ADVERTISEMENT

ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2012, 19:30 IST
Last Updated 1 ಆಗಸ್ಟ್ 2012, 19:30 IST

ಆಗಸ್ಟ್ 2, ಗುರುವಾರ

ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮಠ: ನಂ 177/1, ಪ್ಲಾಟ್‌ಫಾರ್ಮ್‌ ರಸ್ತೆ, ರಾಜೀವ್‌ಗಾಂಧಿ ಸರ್ಕಲ್ ಹತ್ತಿರ, ಶೇಷಾದ್ರಿಪುರಂ. ರಾಘವೇಂದ್ರ ಗುರುಸಾರ್ವಭೌಮರ 341ನೇ ಆರಾಧನಾ ಮಹೋತ್ಸವದ ಪ್ರಯುಕ್ತ ಪಂಚರಾತ್ರೋತ್ಸವದಲ್ಲಿ ಬೆಳಿಗ್ಗೆ ವೇದಪಾರಾಯಣ, ಫಲಪಂಚಾಮೃತ, ಅಭಿಷೇಕ, ಕನಕಾಭಿಷೇಕ, ಶ್ರೀನಿಧಿ ಆಚಾರ್ಯ ಅವರಿಂದ `ಶ್ರೀ ರಾಘವೇಂದ್ರ ವಿಜಯ~ ಪ್ರವಚನ. ಸಂಜೆ ಸಂಗೀತೋತ್ಸವದಲ್ಲಿ ಎಸ್. ಅನಿರುದ್ಧ, ಪಲ್ಲವಿ ಪ್ರಸನ್ನ, ಶ್ರೀದೇವಿ, ಸರಯೂ, ಅನಂತ ಕುಲಕರ್ಣಿ ಅವರಿಂದ ದಾಸನಮನ ಹಾಗೂ ಜಯಲಕ್ಷ್ಮಿ ತಂಡದಿಂದ ಪಂಚವೀಣಾವಾದನ.

ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ: ಸೀತಾಪತಿ ಅಗ್ರಹಾರ. ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಪಂಚರಾತ್ರೋತ್ಸವದಲ್ಲಿ ಮಾದನೂರು ಪವಮಾನಾಚಾರ್ಯ ಅವರಿಂದ `ರಾಘವೇಂದ್ರ ವಿಜಯ~ ಪ್ರವಚನ. ಬೆಳಿಗ್ಗೆ 10. ಕೇಶವನಿಧಿ ತೀರ್ಥ ಶ್ರೀಪಾದಂಗಳವರಿಂದ ಧ್ವಜಾರೋಹಣ. ಸಂಜೆ 6.30. ಅನ್ವಿತ ಮತ್ತು ತಂಡದಿಂದ ಧನ್ಯಪೂಜಾ ದಾಸನಮನ. ಸಂಜೆ 7.

ADVERTISEMENT

ನವ ಮಂತ್ರಾಲಯ ಮಂದಿರ: ನಂ 52, ಬಸವಣ್ಣನ ಗುಡಿ ರಸ್ತೆ. ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದಲ್ಲಿ ಶಶಿಕುಮಾರ್ ತೀರ್ಥಹಳ್ಳಿ ಅವರಿಂದ ಭಕ್ತಿ ಸಂಗೀತ. ಸಂಜೆ 6.

ಗುರುರಾಘವೇಂದ್ರ ಸ್ವಾಮಿ ಟ್ರಸ್ಟ್: ಕೆ. ಆರ್. ಅಶ್ವತ್ಥನಾರಾಯಣ ರಸ್ತೆ, ಮಂಜುನಾಥನಗರ, ಪ್ರಸನ್ನ ಚಿತ್ರಮಂದಿರ ಸಮೀಪ, ಮಾಗಡಿ ರಸ್ತೆ. ಗುರುರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮ. ಅತಿಥಿಗಳು- ಟ್ರಸ್ಟ್ ಅಧ್ಯಕ್ಷ ಜಿ. ಮುನಿಸ್ವಾಮಪ್ಪ, ಕಾರ್ಯಾಧ್ಯಕ್ಷ ಎಂ. ವಿ. ರಾಮಚಂದ್ರ ಸಾ, ಉಪಾಧ್ಯಕ್ಷ ಕೆ. ತಿಮ್ಮಯ್ಯ. ಬೆಳಿಗ್ಗೆ 10. 30. ಜೂ. ಘಂಟಸಾಲ ಲಕ್ಷ್ಮಿಪತಿ, ಸಿ. ಕೆ. ರಮಾ ಅವರಿಂದ ಭಕ್ತಿ ಗೀತೆಗಳ ಗಾಯನ. ಸಂಜೆ 6.

ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠ: ಜಯನಗರ 5ನೇ ಬಡಾವಣೆ. ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಪ್ರಯುಕ್ತ ಸಪ್ತರಾತ್ರೊತ್ಸವದಲ್ಲಿ ಶಾಖೋತ್ಸವ. ಬೆಳಿಗ್ಗೆ 6ಕ್ಕೆ ಋಗ್ವೇದೀಯ- ಯಜುರ್ವೇದೀಯ ನಿತ್ಯ ನೂತನ ಉಪಾಕರ್ಮ. ಸಂಜೆ 7ಕ್ಕೆ ದಿವ್ಯಾ ಗಿರಿಧರ್ ಅವರಿಂದ ದಾಸವಾಣಿ ಕಾರ್ಯಕ್ರಮ.
ರಾಘವೇಂದ್ರ ಗುರು ಸೇವಾ ಮಂಡಳಿ: 145, 13ನೇ ಎ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಗೋಕುಲ 1ನೇ ಹಂತ, ಮತ್ತಿಕೆರೆ. ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದಲ್ಲಿ ಬೆಳಿಗ್ಗೆ 8ಕ್ಕೆ ಉಪಾಕರ್ಮ ಋಗ್ವೇದ ಮತ್ತು ಯಜುರ್ವೇದ. ಸಂಜೆ 6ಕ್ಕೆ ಗುರುಪಾಂಡುರಂಗವಿಠಲ ಅವರಿಂದ ಹರಿಕಥೆ.

ರಾಘವೇಂದ್ರ ಸೇವಾ ಸಮಿತಿ: 6ನೇ ಅಡ್ಡರಸ್ತೆ, ಸುಧೀಂದ್ರನಗರ (ಈಜುಕೊಳ ಬಡಾವಣೆ), ಮಲ್ಲೇಶ್ವರ. ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಮತ್ತು ಕೃಷ್ಣ ಜಯಂತಿ ಮಹೋತ್ಸವದಲ್ಲಿ ಋಗ್ವೇದ-ಯಜುರ್ವೇದ ಉಪಾಕರ್ಮ. ಧಾತು ಗೊಂಬೆಯಾಟ. ನಿರ್ದೇಶನ- ಅನುಪಮಾ ಹೊಸಕೆರೆ. `ಭಕ್ತಪ್ರಹ್ಲಾದ~.

ರಾಘವೇಂದ್ರ ಸ್ವಾಮಿಗಳವರ ಬೃಂದಾವನ ಸನ್ನಿಧಿ ಟ್ರಸ್ಟ್: 1106, 6ನೇ ಅಡ್ಡರಸ್ತೆ, 10ನೇ ಮುಖ್ಯರಸ್ತೆ, ಪ್ರಕಾಶನಗರ. ರಾಘವೇಂದ್ರ ಗುರುರಾಜರ ಆರಾಧನಾ ಮಹೋತ್ಸವದಲ್ಲಿ ಲಕ್ಷ್ಮೀಂದ್ರತೀರ್ಥ ಶ್ರೀಪಾದಂಗಳವರಿಂದ ಪ್ರಾರ್ಥನೋತ್ಸವ, ಧನಧಾನ್ಯ, ಗೋಪೂಜೆ ಮತ್ತು ಗ್ರಂಥಗಳ ಬಿಡುಗಡೆ. ಸಂಜೆ 6. ಅನಂತ ಕುಲಕರ್ಣಿ ಮತ್ತು ತಂಡದಿಂದ ದಾಸವಾಣಿ. ಸಂಜೆ 7.

ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ: ಪೂರ್ಣಪ್ರಜ್ಞ ನಗರ. ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಮತ್ತು ಚಾಂದ್ರ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ. ಬೆಳಿಗ್ಗೆ 6ಕ್ಕೆ ಚಾಂದ್ರ ಋಕ್, ಸೌರ-ಚಾಂದ್ರ ಯಜುರ್ ಉಪಾಕರ್ಮ ನೂತನ ಉಪಾಕರ್ಮ, ಸಂಜೆ 6ಕ್ಕೆ ಸುನೀತಾ ರಂಗನಾಥ್ ಮತ್ತು ತಂಡದಿಂದ ಭಕ್ತಿ ಸಂಗೀತ, 7.30ಕ್ಕೆ ಡಾ. ರಾಮಾಚಾರ್ಯ ಮಾಳಗಿ ಅವರಿಂದ `ರಾಯರ ಪವಾಡಗಳು~ ಕುರಿತು ಪ್ರವಚನ.

ಉತ್ತರಾದಿ ಮಠ: ದೇವಗಿರಿ ಮಠ, ಸತ್ಯಾತ್ಮತೀರ್ಥ ಸ್ವಾಮೀಜಿ ಅವರಿಂದ ಚಾತುರ್ಮಾಸ್ಯ ಪ್ರವಚನ. ಸಂಜೆ 4.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.