ADVERTISEMENT

ಪ್ರಶಸ್ತಿ ಪ್ರದಾನ, ಕೃತಿ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 19:30 IST
Last Updated 3 ಡಿಸೆಂಬರ್ 2012, 19:30 IST

ಕನ್ನಡ ಗೆಳೆಯರ ಬಳಗ: ನಿರುದ್ಯೋಗ ಸಮಸ್ಯೆಯನ್ನು ಬಹುವಾಗಿ ಎದುರಿಸುತ್ತಿರುವ ಕನ್ನಡಿಗರ ಪರ ಚಿಂತಿಸಿ, ಯುವಜನರಿಗೆ ಸಮಸ್ಯೆಯ ಆಳ, ಪರಿಹಾರ ಮಾರ್ಗ ಸೂಚಿಸುವ ಉದ್ದೇಶದಿಂದ ಪತ್ರಕರ್ತ ಪ್ರೊ. ರವೀಂದ್ರ ರೇಶ್ಮೆ ಅವರು `ಕನ್ನಡಿಗರ ಉದ್ಯೋಗ ಸಮಸ್ಯೆ-ಪರಿಹಾರ' ಎಂಬ ಪುಸ್ತಕವನ್ನು ಹೊರತಂದಿದ್ದಾರೆ.

ಪುಸ್ತಕ ಲೋಕಾರ್ಪಣೆ ಹಾಗೂ ಶ್ರ.ದೇ. ಪಾರ್ಶ್ವನಾಥ ಅವರಿಗೆ `ಕನ್ನಡ ಚಿರಂಜೀವಿ', ಎನ್.ಶಂಕರಪ್ಪ ತೋರಣಗಲ್ಲು ಅವರಿಗೆ `ಕನ್ನಡ ಅರವಿಂದ' ಪ್ರಶಸ್ತಿ ಪ್ರದಾನ ಮತ್ತು ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮವನ್ನು ಮಂಗಳವಾರ (ಡಿ.4) ಹಮ್ಮಿಕೊಳ್ಳಲಾಗಿದೆ. ಉದ್ಘಾಟನೆ- ಮುಖ್ಯಮಂತ್ರಿ ಚಂದ್ರು. ಅಧ್ಯಕ್ಷತೆ- ಡಾ.ಎಂ. ಚಿದಾನಂದಮೂರ್ತಿ. ಪ್ರೊ.ಎಲ್.ಎಸ್. ಶೇಷಗಿರಿರಾವ್ ಅವರು ರಾ.ನಂ. ಚಂದ್ರಶೇಖರ್ ರಚಿಸಿರುವ `ಸ್ಥಳೀಯರಿಗೆ ಉದ್ಯೋಗ-ನನಸಾಗಬೇಕಾದ ಕನಸು' ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ.

ಸ್ಥಳೀಯರಿಗೆ ದೊರಕಬೇಕಾದ ಉದ್ಯೋಗಗಳ ಬಗ್ಗೆ ಸಂವಿಧಾನ ಏನು ಹೇಳುತ್ತದೆ, ಭಾರತದ ಬೇರೆ ಬೇರೆ ರಾಜ್ಯಗಳಿಂದ ಎದ್ದಿರುವ ಅದೇ ಬಗೆಯ ಕೂಗು, ಅಲ್ಲೆಲ್ಲಾ ಕೈಗೊಂಡಿರುವ ನಿರ್ಣಯಗಳು ಇವುಗಳನ್ನು ಕೃತಿಯಲ್ಲಿ ಕಲೆಹಾಕಿದ್ದಾರೆ. ಕಾರ್ಮಿಕ ವರ್ಗ, ಸಾರ್ವಜನಿಕರಿಗೂ ಉಪಯುಕ್ತವಾದ ಕಿರುಕೃತಿ ಇದಾಗಿದೆ.

ಅತಿಥಿ: ಡಾ. ವಿಜಯಾ. ಸ್ಥಳ: ಶ್ರೀಕೃಷ್ಣ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ. ಸಂಜೆ 5.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.