ADVERTISEMENT

ಶಿಬಿರ, ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 19:30 IST
Last Updated 12 ಅಕ್ಟೋಬರ್ 2012, 19:30 IST

ದಸರಾ ರಜಾ ಶಿಬಿರ
ಸ್ಕೂಲ್ ಆಫ್ ಸಕ್ಸಸ್ ಸಂಸ್ಥೆಯು  ದಸರಾ ಹಬ್ಬದ ಪ್ರಯುಕ್ತ ವಿಶೇಷ  ಶಿಬಿರವನ್ನು ಹಮ್ಮಿಕೊಂಡಿದೆ.

ಆರು ದಿನಗಳ ಅವಧಿಯ ಈ ಶಿಬಿರ ಭಾರತದ ಸಂಸ್ಕೃತಿಯನ್ನು ಪರಿಚಯಿಸುವ ಹಲವು ಸಂಗತಿಗಳನ್ನು ಒಳಗೊಳ್ಳಲಿದೆ.

ಮಕ್ಕಳಿಗೆ ಮನರಂಜನೆಯೊಂದಿಗೆ ಮಾಹಿತಿಯನ್ನೂ ನೀಡುವ ಉದ್ದೇಶದಿಂದ `ಸೆಟ್ ಅಪ್ ಯುವರ್ ಓನ್ ಡಾಲ್ ಡಿಸ್ಪ್ಲೇ~, `ನೋ ಫ್ಲೇಮ್ ಕುಕಿಂಗ್~, ಕಾಸ್ಟ್ಯೂಮ್ ಪಾರ್ಟಿ, ಇಂಟೆರಾಕ್ಟಿವ್ ಸ್ಟೋರೀಸ್, ನೃತ್ಯ, ಮೆಹಂದಿ, ರಂಗೋಲಿ, ಆಟಿಕೆ, ಮಣ್ಣಿನ ಕಲೆ, ಸಾಂಪ್ರದಾಯಿಕ ಆಟಗಳು,  ಹೀಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ.
 
ಅಕ್ಟೋಬರ್ 15ರಿಂದ 20ರವರೆಗೆ ನಡೆಯಲಿರುವ ಈ ಶಿಬಿರದಲ್ಲಿ 4ರಿಂದ 10 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದು. ಸಮಯ- ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.

ಸ್ಥಳ: ಸ್ಕೂಲ್ ಆಫ್ ಸಕ್ಸೆಸ್, 270,14ನೇ ಅಡ್ಡರಸ್ತೆ, ಇಂದಿರಾನಗರ. ಸಂಪರ್ಕಿಸಿ: 9663400443.

ಉಚಿತ ತರಬೇತಿ

ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್) ಸಬ್‌ಇನ್‌ಸ್ಪೆಕ್ಟರ್ ನೇಮಕಾತಿ ಸಂದರ್ಶನಕ್ಕೆ ಅರ್ಹರಾದ ಅಭ್ಯರ್ಥಿಗಳಿಗೆ ಮಲ್ನಾಡ್ ಕೋಚಿಂಗ್ ಸೆಂಟರ್ ಶನಿವಾರ ಒಂದು ದಿನದ ಉಚಿತ ತರಬೇತಿ ಶಿಬಿರ ಹಮ್ಮಿಕೊಂಡಿದೆ.

ಶಿಬಿರದಲ್ಲಿ ಸಂದರ್ಶನವನ್ನು ಎದುರಿಸುವ ಬಗೆ ಕುರಿತು ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು. ಅರ್ಹ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು. ಸ್ಥಳ: ನಂ.50, ಎಂ.ಎಚ್.ಆರ್.ಲೇಔಟ್, ಸಪ್ತಗಿರಿ ಕಾಲೇಜು ಹತ್ತಿರ, ಹೆಸರುಘಟ್ಟ ಮುಖ್ಯರಸ್ತೆ. ಮಾಹಿತಿಗೆ: 98450 68233, 98865 79123.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.