ADVERTISEMENT

ವಾಸ್ತವ ಕಟ್ಟಿಕೊಡುವ ‘ತಾಯವ್ವ’

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 19:30 IST
Last Updated 16 ಮಾರ್ಚ್ 2018, 19:30 IST
'ತಾಯವ್ವ’ ನಾಟಕದ ದೃಶ್ಯ
'ತಾಯವ್ವ’ ನಾಟಕದ ದೃಶ್ಯ   

ತಾಯವ್ವ ನಾಟಕವು ಸಮಕಾಲೀನ ನಾಗರಿಕತೆಯ ಸಂಕಟವನ್ನು ಪದರ ಪದರವಾಗಿ ನೋಡುಗರ ಎದುರು ತೆರೆದಿಡುತ್ತದೆ.

ಉಳ್ಳವರು ಸರಳ ಮತ್ತು ಶ್ರಮದ ಜೀವನವನ್ನು ರೂಪಿಸಿಕೊಳ್ಳಬೇಕೆನ್ನುತ್ತಾಳೆ ತಾಯವ್ವ. ಮ್ಯಾಕ್ಸಿಂ ಗಾರ್ಕಿ ರಚಿತ ಕಾದಂಬರಿ ‘ಮದರ್’ ಮತ್ತು ಅದೇ ಹೆಸರಿನಿಂದ ಪ್ರಸಿದ್ಧವಾದ ಬ್ರೆಕ್ಟ್‌ನ ನಾಟಕ ‘ತಾಯವ್ವ’ಗೆ ಸ್ಫೂರ್ತಿ. ಕೆಲ ತಿಂಗಳುಗಳ ಹಿಂದೆ ಕೈಉತ್ಪನ್ನಗಳಿಗೆ ಜಿಎಸ್‌ಟಿ ಕರ ವಿಧಿಸುವ ಕಾನೂನು ಜಾರಿಗೆ ಬಂದಿತು. ಗ್ರಾಮಸೇವಾ ಸಂಘವು ಈ ಕರದ ವಿರುದ್ಧ ಹೋರಾಟಕ್ಕೆ ಮುಂದಾಯಿತು. ಈ ಹೋರಾಟವೂ ‘ತಾಯವ್ವ’ನನ್ನು ರೂಪಿಸಿತು.

ಈ ನಾಟಕದ ಪ್ರಧಾನ ಪಾತ್ರ ತಾಯವ್ವ ಓರ್ವ ವಿಧವೆ ಹಾಗೂ ಸ್ವಾರ್ಥಿ. ಅವಳ ಮಗ ಕೈಕರ್ಮಿಗಳ ಬಗ್ಗೆ ಕಾಳಜಿಗಳುಳ್ಳ ಕಾರ್ಯಕರ್ತ. ಹೋರಾಟದಲ್ಲಿ ಭಾಗವಹಿಸುತ್ತಿರುವ ಅವನನ್ನು ಕಾಪಾಡಲು ತಾಯವ್ವ ಪ್ರಯತ್ನಿಸುತ್ತಾಳೆ. ಹೋರಾಟದ ಸಂದರ್ಭ ಪೊಲೀಸರು ಅವನನ್ನು ಕೊಲ್ಲುತ್ತಾರೆ. ನಂತರ ತಾಯವ್ವ ಹೋರಾಟಗಾರ್ತಿ ಆಗುತ್ತಾಳೆ. ಪ್ರಕೃತಿದತ್ತ ಸರಳತೆ ಮತ್ತು ಸಹಬಾಳ್ವೆಗಳನ್ನು ಒಳಗೊಂಡ ತೃಪ್ತಿಕರ ಜೀವನವನ್ನು ಆನಂದದಿಂದ ಸಂಭ್ರಮಿಸುವ ದಾರಿಯನ್ನು ತೋರುತ್ತಾಳೆ.

ADVERTISEMENT

**

ತಾಯವ್ವ ನಾಟಕ ಪ್ರದರ್ಶನ: ರಚನೆ ಮತ್ತು ನಿರ್ದೇಶನ– ಪ್ರಸನ್ನ, ಸಂಗೀತ– ಎಂ.ಡಿ.ಪಲ್ಲವಿ, ಆಯೋಜನೆ– ರಾಗಿಕಣ. ಸ್ಥಳ– ರಂಗಶಂಕರ, ಜೆ.ಪಿ.ನಗರ ಎರಡನೇ ಹಂತ, ಭಾನುವಾರ ಮಧ್ಯಾಹ್ನ 3.30 ಮತ್ತು ರಾತ್ರಿ 7.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.