ADVERTISEMENT

ಶಮಿಕಾ ರಂಗಪ್ರವೇಶ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 19:30 IST
Last Updated 23 ಫೆಬ್ರುವರಿ 2012, 19:30 IST

ಸುಪರ್ಣಾ ವೆಂಕಟೇಶ್ ಶಿಷ್ಯೆ ಶಮಿಕಾ ಬಿ.ಅವರ ಭರತನಾಟ್ಯ ರಂಗಪ್ರವೇಶ ಶುಕ್ರವಾರ (ಫೆ.24) ಎಡಿಎ ರಂಗಮಂದಿರದಲ್ಲಿ ನಡೆಯಲಿದೆ.

ಭರತನಾಟ್ಯದ ಜ್ಯೂನಿಯರ್ ಹಾಗೂ ಸೀನಿಯರ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ ಶಮಿಕಾ ಹೊರದೇಶಗಳಲ್ಲೂ ನೃತ್ಯ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ. ಇದರೊಂದಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಶೃಂಗಾರಮ್ಮ ಹಾಗೂ  ಕಥಕ್ ನೃತ್ಯವನ್ನು ಮೈಸೂರು ಬಿ.ನಾಗರಾಜ್ ಅವರ ಬಳಿ ಅಭ್ಯಸಿಸುತ್ತಿದ್ದಾರೆ.

ಮಲ್ಲೇಶ್ವರಂನ ಎಂಇಎಸ್ ಕಾಲೇಜಿನಲ್ಲಿ ಪದವಿ ಪಡೆದಿರುವ ಈಕೆಯ ಸಾಧನೆಯ ಹಿಂದೆ ತಾಯಿ ಸರಳಾ ಹಾಗೂ ಬಿ.ಶರತ್ ಕುಮಾರ್ ಅವರ ಪ್ರೋತ್ಸಾಹವೂ ಇದೆ.

ಸುಪರ್ಣಾ ವೆಂಕಟೇಶ್ (ನಟುವಾಂಗ), ಬಾಲಸುಬ್ರಹ್ಮಣ್ಯ ಶರ್ಮ (ಗಾಯನ), ಜಿ.ಗುರುಮೂರ್ತಿ (ಮೃದಂಗ), ಸಿ ಮಧುಸೂದನ್(ವಯಲಿನ್), ಎಚ್.ಎಸ್. ವೇಣುಗೋಪಾಲ್ (ಕೊಳಲು) ಡಿ.ಎಸ್.ಪ್ರಸನ್ನ (ಮೋರ್ಚಿಂಗ್)ನಲ್ಲಿ ಸಹಕರಿಸುವರು.
ಅತಿಥಿಗಳು: ಗುರೂಜಿ ಲಕ್ಷ್ಮಿ ಶ್ರೀನಿವಾಸ್, ಲಕ್ಷ್ಮಿ ಗೋಪಾಲಸ್ವಾಮಿ.
ಸ್ಥಳ: ಎಡಿಎ ರಂಗಮಂದಿರ, ರವೀಂದ್ರ ಕಲಾಕ್ಷೇತ್ರದ ಎದುರು, ಜೆ.ಸಿ.ರಸ್ತೆ. ಸಂಜೆ 6.15.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.