ADVERTISEMENT

‘ಶಿಕ್ಷಕಿ ಆಗುವ ಆಸೆಯಿತ್ತು’

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 19:30 IST
Last Updated 12 ಏಪ್ರಿಲ್ 2018, 19:30 IST
ಕರಿಷ್ಮಾ ಕೋಟಕ್ (ಚಿತ್ರಕೃಪೆ: bhawanaverma.com)
ಕರಿಷ್ಮಾ ಕೋಟಕ್ (ಚಿತ್ರಕೃಪೆ: bhawanaverma.com)   

ಮಾಡೆಲ್ ಆಗಿ ಬಣ್ಣದ ಲೋಕಕ್ಕೆ ಬಂದ ಕರಿಷ್ಮಾ ಕೋಟಕ್‌ ‘ಬಿಗ್‌ಬಾಸ್‌’ ಕಣ್ಣಿಗೆ ಬಿದ್ದು ಹೆಸರು ಮಾಡಿದ ನಂತರ ಐಪಿಎಲ್ ಸರಣಿಗಳಲ್ಲಿ ನಿರೂಪಕಿಯಾಗಿ ಮಿಂಚಿದರು. ನಟಿಯಾಗಿ ಬೆಳ್ಳಿತೆರೆಯಲ್ಲೂ ಕರಾಮತ್ತು ತೋರಿದರು. ಇಷ್ಟಾದ ನಂತರವೂ ‘ನಿಮ್ಮ ಇಷ್ಟದ ಕೆಲಸ ಯಾವುದು?’ ಎಂದು ಕೇಳಿದರೆ, ‘ಕಿರುತೆರೆಯಲ್ಲಿ ನಿರೂಪಕಿಯಾಗಿರುವುದು ನನ್ನ ಮೊದಲ ಆಯ್ಕೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

‘ಫಿರ್ಕೀ’ (ಕರಿಷ್ಮಾರ ಮುಂದಿನ ಚಿತ್ರ) ತಾನಾಗಿಯೇ ನನ್ನನ್ನು ಹುಡುಕಿಕೊಂಡು ಬಂತು. ‘ಫ್ರೀಕಿ ಆಲಿ’ಗಾಗಿ (2016) ನವಾಜುದ್ದೀನ್ ಸಿದ್ದಿಕಿ ಜೊತೆಗೆ ನಟಿಸಿದ್ದು ಖುಷಿಕೊಡ್ತು. ಇಷ್ಟೆಲ್ಲಾ ಇದ್ದರೂ, ನನ್ನ ಗಮನವೆಲ್ಲಾ ಟಿವಿ ನಿರೂಪಣೆಯ ಕಡೆಗೇ ಇರುತ್ತದೆ. ನಾನು ಅದನ್ನು ಖುಷಿಯಿಂದ ಅನುಭವಿಸುತ್ತೇನೆ. ಸ್ಟೇಡಿಯಂನಂಥ ಮತ್ತೊಂದು ಜಾಗ ನನಗೆ ಗೊತ್ತಿಲ್ಲ. ಕ್ರಿಕೆಟ್ ಇರಲಿ, ಕಬಡ್ಡಿಯೇ ಆಗಲಿ. 50 ಸಾವಿರ ಜನರು ಖುಷಿಯಿಂದ ಚೀರುವಾಗ ನನಗೂ ಖುಷಿಯಾಗುತ್ತೆ. ನಾನೂ ಆ ಖುಷಿಯನ್ನು ಅನುಭವಿಸುತ್ತೇನೆ’ ಎನ್ನುತ್ತಾರೆ ಕರಿಷ್ಮಾ.

‘ನನಗೆ 21 ವರ್ಷವಿದ್ದಾಗ ಟೀಚರ್ ಆಗಬೇಕು ಎಂಬ ಆಸೆ ಬೆಟ್ಟದಷ್ಟಿತ್ತು. ಮಾರ್ಕೆಟಿಂಗ್‌ನಲ್ಲಿ ಪದವಿ ಪಡೆದೆ. ಮುಂಬೈನಲ್ಲಿ ಒಂದು ವರ್ಷ ಮಾಡೆಲಿಂಗ್ ಮಾಡಬೇಕು ಅಂದುಕೊಂಡಿದ್ದೆ. ಹೀಗೆ ಅಂದುಕೊಂಡು 12 ವರ್ಷಗಳಾದವು ನೋಡಿ. ಈವರೆಗೂ ಬಣ್ಣದ ನಂಟು ಹೋಗಿಲ್ಲ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ADVERTISEMENT

‘ಫಿರ್ಕೀ’ಯಲ್ಲಿ ಕರಿಷ್ಮಾ ಜೊತೆಗೆ ಕರಣ್‌ ಸಿಂಗ್ ಗ್ರೋವರ್, ನೀಲ್ ನಿತಿನ್ ಮುಖೇಶ್ ಮತ್ತು ಸಂದೀಪ್ ಮುಖ್ಯಭೂಮಿಕೆಯಲ್ಲಿದ್ದಾರೆ. ಅಂಕುಶ್ ಭಟ್ ನಿರ್ದೇಶನದ ಈ ಥ್ರಿಲ್ಲರ್ ಸಿನಿಮಾ ಜುಲೈ 1ಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.