ADVERTISEMENT

ಭೀಮಾ ವಿವಿಯಾನ: ಆಭರಣದಲ್ಲೂ ಫ್ಯೂಷನ್

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 19:30 IST
Last Updated 21 ಫೆಬ್ರುವರಿ 2011, 19:30 IST
ಭೀಮಾ ವಿವಿಯಾನ: ಆಭರಣದಲ್ಲೂ ಫ್ಯೂಷನ್
ಭೀಮಾ ವಿವಿಯಾನ: ಆಭರಣದಲ್ಲೂ ಫ್ಯೂಷನ್   

ಷನ್ ಮ್ಯೂಸಿಕ್, ಫ್ಯೂಷನ್ ಡ್ಯಾನ್ಸ್‌ಗಳ ಬಗ್ಗೆ ಕೇಳಿದ್ದೀರಿ. ಆದರೆ ಫ್ಯೂಷನ್ ಜ್ಯುವೆಲ್ಲರಿ ಬಗ್ಗೆ ಕೇಳಿದ್ದೀರಾ? ಪಾರಂಪರಿಕ ಮತ್ತು ಸಮಕಾಲೀನ ವಿನ್ಯಾಸದ ಮಿಶ್ರಣಗಳ ‘ವಿವಿಯಾನ್’ ಫ್ಯೂಷನ್ ಆಭರಣ ಸಂಗ್ರಹಗಳನ್ನು ಈಗ ಹೊರತಂದಿದೆ ‘ಭೀಮಾ’.85 ವರ್ಷಗಳ ಸುದೀರ್ಘ ಇತಿಹಾಸವುಳ್ಳ ಭೀಮಾ, ಗುಣಮಟ್ಟದ ಚಿನ್ನ, ವಜ್ರ ಮತ್ತು ಅಮೂಲ್ಯ ಹರಳುಗಳ ಆಭರಣಗಳಿಗೆ ಹೆಸರುವಾಸಿ.

ಭಾರತ ಮತ್ತು ಐರೋಪ್ಯ ಶೈಲಿಯಿಂದ ಪ್ರೇರಣೆ ಪಡೆದು ನುರಿತ ವಿನ್ಯಾಸಗಾರರು ವಿವಿಯಾನ್ ಶೈಲಿಯನ್ನು ಶ್ರಮಪಟ್ಟು ರೂಪಿಸಿದ್ದಾರೆ. ಕ್ಲಾಸಿಕ್ ಡಿಸೈನ್‌ನಲ್ಲಿ ಸಮಕಾಲೀನ ಶೈಲಿ ಈ ಸಂಗ್ರಹದ ವಿಶೇಷ ಎನ್ನುತ್ತಾರೆ ‘ಭೀಮಾ’ದ ಮುಖ್ಯ ವಿನ್ಯಾಸಕಿ ಶಿಲ್ಪಾ.

ಇದರಲ್ಲಿ ತರಹೇವಾರಿ ಬ್ರಾಸ್‌ಲೆಟ್, ಓಲೆಗಳು, ರಿಂಗ್‌ಗಳಿವೆ. ಒಂದಕ್ಕಿಂತ ಮತ್ತೊಂದು ಸಂಪೂರ್ಣ ಭಿನ್ನ. ಅಂದರೆ ಒಂದು ರಿಂಗ್‌ನಂತೆ ಮತ್ತೊಂದಿಲ್ಲ. ಪ್ರತಿಯೊಂದು ಆಭರಣದ ವಿನ್ಯಾಸ, ಶೈಲಿ ವಿಭಿನ್ನ. ಇದೊಂದು ಎಕ್ಸ್‌ಕ್ಲೂಸಿವ್ ಕಲೆಕ್ಷನ್. ಇದರಲ್ಲಿ ಬಳಸಲಾದ ಪ್ರತಿಯೊಂದು ವಜ್ರವನ್ನು ಅತ್ಯಂತ ಜೋಪಾನವಾಗಿ ಆಯ್ಕೆ ಮಾಡಲಾಗಿದೆ. ವಿವಿಯಾನ್ ವಿನ್ಯಾಸ ರೂಪಿಸಲು 6 ತಿಂಗಳು ಹಿಡಿದಿದೆ ಎನ್ನುವುದು ಅವರ ವಿವರಣೆ. 

ಗ್ರಾಹಕರಿಗೆ ಇಷ್ಟವಾಗುವ ರೀತಿಯಲ್ಲಿ, ಮಾಡರ್ನ್ ಮತ್ತು ಟ್ರೆಂಡಿಯಾಗಿರುವ ಈ ಆಭರಣಗಳನ್ನು ಕೋರಮಂಗಲದ ಭೀಮಾ ಮಳಿಗೆಯಲ್ಲಿ ನೋಡಬಹುದಾಗಿದೆ. ಮಾಹಿತಿಗೆ: 2553 776.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT