ADVERTISEMENT

ಡಾಟಾ ಕಾರ್ಡ್

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2012, 19:30 IST
Last Updated 9 ಮಾರ್ಚ್ 2012, 19:30 IST

ಲ್ಯಾಪ್‌ಟಾಪ್ ಬಳಕೆದಾರರಿಗಾಗಿ ಮ್ಯಾಟ್ರಿಕ್ಸ್ ಸೆಲ್ಯುಲಾರ್ ನೂತನ ಶ್ರೇಣಿಯ ಡಾಟಾ ಕಾರ್ಡ್ ಬಿಡುಗಡೆ ಮಾಡಿದೆ. ಮ್ಯಾಟ್ರಿಕ್ಸ್ ಅಂತರರಾಷ್ಟ್ರೀಯ ದೂರಸಂಪರ್ಕ ಸಾಧನದ ಜನಪ್ರಿಯ ಬ್ರ್ಯಾಂಡ್ ಆಗಿದೆ.

ಈ ಡಾಟಾ ಕಾರ್ಡ್ 3ಜಿ ಕನೆಕ್ಟಿವಿಟಿ ಹೊಂದಿದ್ದು 1.8 ಎಂಬಿಪಿಎಸ್ ಮೊಬೈಲ್ ಬ್ರಾಡ್‌ಬ್ಯಾಂಡ್ ಸ್ಪೀಡ್ ಹೊಂದಿದೆ. ಮ್ಯಾಟ್ರಿಕ್ಸ್ ಸೆಲ್ಯುಲರ್ ಗ್ರಾಹಕರು ಈಗ ಯಾವುದೇ ಚಿಂತೆಯಿಲ್ಲದೇ ವಿಶ್ವ ಪರ್ಯಟನೆ ಮಾಡಬಹುದು.
 
ಲ್ಯಾಪ್‌ಟಾಪ್ ಉಪಯೋಗಿಸಲು ಬೇಕಾದ  ಡಾಟಾ ರೋಮಿಂಗ್ ಅಥವಾ ಇಂಟರ್ನೆಟ್ ಸಂಪರ್ಕ ಅತಿ ಕಡಿಮೆ ವೆಚ್ಚದಲ್ಲಿದೆ.

ಇದು ಪ್ರವಾಸಿಗರು ಹಾಗೂ ಬಿಸಿನೆಸ್‌ಮನ್‌ಗಳಿಗೆ ಹೆಚ್ಚು ಅನುಕೂಲಕಾರಿಯಾಗಿದೆ. ಯಾವುದೇ ಕಿರಿಕಿರಿಯಿಲ್ಲದೆ ಇಂಟರ್ನೆಟ್ ಬಳಕೆ ಮಾಡಬಹುದು.

ಅಲ್ಲದೇ `ವೈ ಫೈ~ನಂತೆ ಹೆಚ್ಚು ವೇಗ ಹೊಂದಿದೆ. ಇ-ಮೇಲ್ ನೋಡಲು, ಬ್ರೌಸ್ ಹಾಗೂ ಟ್ವೀಟ್ ಮಾಡಲು ಮತ್ತು ಫೇಸ್‌ಬುಕ್ ನೋಡಲು ಇದರಿಂದ ಸಾಧ್ಯ. ಬೆಲೆ ರೂ.750.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.