾಖಲಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.