ADVERTISEMENT

ಭಾರತೀಯ ಕ್ರಾಫ್ಟ್ ಮೇಳ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST

ಕರಕುಶಲ, ಕೈಮಗ್ಗದ ಹಾಗೂ ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟ `ಭಾರತೀಯ ಕ್ರಾಫ್ಟ್ ಮೇಳ~ ರಾಜರಾಜೇಶ್ವರಿ ನಗರದ ಬಿಇಎಂಎಲ್ ಲೇಔಟ್‌ನ ಮೂರನೇ ಹಂತದಲ್ಲಿರುವ ಕೆಂಪೇಗೌಡ ಕ್ರೀಡಾಂಗಣದಲ್ಲಿ ಇದೇ 27ರವರೆಗೆ ನಡೆಯಲಿದೆ.

ಗೃಹೋಪಯೋಗಿ ವಸ್ತುಗಳನ್ನೆಲ್ಲಾ ಒಂದೇ ಸೂರಿನಡಿ ಸಿಗುವಂತೆ ಮಾಡಿರುವುದು ಈ ಮೇಳದ ವೈಶಿಷ್ಟ್ಯ.

ಪರಿಸರ ಪ್ರೇಮಿ ಉಡುಪು, ಕಾಶ್ಮೀರದ ಶಾಲು ಮತ್ತು ಸ್ಕಾಪ್, ಮೈಸೂರಿನ ಇನ್ಲೇ ಪೇಂಟಿಂಗ್ ಫ್ರೇಮ್‌ಗಳು, ಜೈಪುರದ ಜರೋಕ ಫ್ರೇಮ್‌ಗಳು, ಗೋಡೆ ಗಡಿಯಾರಗಳು, ಮರದಲ್ಲಿ ಕೆತ್ತನೆ ಮಾಡಿರುವ ಆಕರ್ಷಕ ಮೂರ್ತಿಗಳು, ತೂಗುಯ್ಯಾಲೆ, ತಂಜಾವೂರು ಪೇಂಟಿಂಗ್, ಉತ್ತರ ಪ್ರದೇಶದ ಸಾರಂಗಪುರದ ಕಾರ್ವ್ಡ್ ಮರದ ಪೀಠೋಪಕರಣಗಳು, ಹುಬ್ಬಳ್ಳಿ ಸೀರೆ, ಉತ್ತರ ಪ್ರದೇಶದ ಆಭರಣ, ಹೈದರಾಬಾದ್ ಮುತ್ತು, ಒಣ ಹೂಗಳು, ಬಂಜಾರ ಬ್ಯಾಗ್‌ಗಳು, ಪೋಚಂಪಲ್ಲಿ ಡ್ರೆಸ್ ಮೆಟೀರಿಯಲ್ಸ್, ಬೆಡ್‌ಶೀಟ್, ಕೈಯಿಂದ ತಯಾರಿಸಿದ ಕ್ವಿಲ್ಟೆಡ್ ಬೆಡ್‌ಶೀಟ್‌ಗಳು ಇಲ್ಲಿ ಸಿಗಲಿವೆ.

ಕುಶಲಕರ್ಮಿಗಳನ್ನು ಪ್ರೇರೇಪಿಸುವ ಹಾಗೂ ಸೊಗಸಾದ ವಸ್ತುಗಳ ಖರೀದಿಗೆ ಬೆಳಿಗ್ಗೆ 10.30ರಿಂದ ಸಂಜೆ 9.30ರೊಳಗಾಗಿ ಭೇಟಿ ನೀಡಿ.  ್ಢ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.