ADVERTISEMENT

ಮಕ್ಕಳಾಟಕ್ಕೆ `ಫನ್‌ಸ್ಕೂಲ್'ನಿಂದ ಹೊಸ ಬಗೆ ಆಟಿಕೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2013, 19:59 IST
Last Updated 16 ಜೂನ್ 2013, 19:59 IST
ಮಕ್ಕಳಾಟಕ್ಕೆ `ಫನ್‌ಸ್ಕೂಲ್'ನಿಂದ ಹೊಸ ಬಗೆ ಆಟಿಕೆ
ಮಕ್ಕಳಾಟಕ್ಕೆ `ಫನ್‌ಸ್ಕೂಲ್'ನಿಂದ ಹೊಸ ಬಗೆ ಆಟಿಕೆ   

ಮಕ್ಕಳಿಗೆ ವಿವಿಧ ವಯೋಮಾನದಲ್ಲಿ ಬೌದ್ಧಿಕ ಮತ್ತು ದೈಹಿಕ ಕಸರತ್ತು ನೀಡುವ ಗುಣಮಟ್ಟದ ಆಟಿಕೆಗಳನ್ನು ತಯಾರಿಸುವ ಕಂಪೆನಿ `ಫನ್‌ಸ್ಕೂಲ್' ಇನ್ನಷ್ಟು ಹೊಸ ಬಗೆಯ ಆಟಿಕೆಗಳನ್ನು ಬಿಡುಗಡೆ ಮಾಡಿದೆ.

ರಜೆ ಕಳೆದು ಶಾಲೆಗೆ ಮರಳಿರುವ ಮಕ್ಕಳು ಮೆಚ್ಚುವಂಥ ಗೇಮ್‌ಗಳು, ಫಜಲ್‌ಗಳನ್ನು ಒಳಗೊಂಡಿರುವ `ಫನ್‌ಸ್ಕೂಲ್ ಸಮ್ಮರ್ ಕಲೆಕ್ಷನ್' ಶ್ರೇಣಿ ಇದಾಗಿದೆ.

ಪುಟ್ಟ ಕಂದಮ್ಮಗಳಿಗೆ ಬಟನ್ ನೋಸ್ ರ‌್ಯಾಟಲ್, ರೋಲರ್ ಪಲ್ಸ್ ರ‌್ಯಾಟಲ್ ಹಾಗೂ ಮಕ್ಕಳಿಗಾಗಿ ಡಿಸ್ನಿ ಕಾರ್ಸ್‌ ರೇಸ್, ಡಿಸ್ನಿ ಮಿಕ್ಕಿ ಮೌಸ್ ಅಂಡ್ ಫ್ರೆಂಡ್ಸ್, ಹಾವು-ಏಣಿ, ಮೈಟಿ ರಾಜು ಚೇಸ್ ಗೇಮ್ ಹಾಗೂ ಸೂಪರ್‌ಮ್ಯಾನ್- ಮ್ಯಾನ್ ಆಫ್ ಸ್ಟೀಲ್ ಫಜಲ್‌ಗಳು ಈ ಶ್ರೇಣಿಯಲ್ಲಿವೆ.

ಕಲಿಕೆ, ಸಾಹಸ ಪ್ರವೃತ್ತಿ ಹಾಗೂ ಬುದ್ಧಿಮತ್ತೆ ಹೆಚ್ಚಿಸುವ ಅಂಶಗಳಾಗಿ ನೆರವಾಗುವಂತೆ ಇವುಗಳನ್ನು ವಿನ್ಯಾಸ ಮಾಡಲಾಗಿರುವ ಈ ಆಟಿಕೆಗಳ ಆರಂಭಿಕ ಬೆಲೆ ರೂ 125.
ಹೆಚ್ಚಿನ ಮಾಹಿತಿಗೆ: www.funskool.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.