ADVERTISEMENT

ಶಾಂತಿಗಾಗಿ ವಯಲಿನ್

​ಪ್ರಜಾವಾಣಿ ವಾರ್ತೆ
Published 4 ಜನವರಿ 2011, 8:25 IST
Last Updated 4 ಜನವರಿ 2011, 8:25 IST
ಶಾಂತಿಗಾಗಿ ವಯಲಿನ್
ಶಾಂತಿಗಾಗಿ ವಯಲಿನ್   

ವಯಲಿನ್‌ಗೆ ‘ಸೋಲೋ ಕಛೇರಿ’ ನಡೆಸುವಷ್ಟು ಮಹತ್ವ ತಂದುಕೊಟ್ಟ  ದಿ. ವಿ.ಲಕ್ಷ್ಮೀನಾರಾಯಣ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಬುಧವಾರ ‘ವಯಲಿನ್ ಜಾಗತಿಕ ಉತ್ಸವ’ ಕಛೇರಿ ನಡೆಯಲಿದೆ.

ಲಕ್ಷ್ಮೀನಾರಾಯಣ ಅವರ ಪುತ್ರ, ಹೆಸರಾಂತ ವಯಲಿನ್ ವಾದಕ ಎಲ್.ಸುಬ್ರಹ್ಮಣ್ಯಂ ತಂದೆಯ ನೆನಪಿಗಾಗಿ ಕಳೆದ ಇಪ್ಪತ್ತು ವರ್ಷಗಳಿಂದ  ಈ ಉತ್ಸವ ನಡೆಸಿಕೊಂಡು ಬಂದಿದ್ದಾರೆ. ಈ ಸಲ ಲಕ್ಷ್ಮೀನಾರಾಯಣ  ಅವರ ಜನ್ಮ ಶತಮಾನೋತ್ಸವವಾದ್ದರಿಂದ ಉತ್ಸವವೂ ವಿಶೇಷವಾಗಿದೆ. ‘ವಯಲಿನ್ ಫಾರ್ ಪೀಸ್’ (ಶಾಂತಿಗಾಗಿ ವಯಲಿನ್) ಎಂಬುದು ಈ ಸಲದ ಥೀಮ್. ‘ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್’ನ ಮಾಧ್ಯಮ ಸಹಭಾಗಿತ್ವವಿರುವ ಈ ಉತ್ಸವದಲ್ಲಿ ವಿವಿಧ ದೇಶಗಳ ವಯಲಿನ್ ವಾದಕರು ಪಾಲ್ಗೊಳ್ಳಲಿದ್ದಾರೆ.

ಅಮೆರಿಕದ ಮಾರ್ಕ್ ಒಕಾನರ್, ರಷ್ಯಾದ ಜಿಪ್ಸಿ ಬ್ಯಾಂಡ್ ‘ಲೋಯ್ಕಾ’ (ಸರ್ಜಿ ಎರ್ಡೆಂಕೊ, ವ್ಲಾದಿಮಿರ್ ಬೆಸೊನೊವ್, ಮೈಕಲ್ ಸವಿಶೆವ್ ಅವರನ್ನೊಳಗೊಂಡ ಸಂಗೀತಗಾರರ ತಂಡ), ಅಲ್ಜೀರಿಯಾದ ಖೇರ್ ಎಡಿನೆ, ಬಾರೋಕ್ ವಾದನದಲ್ಲಿ ವಿಖ್ಯಾತರಾಗಿರುವ ಬೆನೆಡಿಕ್ಟ್ ಮೌರ್ಸೆಟ್, ಪಾಶ್ಚಾತ್ಯ ವಯಲಿನ್‌ನಲ್ಲಿ ಅನುಭವಿ ಎನ್ನಿಸಿಕೊಂಡ ಕ್ಯಾಥರಿನ್ ಚೆನ್, ಖುದ್ದು ಎಲ್.ಸುಬ್ರಮಣ್ಯಂ ಹಾಗೂ ಅವರ ಮಗ ಅಂಬಿ- ಎಲ್ಲರೂ ವಯಲಿನ್ ರಸದೌತಣ ನೀಡಲಿದ್ದಾರೆ.

ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್. ಸಂಜೆ 7. ಪ್ರವೇಶ ಉಚಿತ, ಪಾಸ್ ಅಗತ್ಯವಿಲ್ಲ. ಆದರೆ ಮೊದಲು ಬಂದವರಿಗೆ ಆದ್ಯತೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.