ADVERTISEMENT

ಫೋಟೊ ಮಾತಾಡುತಾವೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2012, 19:30 IST
Last Updated 26 ಜೂನ್ 2012, 19:30 IST
ಫೋಟೊ ಮಾತಾಡುತಾವೆ
ಫೋಟೊ ಮಾತಾಡುತಾವೆ   

ರಚನಾ ಶುಕ್ಲಾ ಅವರ ಛಾಯಾಚಿತ್ರಗಳು ಇದೇ 30ರವರೆಗೆ ನಂದಿದುರ್ಗ ರಸ್ತೆಯ ಜಯಮಹಲ್‌ನ ಸೆರೆನಿಟಿಯಲ್ಲಿ ಪ್ರದರ್ಶನಗೊಳ್ಳಲಿವೆ. 

 ಕಳೆದ ಕೆಲವು ವರ್ಷಗಳಲ್ಲಿ ರಚನಾ ಕ್ಲಿಕ್ಕಿಸಿದ ಅತ್ಯುತ್ತಮ ಚಿತ್ರಗಳು ಇಲ್ಲಿ ಪ್ರದರ್ಶಿತಗೊಳ್ಳಲಿವೆ. ವೈಟ್‌ಫೀಲ್ಡ್‌ನಲ್ಲಿ ಕೃತಿ ಸ್ಟುಡಿಯೋ ನಡೆಸುತ್ತಿರುವ ರಚನಾ ಆಸಕ್ತ ಛಾಯಾಗ್ರಾಹಕರಿಗಾಗಿ ಕಾರ್ಯಾಗಾರಗಳನ್ನೂ ನಡೆಸಿದ್ದಾರೆ.

ಕಪ್ಪು ಬಿಳುಪು ಇಲ್ಲವೇ, ಸೀಮಿತ ಬಣ್ಣಗಳ ಚಿತ್ರಗಳಿಗೇ ಆದ್ಯತೆ ನೀಡಿರುವುದು ಗಮನಾರ್ಹ. ಪ್ರಕೃತಿಯ ಸಹಜ ಸೌಂದರ್ಯವನ್ನು ಅದೇ ರೀತಿ ಸೆರೆಹಿಡಿಯುವುದು ರಚನಾ ಅವರ ವೈಶಿಷ್ಟ್ಯ.

ಅಮೆರಿಕ ಮೂಲದ ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದಾಗಲೇ ಛಾಯಾಚಿತ್ರದ ಹುಚ್ಚು ಬೆಳೆಸಿಕೊಂಡರು. `ಲ್ಯಾಂಡ್‌ಸ್ಕೇಪ್, ಪ್ರವಾಸ, ಪ್ರಾಣಿ ಸಂಕುಲ, ಅರಣ್ಯದ ಸೊಬಗನ್ನು ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಹಿಡಿಯುವುದು ಶ್ರೇಷ್ಠ ಸಂಗತಿಯಲ್ಲ. ಅದೇ ವಾಣಿಜ್ಯೀಕರಣಗೊಂಡ ಬದುಕಿನ ಮಜಲುಗಳನ್ನು ತೋರಿಸುವತ್ತ ಅನೇಕರು ಗಮನ ಹರಿಸುತ್ತಿಲ್ಲ.
 
ನನಗೆ ಅದೇ ಆಸಕ್ತಿಯ ಕ್ಷೇತ್ರವಾಯಿತು. ಫೋಟೊಗ್ರಫಿಯೂ ಲಲಿತ ಕಲೆಯ ಒಂದು ಭಾಗ. ಕಂಡದ್ದನ್ನು ಸೆರೆ ಹಿಡಿಯುವುದಾದರೂ ಅಲ್ಲಿ ಕೌಶಲ ಮುಖ್ಯ. ಒಂದು ಚೌಕಟ್ಟಿನ ಹಿಂದೆ ಹತ್ತಾರು ಕಾರಣಗಳಿರುತ್ತವೆ, ಕನಸಿರುತ್ತವೆ, ಪ್ರಯತ್ನವಿರುತ್ತದೆ. ಈ  ಸೌಂದರ್ಯ ಕೆಲವೊಮ್ಮೆ ನೋಡುಗನ ಕಣ್ಣಲ್ಲೂ ಅಡಗಿರುತ್ತದೆ ಎನ್ನುತ್ತಾರೆ ರಚನಾ. 

ಸುಂದರವಾದ ಗುಲಾಬಿಯ ಚಿತ್ರ ತೆಗೆದರೆ `ವ್ಹಾ.. ಎಷ್ಟು ಅದ್ಭುತವಾಗಿದೆ~ ಎಂಬ ಉದ್ಗಾರ ಹೊರಡಬಹುದು. ಅದರ ಹಿಂದಿರುವ ಚೌಕಟ್ಟು, ನೆರಳು, ಬೆಳಕು ಗೋಚರಿಸುವುದು ಕಲಾವಿದನಿಗೆ ಮಾತ್ರ. ಈ ಚಿತ್ರಗಳ ಪ್ರದರ್ಶನದಲ್ಲೂ ಅಷ್ಟೇ, ಯಾವ ಗಾತ್ರದಲ್ಲಿ ಪ್ರಿಂಟ್ ಹಾಕಿಸಬೇಕು ಎಂಬುದು ಕಲಾವಿದನಿಗೆ ಸವಾಲಾದ ಪ್ರಶ್ನೆಯೇ.

ಅದರಲ್ಲೂ ಕಲಾತ್ಮಕತೆ ಉಳಿಸಿಕೊಳ್ಳಬೇಕು. ಯಾವುದೇ ಚಿತ್ರ ಉತ್ತಮ ಎನಿಸಿಕೊಳ್ಳುವುದು ಅದು ವೀಕ್ಷಕನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಾಗ ಮಾತ್ರ ಎಂದು ವಿಶ್ಲೇಷಿಸುತ್ತಾರೆ.

ಇವರ ಫೊಟೋಗಳು ಇದೇ 30ರವರೆಗೆ ವೈಟ್‌ಫೀಲ್ಡ್‌ನ ಸೆರೆನಿಟಿಯಲ್ಲಿ ಪ್ರದರ್ಶನಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.