ADVERTISEMENT

ಮನೆಯಂಗಳದಲ್ಲಿ ಹೂ ಹಸೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2012, 19:30 IST
Last Updated 5 ಆಗಸ್ಟ್ 2012, 19:30 IST
ಮನೆಯಂಗಳದಲ್ಲಿ ಹೂ ಹಸೆ
ಮನೆಯಂಗಳದಲ್ಲಿ ಹೂ ಹಸೆ   

ಉಪಾಸನಾ ಸಂಸ್ಥೆಯ ತಿಂಗಳ ಕಾರ್ಯಕ್ರಮವಾದ `ಅಂಗಳದಲ್ಲಿ ಹೂ ಹಸೆ~ ರಮೇಶ ಅವರ ಮನೆಯಂಗಳದಲ್ಲಿ ನಡೆಯಿತು. ಉಪಾಸನಾ ಮೋಹನ್ ಸಂಗೀತ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವುದು ಈ ಕಾರ್ಯಕ್ರಮದ ಉದ್ದೇಶ.

ಮೊದಲ ಸರಣಿಯಲ್ಲಿ ಬಿ.ಎನ್. ಶಿಲ್ಪಕಲಾ, ವರ್ಷಾ ಸುರೇಶ್, ವಿಶ್ವಾಸ್ ವಸಿಷ್ಠ, ಸ್ವಾತಿ ರಾವ್, ಅಮೂಲ್ಯ ಶಾಸ್ತ್ರಿ, ಶ್ಲಾಘ್ಯ ವಸಿಷ್ಠ, ವೈಷ್ಣವಿ ಶ್ರೀವತ್ಸ ಹಾಗೂ ದೀಪ್ತಿ ರಮೇಶ ಭಾವಗೀತೆಗಳನ್ನು ಹಾಡಿ ರಂಜಿಸಿದರು.

ಉಪಾಸನಾ ಮೋಹನ್ ಅವರ ಸಂಗೀತ ನಿರ್ದೇಶನದಲ್ಲಿ `ನಿನ್ನೊಳಗೆ ನೀನಿರು ಮನವೆ~, `ಬಯಲಿನೊಳಗೆ ಯಾರೋ ಮರೆತ~, ಹದಿನಾರರ ವಯಸೇ~, `ಒಂದು ಹೊಳೆ ನೂರು ತೆರೆ~ ಮುಂತಾದ ಹಲವು ಸಾಹಿತಿಗಳ ಗೀತರಚನೆಗಳನ್ನು ಹಾಡಿದರು.

ಗಾಯಕರಾದ ಉಪಾಸನಾ ಮೋಹನ್, ಪಂಚಮ್ ಹಳಿಬಂಡಿ ಭಾವಗೀತೆಗಳನ್ನು ಹಾಡಿದರು. ಕಾರ್ಯಕ್ರಮವನ್ನು ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಉದ್ಘಾಟಿಸಿದರು. ಕವಯಿತ್ರಿ ರಂಜನಿ ಪ್ರಭು, ನಟ ಶ್ರಿನಿವಾಸಪ್ರಭು ಮತ್ತಿತರರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.