ADVERTISEMENT

ಸಂಚಾರ ಪೊಲೀಸರನ್ನು ನೇಮಿಸಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 19:30 IST
Last Updated 17 ಮಾರ್ಚ್ 2014, 19:30 IST

ಆರ್‌.ಪಿ.ಸಿ. ಲೇಔಟ್‌ನ ವಾರ್ಡ್ ನಂ. 132 ಅತ್ತಿಗುಪ್ಪೆ ಬಸ್‌ ನಿಲ್ದಾಣದ ಹತ್ತಿರ ಪಾದಚಾರಿಗಳು ರಸ್ತೆಯನ್ನು ದಾಟುವ ಜಾಗದಲ್ಲಿ ವಿಜಯನಗರ, ದೀಪಾಂಜಲಿನಗರ, ಮೈಸೂರು ರಸ್ತೆ, ಹಂಪಿನಗರ ಹಾಗೂ ಅತ್ತಿಗುಪ್ಪೆಯ ಸಣ್ಣ ಸಣ್ಣ ಗಲ್ಲಿಗಳಿಂದ ವಾಹನಗಳು ಅತಿವೇಗವಾಗಿ ಸಂಚರಿಸುವುದರಿಂದ ಬೆಳಗಿನ ವೇಳೆ ಶಾಲೆಗೆ ಹೋಗುವ ಮಕ್ಕಳು ರಸ್ತೆ ದಾಟಲು ಹರಸಾಹಸ ಮಾಡಬೇಕು.

ವಯೋವೃದ್ಧರಂತೂ ತುಂಬಾ ಪರದಾಡಬೇಕು. ಹೊಸದಾಗಿ ಸಿಗ್ನಲ್‌ ಅಳವಡಿಸಿ ಎರಡು ತಿಂಗಳಾಗಿದ್ದು, ಅದು ಕಾರ್ಯನಿರ್ವಹಿಸಿದ್ದು ಎರಡೇ ದಿನ. ತುರ್ತಾಗಿ ಸಂಚಾರ ಪೊಲೀಸರನ್ನು ನೇಮಿಸಿ, ಮುಂದೆ ಆಗಬಹುದಾದ ಅಪಘಾತಗಳನ್ನು ತಪ್ಪಿಸಬೇಕಿದೆ.
–ರಾಮಕೃಷ್ಣ, ಕಾರ್ಯದರ್ಶಿ, ಸಿನಿಮಾ ವರ್ಕರ್ಸ್‌ ಯೂನಿಯನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.