ಏಪ್ರಿಲ್ 2, ಸೋಮವಾರ
ಕರ್ನಾಟಕ ಸರ್ಕಾರ: ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿ, ವಿಶ್ವೇಶ್ವರಯ್ಯ ಗೋಪುರ, ಪೋಡಿಯಂ ಬ್ಲಾಕ್, ಡಾ. ಬಿ. ಆರ್. ಅಂಬೇಡ್ಕರ್ ಬೀದಿ, ನಾಗರಿಕ ಸೇವಾ ಖಾತರಿ ಕಾಯಿದೆ- 2012 `ಸಕಾಲ~ದ ಉದ್ಘಾಟನೆ.
ಲೋಕಾರ್ಪಣೆ- ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ, ಅಧ್ಯಕ್ಷತೆ- ಕಾರ್ಮಿಕ ಸಚಿವ ಬಿ. ಎನ್. ಬಚ್ಚೇಗೌಡ, ಅತಿಥಿಗಳು- ಕೇಂದ್ರ ಕಾರ್ಪೋರೇಟ್ ವ್ಯಹಾರಗಳ ಸಚಿವ ಡಾ. ಎಂ. ವೀರಪ್ಪ ಮೊಯಿಲಿ, ವಿಧಾನ ಪರಿಷತ್ ಸಭಾಪತಿ ಡಿ. ಎಚ್. ಶಂಕರಮೂರ್ತಿ, ವಿಧಾನ ಸಭೆ ಸಭಾಪತಿ ಕೆ. ಜಿ. ಬೋಪಯ್ಯ, ಬೆಳಿಗ್ಗೆ 11
ಬೆಂಗಳೂರು ಜಿಲ್ಲಾಡಳಿತ: ಜಿಲ್ಲಾಧಿಕಾರಿಗಳ ಕಚೇರಿ, ಕೆ. ಜಿ. ರಸ್ತೆ, ಜಿಲ್ಲೆಯಲ್ಲಿ `ಸಕಾಲ~ ನಾಗರಿಕ ಸೇವಾ ಖಾತರಿ ಕಾಯ್ದೆ ಅನುಷ್ಠಾನದ ಉದ್ಘಾಟನೆ. ಉದ್ಘಾಟನೆ- ಗೃಹ ಸಚಿವ ಆರ್. ಅಶೋಕ್, ಅಧ್ಯಕ್ಷತೆ- ವಿಧಾನ ಸಭಾ ಸದಸ್ಯ ಆರ್. ರೋಷನ್‌ಬೇಗ್, ಅತಿಥಿಗಳು- ಕೇಂದ್ರ ಕಾರ್ಪೋರೇಟ್ ವ್ಯಹಾರಗಳ ಸಚಿವ ಡಾ. ಎಂ. ವೀರಪ್ಪ ಮೊಯಿಲಿ, ನಗರಾಭಿವೃದ್ಧಿ ಸಚಿವ ಎಸ್. ಸುರೇಶ್ ಕುಮಾರ್, ವಸತಿ ಸಚಿವ ವಿ. ಸೋಮಣ್ಣ, ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಬೆಳಿಗ್ಗೆ 11.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ: ಕೆ.ಇ.ಬಿ. ವಸತಿ ಗೃಹಗಳ ಆವರಣ, ತ್ಯಾಗರಾಜನಗರ, ಬಸವನಗುಡಿ, ನೂತನ ಅಂಚೆ ಕಚೇರಿ ಕಟ್ಟಡದ ಉದ್ಘಾಟನೆ, ಉದ್ಘಾಟನೆ- ಗೃಹ ಸಚಿವ ಆರ್. ಅಶೋಕ್, ಅಧ್ಯಕ್ಷತೆ- ಶಾಸಕ ಎಲ್. ಎ. ರವಿ ಸುಬ್ರಮಣ್ಯ, ಅತಿಥಿಗಳು- ಮೇಯರ್ ಶಾರದಮ್ಮ, ಲೋಕಸಭಾ ಸದಸ್ಯ ಅನಂತಕುಮಾರ್, ಬೆಳಿಗ್ಗೆ 10.30.
ಕರ್ನಾಟಕ ರಾಜ್ಯ ಪೊಲೀಸ್: ಕೆ.ಎಸ್.ಆರ್.ಪಿ. ಪೆರೇಡ್ ಮೈದಾನ, ಕೋರಮಂಗಲ. `ಪೊಲೀಸ್ ಧ್ವಜ ದಿನಾಚರಣೆ~. ಅತಿಥಿಗಳು- ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ, ಗೃಹ ಸಚಿವ ಆರ್. ಅಶೋಕ್. ಬೆಳಿಗ್ಗೆ 8.
ಕರ್ನಾಟಕ ರಾಜ್ಯ ಪೊಲೀಸ್: ಜಿಲ್ಲಾ ಸಶಸ್ತ್ರಮೀಸಲು ಪೊಲೀಸ್ ಪಡೆ, ಕವಾಯತು ಮೈದಾನ, ಬ್ಯಾಡರಹಳ್ಳಿ. `ಪೊಲೀಸ್ ಧ್ವಜ ದಿನಾಚರಣೆ~. ಅತಿಥಿಗಳು- ನಿವೃತ್ತ ಪೊಲೀಸ್ ಇನ್ಸ್‌ಪೆಕ್ಟರ್ ಟಿ. ರಾಮಯ್ಯ. ಬೆಳಿಗ್ಗೆ 8.
ಶಿಂಷಾ ಕಲಾ ಸಂಘ, ಬೆಂಗಳೂರು ಜಲ ಮಂಡಲಿ: ರವೀಂದ್ರ ಕಲಾಕ್ಷೇತ್ರ, ಜೆ. ಸಿ. ರಸ್ತೆ. ಜಲ ಮಂಡಲಿಯ ಕಾರ್ಮಿಕ ಮುಖಂಡ ಆರ್. ರಾಮಚಂದ್ರ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಶಿಂಷಾ ಕಲಾವಿದರಿಂದ `ಶ್ರೀ ಕೃಷ್ಣ ಸಂಧಾನ~ ಪೌರಾಣಿಕ ನಾಟಕ ಪ್ರದರ್ಶನ.
ಉದ್ಘಾಟನೆ- ನಗರಾಭಿವೃದ್ಧಿ ಸಚಿವ ಎಸ್. ಸುರೇಶ್ ಕುಮಾರ್, ಅಧ್ಯಕ್ಷತೆ- ಬೆಂಗಳೂರು ಜಲ ಮಂಡಲಿ ಅಧ್ಯಕ್ಷ ಗೌರವ ಗುಪ್ತ, ಅತಿಥಿಗಳು- ಸಂಸ್ಕೃತ ವಿವಿ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ಜಲ ಮಂಡಲಿಯ ಪ್ರಧಾನ ಎಂಜಿನಿಯರ್ ಟಿ. ವೆಂಕಟರಾಜು, ಮುಖ್ಯ ಎಂಜಿನಿಯರ್ ಎಸ್. ಎಂ. ಬಸವರಾಜು, ರಾಮಸ್ವಾಮಿ, ಕೆಂಪರಾಮಯ್ಯ, ನಾರಾಯಣ್. ಸಂಜೆ 5.30. .
ಸಾಂಸ್ಕೃತಿಕ ಕಾರ್ಯಕ್ರಮಗಳು
ಶ್ರೀ ರಾಜರಾಜೇಶ್ವರಿ ನಗರ್ ಕಲ್ಚರಲ್ ಅಸೋಸಿಯೇಷನ್: ಶ್ರೀ ಬಾಲಕೃಷ್ಣ ಬಯಲು ರಂಗ ಮಂದಿರ, ಬಿ. ಇ. ಎಂ. ಎಲ್ ಬಡಾವಣೆ, ರಾಜರಾಜೇಶ್ವರಿ ನಗರ. ಶ್ರೀ ರಾಮನವಮಿ ಸಂಗೀತೋತ್ಸವ- 2012. ಉದ್ಘಾಟನೆ- ಮೈಸೂರು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಕೆ. ಲಕ್ಷ್ಮೀಶ, ಅಧ್ಯಕ್ಷತೆ- ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಜಿ. ಎಚ್. ರಾಮಚಂದ್ರ. ಸ್ಯಾಕ್ಸೋಫೋನ್ ವಾದನ- ಶ್ರೀಧರ್ ಸಾಗರ್ ಮತ್ತು ತಂಡದಿದಂದ. ಪಿಟೀಲು- ಮೈಸೂರು ರಾಜೇಶ್, ಮೃದಂಗ- ಮುಕುಂದ, ಖಂಜಿರ- ಸುಬ್ರಮಣ್ಯ ಮೋಹಿತೆ, ತಬಲ- ಪುಟ್ಟರಾಜು. ಸಂಜೆ 6.
ಶ್ರೀ ಶಂಕರ ಜಯಂತಿ ಮಂಡಲಿ: ಶ್ರೀ ಶಂಕರ ಕೃಪಾ, ನಂ. 45, ಶ್ರೀ ಶಂಕರಕೃಪಾ ರಸ್ತೆ, 16ನೇ ಅಡ್ಡರಸ್ತೆ, 3ನೇ ಬಡಾವಣೆ, ಜಯನಗರ. `ತೈತ್ತಿರೀಯ ಉಪನಿಷತ್~ ವಿಷಯ ಕುರಿತ ಪ್ರವಚನ- ಡಾ. ಎಸ್. ನಾಗರಾಜು ಶರ್ಮಾ ಅವರಿಂದ. ಸಂಜೆ 6.30.
ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ನಂ. 68. ಎ. ಪಿ. ಕೆ. ರಸ್ತೆ, 2ನೇ ಬ್ಲಾಕ್, ತ್ಯಾಗರಾಜ ನಗರ. `ನಿತ್ಯ ಪ್ರವಚನ ಮಾಲೆ~ `ಶ್ವೇತಾಶ್ವತರೋಪನಿಷತ್ತು~ ವಿಷಯ ಕುರಿತ ಪ್ರವಚನ
ಶಿವರಾಮ ಜಿ. ಅಗ್ನಿಹೋತ್ರಿ ಅವರಿಂದ. ಪ್ರತಿದಿನ ಬೆಳಿಗ್ಗೆ 9.30ಕ್ಕೆ. (ಏಪ್ರಿಲ್ 10ರವರೆಗೆ)
ವೈಯಾಲಿಕಾವಲ್ ಎಕ್ಸ್‌ಟೆನ್ಷನ್ ಅಸೋಸಿಯೇಷನ್: 9ನೇ ಮುಖ್ಯರಸ್ತೆ, ವೈಯಾಲಿಕಾವಲ್. ಶ್ರೀ ರಾಮನವಮಿ ಕಾರ್ಯಕ್ರಮ ಪ್ರಯುಕ್ತ ಹನುಮಂತೋತ್ಸವ, ಬೆಳಿಗ್ಗೆ 10.30ಕ್ಕೆ. ಸಾಂಸ್ಕೃತಿಕ ಕಾರ್ಯಕ್ರಮ. ಹಾಡುಗಾರಿಕೆ- ಎನ್. ಹರಿಣಿ ಮತ್ತು ಎನ್. ಶಾರದ, ಪಿಟೀಲು- ಬಿ. ರಘುರಾಮ್, ಮೃದಂಗ- ವಿ. ಕೃಷ್ಣ, ಮೋರ್ಚಿಂಗ್- ಎಂ. ಗುರುರಾಜ್. ಸಂಜೆ 7ಕ್ಕೆ.
ಶ್ರೀ ವಾಣೀ ವಿದ್ಯಾ ಕೇಂದ್ರ: `ಶಾಮವನ~, ಸಿ. ಎ. ಸೈಟ್ ನಂ. 1, 4 `ಬಿ~ ಮುಖ್ಯರಸ್ತೆ, 3ನೇ ಹಂತ. ಬಸವೇಶ್ವರ ನಗರ, ಶ್ರೀ ರಾಮನವಮಿ ಸಂಗೀತೋತ್ಸವದಲ್ಲಿ `ತ್ರಿವೇಣಿ ರಸತರಂಗಿಣಿ~. ಪಿಟೀಲು (ದಕ್ಷಿಣಾದಿ)- ಡಾ. ಮೈಸೂರು ಮಂಜುನಾಥ್, ಗಾಯನ (ಹಿಂದೂಸ್ತಾನಿ)- ಜಯತೀರ್ಥ್ ಮೇವುಂಡಿ, ಪ್ರವೀಣ್ ಗೋಡ್ಖಿಂಡಿ (ಕೊಳಲು), ಮೃದಂಗ- ಪತ್ರಿ ಸತೀಶ್ ಕುಮಾರ್, ತಬಲ- ರವೀಂದ್ರ ಯಾವಗಲ್, ಹಾರ್ಮೋನಿಯಂ- ನರೇಂದ್ರ ನಾಯಕ್. ಸಂಜೆ 6.30.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.